ಮಾದರಿ ನಿರೂಪಣೆಗಳು
ಸತ್ತವರು ಮತ್ತೆ ಬದುಕಿ ಬರುತ್ತಾರಾ? (T-35 ಮುಖಪುಟ)
ಪ್ರಶ್ನೆ: ಮನೆಯವರಿಗೆ ಸತ್ತವರು ಮತ್ತೆ ಬದುಕಿ ಬರುತ್ತಾರಾ? ಕರಪತ್ರವನ್ನು ಕೊಟ್ಟು, “ನಾವು ಎಲ್ಲರಿಗೆ ಇವತ್ತು ಇದನ್ನು ಕೊಡುತ್ತಾ ಇದೀವಿ. ಇದರಲ್ಲಿ ತುಂಬ ಜನ ಕೇಳೋ ಪ್ರಶ್ನೆಗೆ ಉತ್ತರ ಇದೆ” ಎಂದು ಹೇಳಿ. ಕರಪತ್ರದ ಶೀರ್ಷಿಕೆ ತೋರಿಸುತ್ತಾ, “ನಿಮಗೇನನಿಸುತ್ತೆ? ಹೌದು? ಇಲ್ಲ? ಇರಬಹುದೇನೋ?” ಎಂದು ಕೇಳಿ.
ಕರಪತ್ರ ಕೊಡುವಾಗ ಹೀಗೆ ಹೇಳಿ: ಈ ಪ್ರಶ್ನೆಗೆ ಪವಿತ್ರ ಗ್ರಂಥ ಏನು ಉತ್ತರ ಕೊಡುತ್ತೆ ಅಂತ ಇದರಲ್ಲಿದೆ.
ವಚನ: 1 ಕೊರಿಂ 15:26
ಸತ್ತವರು ಮತ್ತೆ ಬದುಕಿ ಬರುತ್ತಾರಾ? (T-35 2ನೇ ಪುಟ)
ಪ್ರಶ್ನೆ: ನಮಗಿಷ್ಟವಾಗಿರೋ ಎಷ್ಟೋ ಜನರನ್ನು ನಾವು ಮರಣದಲ್ಲಿ ಕಳೆದುಕೊಂಡಿದ್ದೇವೆ. ಅವರನ್ನು ಮತ್ತೆ ಯಾವತ್ತಾದರೂ ನೋಡೋಕಾಗುತ್ತಾ ಅಂತ ಯಾವತ್ತಾದರೂ ನೀವು ಯೋಚಿಸಿದ್ದೀರಾ?
ವಚನ: ಅಕಾ 24:15
ಕರಪತ್ರ ಕೊಡುವಾಗ ಹೀಗೆ ಹೇಳಿ: ಇದನ್ನು ತಿಳಿದುಕೊಳ್ಳುವುದರಿಂದ ನಿಮಗೇನು ಪ್ರಯೋಜನ ಅಂತ ಈ ಕರಪತ್ರ ಹೇಳುತ್ತೆ.
ದೇವರ ಮಾತನ್ನು ಆಲಿಸಿ ಸದಾಕಾಲ ಜೀವಿಸಿ
ಪ್ರಶ್ನೆ: ಕಷ್ಟ ಬಂದಾಗ ಜನರು ಸಾಮಾನ್ಯವಾಗಿ ದೇವ್ರಿಗೆ ಪ್ರಾರ್ಥನೆ ಮಾಡ್ತಾರೆ. ಆದ್ರೆ ದೇವ್ರು ನಮ್ಮ ಪ್ರಾರ್ಥನೆ ಕೇಳಿ ಉತ್ತರ ಕೊಡ್ತಾನಾ? ನಿಮಗೇನನಿಸುತ್ತೆ?
ವಚನ: 1 ಪೇತ್ರ 3:12
ಕಿರುಹೊತ್ತಗೆ ಕೊಡುವಾಗ ಹೀಗೆ ಹೇಳಿ: ಈ ಕಿರುಹೊತ್ತಗೆ ದೇವರ ಬಗ್ಗೆ ಬೈಬಲ್ ಬೋಧಿಸುವ ಇನ್ನೂ ಹಲವು ವಿಷಯಗಳನ್ನು ತಿಳಿಸುತ್ತೆ. [ಪುಟ 24 ಮತ್ತು 25ನ್ನು ತೋರಿಸಿ.]
ನಿಮ್ಮ ಸ್ವಂತ ನಿರೂಪಣೆಯನ್ನು ಕೆಳಗೆ ಬರೆಯಿರಿ
ಮೇಲಿನ ಉದಾಹರಣೆಗಳನ್ನು ನೋಡಿ ಅದರಂತೆಯೇ ಕ್ಷೇತ್ರ ಸೇವೆಗಾಗಿ ನಿಮ್ಮ ಸ್ವಂತ ನಿರೂಪಣೆಯನ್ನು ತಯಾರಿಸಿ.