ಹತ್ತು ಮೈನಾ ಹಣದ ದೃಷ್ಟಾಂತದಿಂದ ಪಾಠಗಳು
ಈ ದೃಷ್ಟಾಂತದ ಪ್ರತಿಯೊಂದು ಅಂಶ ಯಾವುದನ್ನು ಅಥವಾ ಯಾರನ್ನು ಪ್ರತಿನಿಧಿಸುತ್ತದೆ?
-
ಯಜಮಾನನು ಯೇಸುವನ್ನು ಪ್ರತಿನಿಧಿಸುತ್ತಾನೆ
-
ಆಳುಗಳು ಯೇಸುವಿನ ಅಭಿಷಿಕ್ತ ಶಿಷ್ಯರನ್ನು ಪ್ರತಿನಿಧಿಸುತ್ತಾರೆ
-
ಆಳುಗಳಿಗೆ ಯಜಮಾನ ಕೊಟ್ಟ ಹಣ ಶಿಷ್ಯರನ್ನು ಮಾಡುವ ಅಮೂಲ್ಯ ಸುಯೋಗವನ್ನು ಸೂಚಿಸುತ್ತದೆ
ಯೇಸುವಿನ ಅಭಿಷಿಕ್ತ ಶಿಷ್ಯರು ಒಬ್ಬ ದುಷ್ಟ ಆಳಿನಂತೆ ನಡಕೊಂಡರೆ ಫಲಿತಾಂಶ ಕೆಟ್ಟದಾಗಿರುತ್ತದೆ ಎಂಬ ಎಚ್ಚರಿಕೆಯನ್ನು ಈ ದೃಷ್ಟಾಂತ ಕೊಡುತ್ತದೆ. ತನ್ನ ಶಿಷ್ಯರು ತಮ್ಮೆಲ್ಲಾ ಶಕ್ತಿ, ಸಮಯ, ಸ್ವತ್ತುಗಳನ್ನು ಹೆಚ್ಚು ಶಿಷ್ಯರನ್ನು ಮಾಡುವ ಕೆಲಸಕ್ಕೆ ಬಳಸಬೇಕು ಎಂದು ಯೇಸು ಬಯಸುತ್ತಾನೆ.
ಶಿಷ್ಯರನ್ನು ಮಾಡುವ ಕೆಲಸದಲ್ಲಿ ನಂಬಿಗಸ್ತ ಅಭಿಷಿಕ್ತ ಕ್ರೈಸ್ತರನ್ನು ನಾನು ಹೇಗೆ ಅನುಕರಿಸಬಹುದು?