ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಬೈಬಲಿನಲ್ಲಿರುವ ರತ್ನಗಳು | ಯೋಬ 21-27

ಯೋಬ ತನಗೆ ಕೆಟ್ಟ ಯೋಚನೆಗಳು ಬರದಂತೆ ನೋಡಿಕೊಂಡನು

ಯೋಬ ತನಗೆ ಕೆಟ್ಟ ಯೋಚನೆಗಳು ಬರದಂತೆ ನೋಡಿಕೊಂಡನು

ಯೆಹೋವನ ಸೇವಕರನ್ನು ನಿರುತ್ತೇಜಿಸಲು ಸೈತಾನನು ಸುಳ್ಳುಗಳನ್ನು ಹೇಳುತ್ತಾನೆ. ಸೈತಾನನ ಸುಳ್ಳುಗಳಿಗೂ ಯೆಹೋವನ ಭಾವನೆಗಳಿಗೂ ಇರುವ ವ್ಯತ್ಯಾಸಗಳನ್ನು ಯೋಬ ಪುಸ್ತಕದಲ್ಲಿ ಗಮನಿಸಿ. ಯೆಹೋವನು ನಮ್ಮ ಬಗ್ಗೆ ಕಾಳಜಿವಹಿಸುತ್ತಾನೆಂದು ತೋರಿಸುವ ಇತರ ಬೈಬಲ್‌ ವಚನಗಳನ್ನು ಪಟ್ಟಿಮಾಡಿ.

ಸೈತಾನನ ಸುಳ್ಳುಗಳು

ಯೆಹೋವನ ಭಾವನೆಗಳು

ದೇವರು ಕಠೋರಿ. ತನ್ನ ಸೇವಕರು ಮಾಡುವ ಯಾವ ಕೆಲಸವೂ ಇಷ್ಟ ಆಗುವುದಿಲ್ಲ. ಯಾರೂ ಆತನನ್ನು ಮೆಚ್ಚಿಸಲು ಸಾಧ್ಯ ಇಲ್ಲ (ಯೋಬ 4:18; 25:5)

ಯೆಹೋವನು ತನ್ನ ಸೇವಕರ ಪ್ರತಿಯೊಂದು ಪ್ರಯತ್ನವನ್ನು ಇಷ್ಟಪಡುತ್ತಾನೆ (ಯೋಬ 36:5)

ದೇವರ ದೃಷ್ಟಿಯಲ್ಲಿ ಮನುಷ್ಯ ಪ್ರಯೋಜನಕ್ಕೆ ಬಾರದವನು (ಯೋಬ 22:2)

ನಾವು ನಂಬಿಗಸ್ತರಾಗಿ ಸೇವೆ ಮಾಡುವಾಗ ದೇವರದನ್ನು ಅಮೂಲ್ಯವೆಂದೆಣಿಸಿ ಆಶೀರ್ವದಿಸುತ್ತಾನೆ (ಯೋಬ 33:26; 36:11)

ನಾವು ನೀತಿವಂತರಾಗಿದ್ದರೂ ಇಲ್ಲದಿದ್ದರೂ ದೇವರು ತಲೆಕೆಡಿಸಿಕೊಳ್ಳುವುದಿಲ್ಲ (ಯೋಬ 22:3)

ಯೆಹೋವನು ನೀತಿವಂತರನ್ನು ಪೋಷಿಸಿ, ಸಂರಕ್ಷಿಸುತ್ತಾನೆ (ಯೋಬ 36:7)