ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಮ್ಮ ಕ್ರೈಸ್ತ ಜೀವನ

ನಿನ್ನ ಸಹೋದರನಿಗೋಸ್ಕರವೂ ಯೇಸು ಸತ್ತನು

ನಿನ್ನ ಸಹೋದರನಿಗೋಸ್ಕರವೂ ಯೇಸು ಸತ್ತನು

ಯೇಸು ಅಪರಿಪೂರ್ಣ ಮನುಷ್ಯರಿಗೋಸ್ಕರ ತನ್ನ ಜೀವ ಕೊಟ್ಟನು. (ರೋಮ 5:8) ಆತನು ನಮ್ಮನ್ನು ಪ್ರೀತಿಸುವುದರಿಂದ ತನ್ನ ಜೀವ ಕೊಟ್ಟನು. ಇದನ್ನು ನಾವು ಮಾನ್ಯಮಾಡುತ್ತೇವೆ ಎನ್ನುವುದರಲ್ಲಿ ಸಂಶಯವಿಲ್ಲ. ಆದರೆ ಯೇಸು ನಮ್ಮ ಸಹೋದರನಿಗೋಸ್ಕರವೂ ಜೀವ ಕೊಟ್ಟನು ಎಂದು ನಾವು ಮರೆಯಬಾರದು. ನಮ್ಮಂತೆ ಅಪರಿಪೂರ್ಣರಾಗಿರುವ ನಮ್ಮ ಸಹೋದರ ಸಹೋದರಿಯರಿಗೆ ನಾವು ಹೇಗೆ ಕ್ರಿಸ್ತನಂತೆ ಪ್ರೀತಿ ತೋರಿಸಬಹುದು? ಮೂರು ವಿಧಗಳಲ್ಲಿ: [1] ಬೇರೆ ಹಿನ್ನೆಲೆಯಿಂದ ಬಂದಿರುವವರನ್ನೂ ಸ್ನೇಹಿತರಾಗಿ ಮಾಡಿಕೊಳ್ಳಬಹುದು. (ರೋಮ 15:7; 2ಕೊರಿಂ 6:12,13) [2] ಬೇರೆಯವರಿಗೆ ನೋವಾಗುವಂತೆ ಮಾತಾಡಬಾರದು, ಬೇಜಾರಾಗುವಂತೆ ನಡಕೊಳ್ಳಬಾರದು. (ರೋಮ 14:13-15) [3] ಯಾರಾದರೂ ನಮ್ಮ ವಿರುದ್ಧ ಪಾಪಮಾಡಿದರೆ ನಾವು ತಕ್ಷಣ ಕ್ಷಮಿಸಬೇಕು. (ಲೂಕ 17:3, 4; 23:34) ಈ ವಿಧಗಳಲ್ಲಿ ನಾವು ಯೇಸುವನ್ನು ಅನುಕರಿಸಲು ಪ್ರಯತ್ನಿಸಿದರೆ ಯೆಹೋವನು ಸಭೆಯಲ್ಲಿ ಶಾಂತಿ ಮತ್ತು ಐಕ್ಯತೆ ಇರುವಂತೆ ನೋಡಿಕೊಳ್ಳುತ್ತಾನೆ.

ನಿಮ್ಮ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಿ ವಿಡಿಯೋ ನೋಡಿ, ನಂತರ ಈ ಪ್ರಶ್ನೆಗಳನ್ನು ಉತ್ತರಿಸಿ:

  • ಮಿಕೀಗೆ ತನ್ನ ಸಭೆಯವರ ಬಗ್ಗೆ ಮೊದಮೊದಲು ಹೇಗನಿಸುತ್ತಿತ್ತು?

  • ಅವಳ ಅನಿಸಿಕೆ ಬದಲಾಗಲು ಕಾರಣವೇನು?

  • ತನ್ನ ದೃಷ್ಟಿಕೋನವನ್ನು ಸರಿಪಡಿಸಿಕೊಳ್ಳಲು ಮಿಕೀಗೆ ಯೇಸುವಿನ ಉದಾಹರಣೆ ಹೇಗೆ ಸಹಾಯ ಮಾಡಿತು? (ಮಾರ್ಕ 14:38)

  • ನಮ್ಮ ಜೊತೆ ಕ್ರೈಸ್ತರ ಬಗ್ಗೆ ಒಳ್ಳೇದಾಗಿ ಯೋಚಿಸಲು ಜ್ಞಾನೋಕ್ತಿ 19:11 ಹೇಗೆ ಸಹಾಯ ಮಾಡುತ್ತದೆ?