ನಮ್ಮ ಕ್ರೈಸ್ತ ಜೀವನ
ಯುವ ಜನರೇ-‘ಸತ್ಕ್ರಿಯೆಗಳಲ್ಲಿ ಹುರುಪುಳ್ಳವರಾಗಿರಿ’
‘ಎಲ್ಲಾ ರೀತಿಯಲ್ಲಿ ಉತ್ತಮ ಕಾರ್ಯಗಳಿಗೆ ಮಾದರಿಯಾಗಿರು’ ಮತ್ತು ಇದಕ್ಕಾಗಿ ಸರ್ವಪ್ರಯತ್ನ ಮಾಡಬೇಕೆಂದು ಪೌಲ ತೀತನಿಗೆ ಬರೆದ. (ತೀತ 2:6, 7) ಈ ದೇವಪ್ರೇರಿತ ಮಾತು ಎಲ್ಲಾ ಯುವಕರಿಗೆ ಅನ್ವಯ ಆಗುತ್ತೆ. ಅದೇ ಅಧ್ಯಾಯದಲ್ಲಿ ಪೌಲ, ಯೆಹೋವನ ಜನರು “ಸತ್ಕ್ರಿಯೆಗಳಲ್ಲಿ ಹುರುಪುಳ್ಳವರಾಗಿ” ಇರಲು ಯೇಸು ಅವರನ್ನು ಶುದ್ಧೀಕರಿಸುವುದರ ಬಗ್ಗೆ ಹೇಳಿದ. (ತೀತ 2:14) ಈ ಸತ್ಕ್ರಿಯೆಗಳಲ್ಲಿ ಒಂದು, ದೇವರ ರಾಜ್ಯದ ಬಗ್ಗೆ ಸಾರುವುದು ಮತ್ತು ಕಲಿಸುವುದೇ ಆಗಿದೆ. ಪ್ರೀತಿಯ ಯುವಜನರೇ, ನೀವು ನಿಮ್ಮ ಶಕ್ತಿಯನ್ನು ಸಹಾಯಕ ಪಯನೀಯರ್ ಅಥವಾ ರೆಗ್ಯುಲರ್ ಪಯನೀಯರ್ ಆಗಿ ಕೆಲಸ ಮಾಡುವುದರಲ್ಲಿ ಬಳಸಬಹುದಲ್ವಾ? —ಜ್ಞಾನೋ 20:29.
ನೀವು ಪಯನೀಯರ್ ಆಗಬೇಕಂದ್ರೆ, ಚೆನ್ನಾಗಿ ಪ್ಲಾನ್ ಮಾಡಬೇಕು. (ಲೂಕ 14: 28-30) ಉದಾಹರಣೆಗೆ, ನೀವು ಪಯನೀಯರಿಂಗ್ ಮಾಡುವಾಗ ನಿಮ್ಮ ಖರ್ಚುಗಳನ್ನು ಹೇಗೆ ನೋಡ್ಕೊಳ್ತೀರಿ? ತಾಸುಗಳು ಹೇಗೆ ಮುಟ್ಟುತ್ತೀರಿ? ನಿಮ್ಮ ಸನ್ನಿವೇಶ ಏನೇ ಆಗಿರಲಿ, ಈ ವಿಷಯದ ಬಗ್ಗೆ ಯೆಹೋವನಿಗೆ ಪ್ರಾರ್ಥನೆ ಮಾಡಿ. (ಕೀರ್ತ 37:5) ನಿಮ್ಮ ಗುರಿ ಬಗ್ಗೆ ಹೆತ್ತವರ ಜೊತೆ ಮತ್ತು ಅನುಭವಿ ಪಯನೀಯರ್ ಜೊತೆ ಮಾತಾಡಿ. ಆಮೇಲೆ ಕೆಲಸಕ್ಕೆ ಕೈ ಹಾಕಿ. ನಿಮ್ಮ ಹುರುಪಿನ ಪ್ರಯತ್ನವನ್ನು ಯೆಹೋವ ದೇವರು ಖಂಡಿತ ಆಶೀರ್ವದಿಸುತ್ತಾನೆ.
“ಯುವ ಜನರು—ಯೆಹೋವನನ್ನು ಗೌರವಿಸುತ್ತಾರೆ” ಎಂಬ ವಿಡಿಯೋ ನೋಡಿ. ನಂತರ ಈ ಪ್ರಶ್ನೆಗಳಿಗೆ ಉತ್ತರ ಕೊಡಿ:
-
ಕೆಲವು ಪಯನೀಯರರು ಯಾವ ಅಡೆತಡೆಗಳನ್ನು ಎದುರಿಸಬೇಕಾಯಿತು? ಅವರದನ್ನು ಹೇಗೆ ಜಯಿಸಿದರು?
-
ರೆಗ್ಯುಲರ್ ಪಯನೀಯರ್ ಆಗಲು, ಮಕ್ಕಳಿಗೆ ಹೆತ್ತವರು ಹೇಗೆಲ್ಲಾ ಸಹಾಯ ಮಾಡಬಹುದು?
-
ಸೇವೆಗಾಗಿ ಒಂದು ಪಟ್ಟಿ ಇರೋದು ಯಾಕೆ ಮುಖ್ಯ?
-
ಪಯನೀಯರರಿಗೆ ಸಭೆಯ ಸದಸ್ಯರು ಹೇಗೆಲ್ಲಾ ಉತ್ತೇಜನ ಮತ್ತು ಸಹಾಯ ಕೊಡಬಹುದು?
-
ಪಯನೀಯರರಿಗೆ ಯಾವ ಆಶೀರ್ವಾದಗಳು ಸಿಗುತ್ತವೆ?