ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಬೈಬಲಿನಲ್ಲಿರುವ ರತ್ನಗಳು | ಕೀರ್ತನೆ 87–91

ಸರ್ವಶಕ್ತನ ಆಶ್ರಯಸ್ಥಾನದಲ್ಲಿರಿ

ಸರ್ವಶಕ್ತನ ಆಶ್ರಯಸ್ಥಾನದಲ್ಲಿರಿ

ಯೆಹೋವನ ‘ಆಶ್ರಯಸ್ಥಾನವು’ ಆಧ್ಯಾತ್ಮಿಕ ಸಂರಕ್ಷಣೆ ಕೊಡುತ್ತದೆ

91:1, 2, 9-14

  • ಇಂದು ನಾವು ಯೆಹೋವನ ಆಶ್ರಯಸ್ಥಾನದಲ್ಲಿ ಇರಬೇಕಾದರೆ ಸಮರ್ಪಣೆ ಮತ್ತು ದೀಕ್ಷಾಸ್ನಾನ ಅಗತ್ಯ

  • ದೇವರಲ್ಲಿ ಭರವಸೆ ಇಡದವರಿಗೆ ಈ ಸ್ಥಳದ ಪರಿಚಯವಿಲ್ಲ

  • ದೇವರ ಮೇಲಿನ ಪ್ರೀತಿ ಹಾಗೂ ನಂಬಿಕೆಯನ್ನು ನಾಶಮಾಡುವ ಯಾವುದೇ ವಿಷಯ ಮತ್ತು ಯಾವುದೇ ವ್ಯಕ್ತಿಯು ಯೆಹೋವನ ಆಶ್ರಯಸ್ಥಾನದಲ್ಲಿ ಇರುವವರ ಮೇಲೆ ಪ್ರಭಾವ ಬೀರಲು ಸಾಧ್ಯವಿಲ್ಲ

‘ಬೇಟೆಗಾರನು’ ನಮ್ಮನ್ನು ಹಿಡಿಯಲು ಪ್ರಯತ್ನಿಸುತ್ತಾನೆ

91:3

  • ಹಕ್ಕಿಗಳು ತುಂಬ ಚುರುಕಾಗಿರುವುದರಿಂದ ಅವುಗಳನ್ನು ಹಿಡಿಯುವುದು ಕಷ್ಟ

  • ಬೇಟೆಗಾರರು ಹಕ್ಕಿಗಳ ಚಟುವಟಿಕೆಗಳನ್ನು ಗಮನಿಸಿ ಅವುಗಳನ್ನು ಹಿಡಿಯಲು ಉಪಾಯ ಮಾಡುತ್ತಾನೆ

  • ‘ಬೇಟೆಗಾರನಾದ’ ಸೈತಾನನು ಯೆಹೋವನ ಜನರನ್ನು ಚೆನ್ನಾಗಿ ಗಮನಿಸಿ ಆಧ್ಯಾತ್ಮಿಕವಾಗಿ ಸರ್ವನಾಶಮಾಡಲು ಉಪಾಯ ಮಾಡುತ್ತಾನೆ

ಸೈತಾನನು ಬಳಸುವ ನಾಲ್ಕು ಮಾರಣಾಂತಿಕ ಉರುಲುಗಳು:

  • ಮನುಷ್ಯರ ಭಯ

  • ವಸ್ತುಗಳ ಆಸೆ

  • ಕೆಟ್ಟ ಮನೋರಂಜನೆ

  • ಮನಸ್ತಾಪಗಳು