ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಮ್ಮ ಕ್ರೈಸ್ತ ಜೀವನ

ಸೇವೆಯಲ್ಲಿ ನಿಪುಣರಾಗಲು ಸಹಾಯಕಗಳು—ಸಮರ್ಪಣೆ ಮಾಡಿ, ದೀಕ್ಷಾಸ್ನಾನ ತೆಗೆದುಕೊಳ್ಳುವಂತೆ ಪ್ರಗತಿಹೊಂದಲು ಬೈಬಲ್‌ವಿದ್ಯಾರ್ಥಿಗಳಿಗೆ ಸಹಾಯಮಾಡಿ

ಸೇವೆಯಲ್ಲಿ ನಿಪುಣರಾಗಲು ಸಹಾಯಕಗಳು—ಸಮರ್ಪಣೆ ಮಾಡಿ, ದೀಕ್ಷಾಸ್ನಾನ ತೆಗೆದುಕೊಳ್ಳುವಂತೆ ಪ್ರಗತಿಹೊಂದಲು ಬೈಬಲ್‌ವಿದ್ಯಾರ್ಥಿಗಳಿಗೆ ಸಹಾಯಮಾಡಿ

ಏಕೆ ಪ್ರಾಮುಖ್ಯ: ಯೆಹೋವನ ಸಂರಕ್ಷಣೆ ಸಿಗಬೇಕಾದರೆ ಬೈಬಲ್‌ ವಿದ್ಯಾರ್ಥಿಗಳು ತಮ್ಮ ಜೀವನವನ್ನು ಆತನಿಗೆ ಸಮರ್ಪಿಸಬೇಕು ಮತ್ತು ದೀಕ್ಷಾಸ್ನಾನ ಪಡೆಯಬೇಕು. (1ಪೇತ್ರ 3:21) ನಂತರ, ಯಾರು ತಮ್ಮ ಸಮರ್ಪಣೆಗನುಸಾರ ನಡೆಯುತ್ತಾರೋ ಅವರಿಗೆ ಆಧ್ಯಾತ್ಮಿಕ ಸಂರಕ್ಷಣೆ ಸಿಗುತ್ತದೆ. (ಕೀರ್ತ 91:1, 2) ಒಬ್ಬ ಕ್ರೈಸ್ತನು ಸಮರ್ಪಿಸಿಕೊಳ್ಳುವುದು ಯಾವುದೇ ಮನುಷ್ಯರಿಗೆ, ಕೆಲಸಕ್ಕೆ ಅಥವಾ ಸಂಘಟನೆಗಲ್ಲ, ಬದಲಾಗಿ ಯೆಹೋವನಿಗೆ. ಹಾಗಾಗಿ ಬೈಬಲ್‌ ವಿದ್ಯಾರ್ಥಿಗಳು ದೇವರ ಮೇಲೆ ಪ್ರೀತಿ ಮತ್ತು ಆತನ ಕಡೆಗೆ ಕೃತಜ್ಞತೆ ಬೆಳೆಸಿಕೊಳ್ಳುವುದು ಅವಶ್ಯ.—ರೋಮ 14:7, 8.

ಹೇಗೆ ಮಾಡುವುದು:

  • ಅಧ್ಯಯನದಲ್ಲಿರುವ ವಿಷಯ ಯೆಹೋವನ ಬಗ್ಗೆ ಏನು ಹೇಳುತ್ತಿದೆ ಎಂದು ಅಧ್ಯಯನ ಮಾಡುವಾಗ ಚರ್ಚಿಸಿ. ಪ್ರತಿದಿನ ಬೈಬಲ್‌ ಓದುವುದಕ್ಕೆ ಮತ್ತು “ಎಡಬಿಡದೆ” ಪ್ರಾರ್ಥಿಸುವುದಕ್ಕೆ ಹೆಚ್ಚಿನ ಒತ್ತು ನೀಡಿ.—1ಥೆಸ 5:17; ಯಾಕೋ 4:8

  • ಸಮರ್ಪಣೆ ಮತ್ತು ದೀಕ್ಷಾಸ್ನಾನವನ್ನು ಆಧ್ಯಾತ್ಮಿಕ ಗುರಿಗಳನ್ನಾಗಿ ಇಟ್ಟುಕೊಳ್ಳುವಂತೆ ವಿದ್ಯಾರ್ಥಿಯನ್ನು ಪ್ರೋತ್ಸಾಹಿಸಿ. ಅದರೊಂದಿಗೆ, ಕೂಟಗಳಲ್ಲಿ ಉತ್ತರಕೊಡುವ ಅಥವಾ ನೆರೆಮನೆಯವರಿಗೆ ಮತ್ತು ಸಹೋದ್ಯೋಗಿಗಳಿಗೆ ಸಾರುವಂಥ ಬೇರೆ ಚಿಕ್ಕ ಗುರಿಗಳನ್ನು ಮುಟ್ಟುವಂತೆ ಸಹಾಯಮಾಡಿ. ಆದರೆ ನೆನಪಿಡಿ, ತನ್ನನ್ನು ಆರಾಧಿಸಬೇಕೆಂದು ಯೆಹೋವನು ಯಾರಿಗೂ ಬಲವಂತ ಮಾಡುವುದಿಲ್ಲ. ಸಮರ್ಪಣೆ ಪ್ರತಿಯೊಬ್ಬರ ವೈಯಕ್ತಿಕ ನಿರ್ಧಾರ.—ಧರ್ಮೋ 30:19, 20

  • ಯೆಹೋವನನ್ನು ಮೆಚ್ಚಿಸಲು ಮತ್ತು ದೀಕ್ಷಾಸ್ನಾನಕ್ಕೆ ಅರ್ಹನಾಗಲು ಬೇಕಾದ ಬದಲಾವಣೆಗಳನ್ನು ಮಾಡಿಕೊಳ್ಳುವಂತೆ ವಿದ್ಯಾರ್ಥಿಯನ್ನು ಉತ್ತೇಜಿಸಿ. (ಜ್ಞಾನೋ 27:11) ಕೆಲವೊಂದು ಗುಣಗಳು ಮತ್ತು ಹವ್ಯಾಸಗಳು ವಿದ್ಯಾರ್ಥಿಗಳಲ್ಲಿ ಆಳವಾಗಿ ಬೇರೂರಿರಬಹುದು. ಆದ್ದರಿಂದ ತಮ್ಮ ಹಳೇ ವ್ಯಕ್ತಿತ್ವವನ್ನು ತೆಗೆದು ಹೊಸ ವ್ಯಕ್ತಿತ್ವವನ್ನು ಧರಿಸಿಕೊಳ್ಳಲು ಅವರಿಗೆ ಸತತ ಸಹಾಯದ ಅಗತ್ಯವಿರಬಹುದು. (ಎಫೆ 4:22-24) ಕಾವಲಿನಬುರುಜುವಿನಲ್ಲಿ ಬರುವ “ಬದುಕು ಬದಲಾದ ವಿಧ” ಎಂಬ ಸರಣಿ ಲೇಖನಗಳನ್ನು ತೋರಿಸಿ

  • ಯೆಹೋವನ ಸೇವೆ ಮಾಡುವಾಗ ನಿಮಗೆ ಸಿಕ್ಕಿದ ಅನುಭವಗಳನ್ನು ಅವರೊಂದಿಗೆ ಹಂಚಿಕೊಳ್ಳಿ.—ಯೆಶಾ 48:17, 18