ನಮ್ಮ ಕ್ರೈಸ್ತ ಜೀವನ
ಸತ್ಯವನ್ನು ತಿಳಿಸಿ
ಸೆಪ್ಟೆಂಬರ್ ತಿಂಗಳಿನಿಂದ ಆರಂಭಿಸಿ, ಜೀವನ ಮತ್ತು ಸೇವೆ ಕೂಟದ ಕೈಪಿಡಿಯಲ್ಲಿ ಹೊಸ ರೀತಿಯ ಮಾದರಿ ನಿರೂಪಣೆಗಳಿರುತ್ತವೆ. ಇದರ ಹೆಸರು “ಸತ್ಯವನ್ನು ಕಲಿಸಿ” ಎಂದಾಗಿದೆ. ಇದರ ಉದ್ದೇಶ, ಪ್ರಶ್ನೆ ಮತ್ತು ವಚನವೊಂದನ್ನು ಉಪಯೋಗಿಸಿ ಜನರಿಗೆ ಒಂದು ಬೈಬಲ್ ಸತ್ಯವನ್ನು ತಿಳಿಸುವುದೇ ಆಗಿದೆ.
ಆಸಕ್ತಿ ಇರುವವರಿಗೆ ಸಾಹಿತ್ಯ ನೀಡಿ ಅಥವಾ jw.orgನಿಂದ ವಿಡಿಯೋ ತೋರಿಸಿ ಮುಂದಿನ ಭೇಟಿಗಾಗಿ ತಳಪಾಯ ಹಾಕಿ. ಅವರ ಆಸಕ್ತಿ ಹೆಚ್ಚಿಸಲು ಕೆಲವೇ ದಿನಗಳಲ್ಲಿ ಪುನಃ ಭೇಟಿ ಮಾಡಿ. ಹೊಸ ನಿರೂಪಣೆಗಳು ಮತ್ತು ವಿದ್ಯಾರ್ಥಿ ನೇಮಕಗಳು ಬೈಬಲ್ ನಮಗೆ ಏನು ಕಲಿಸುತ್ತದೆ? ಪುಸ್ತಕದಲ್ಲಿರುವ ‘ನಾನೇನು ಕಲಿತೆ?’ ಎಂಬುದರ ಮೇಲೆ ಆಧರಿತವಾಗಿರುತ್ತವೆ. ಬೈಬಲನ್ನು ಮಾತ್ರ ಉಪಯೋಗಿಸಿ ಪುನರ್ಭೇಟಿಗಳನ್ನು ಅಥವಾ ಬೈಬಲ್ ಅಧ್ಯಯನವನ್ನು ಮಾಡಲು ಬೇಕಾದ ಪ್ರಶ್ನೆಗಳು ಮತ್ತು ವಚನಗಳು ಅದರಲ್ಲಿವೆ.
ಜೀವಕ್ಕೆ ನಡೆಸುವ ಮಾರ್ಗ ಒಂದೇ. (ಮತ್ತಾ 7:13, 14) ನಾವು ಬೇರೆ ಬೇರೆ ಧರ್ಮಗಳ, ಹಿನ್ನೆಲೆಗಳ ಜನರಿಗೆ ಸಾರುವುದರಿಂದ ಪ್ರತಿಯೊಬ್ಬರಿಗೆ ಇಷ್ಟವಾಗುವಂಥ ಬೈಬಲ್ ಸತ್ಯಗಳನ್ನು ತಿಳಿಸಬೇಕು. (1ತಿಮೊ 2:4) ಹಾಗಾಗಿ, ನಾವು ಬೇರೆ ಬೇರೆ ಬೈಬಲ್ ವಿಷಯಗಳ ಬಗ್ಗೆ ಚೆನ್ನಾಗಿ ತಿಳಿದುಕೊಂಡಿರಬೇಕು, “ಸತ್ಯವಾಕ್ಯವನ್ನು ಸರಿಯಾದ ರೀತಿಯಲ್ಲಿ” ಉಪಯೋಗಿಸುವ ನೈಪುಣ್ಯತೆಯನ್ನು ಬೆಳೆಸಿಕೊಳ್ಳಬೇಕು. (2ತಿಮೊ 2:15) ಹೀಗೆ ಮಾಡಿದರೆ, ನಮ್ಮ ಸಂತೋಷ ಹೆಚ್ಚುತ್ತದೆ ಮತ್ತು ಬೇರೆಯವರಿಗೆ ಸತ್ಯವನ್ನು ತಿಳಿಸುವುದರಲ್ಲಿ ಯಶಸ್ವಿಗಳೂ ಆಗುತ್ತೇವೆ.