ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ | ಯೋಬ 33-37

ಉತ್ತೇಜನ ನೀಡುವಂಥ ಸಲಹೆ ಕೊಡುವವನೇ ನಿಜ ಸ್ನೇಹಿತ

ಉತ್ತೇಜನ ನೀಡುವಂಥ ಸಲಹೆ ಕೊಡುವವನೇ ನಿಜ ಸ್ನೇಹಿತ

ಯೋಬನ ಹತ್ತಿರ ಎಲೀಫಜ, ಬಿಲ್ದದ ಮತ್ತು ಚೋಫರ ಮಾತಾಡಿದ್ದರು. ಆದರೆ ಎಲೀಹು ಹೇಳಿದ ವಿಷಯ ಮತ್ತು ಮಾತಾಡಿದ ವಿಧ ಅವರಿಗಿಂತ ತುಂಬಾ ಭಿನ್ನವಾಗಿತ್ತು. ಎಲೀಹು ಒಬ್ಬ ಒಳ್ಳೇ ಸ್ನೇಹಿತ, ಉತ್ತಮ ಸಲಹೆಗಾರ ಮತ್ತು ಮಾದರಿಯಾಗಿದ್ದನು.

ಉತ್ತಮ ಸಲಹೆಗಾರನಲ್ಲಿ ಇರಬೇಕಾದ ಗುಣಗಳು

ಎಲೀಹು ಒಳ್ಳೇ ಮಾದರಿ ಇಟ್ಟನು

32:4-7, 11, 12; 33:1

 

  • ತಾಳ್ಮೆ

  • ಗಮನಿಸುವಿಕೆ

  • ಗೌರವ

 
  • ವಯಸ್ಸಿನಲ್ಲಿ ತನಗಿಂತ ದೊಡ್ಡವರಾಗಿದ್ದ ಆ ಮೂವರು ಮಾತಾಡುವವರೆಗೆ ಎಲೀಹು ತಾಳ್ಮೆಯಿಂದ ಕಾದನು

  • ಗಮನಕೊಟ್ಟು ಕೇಳಿದ್ದರಿಂದ ಸಲಹೆ ಕೊಡುವ ಮೊದಲು ವಿಷಯವನ್ನು ಸರಿಯಾಗಿ ಅರ್ಥಮಾಡಿಕೊಳ್ಳಲು ಅವನಿಗೆ ಸಾಧ್ಯವಾಯಿತು

  • ಯೋಬನ ಹೆಸರೆತ್ತಿ ಒಬ್ಬ ಸ್ನೇಹಿತನಂತೆ ಮಾತಾಡಿದನು

 

33:6, 7, 32

 

  • ದೀನತೆ

  • ಸ್ನೇಹಪರತೆ

  • ಸಹಾನುಭೂತಿ

 
  • ಎಲೀಹು ದೀನ ಮತ್ತು ದಯಾಭರಿತ ವ್ಯಕ್ತಿಯಾಗಿದ್ದು ತನ್ನ ಅಪರಿಪೂರ್ಣತೆಯನ್ನು ಒಪ್ಪಿಕೊಂಡನು

  • ಯೋಬನ ಕಷ್ಟಗಳನ್ನು ನೋಡಿ ಅವನಿಗೆ ಸಹಾನುಭೂತಿ ತೋರಿಸಿದನು

 

33:24, 25; 35:2, 5

 

  • ಸಮತೂಕ ನೋಟ

  • ದಯೆ

  • ಆಧ್ಯಾತ್ಮಿಕತೆ

 
  • ಯೋಬನು ಸಮತೂಕವಾಗಿ ಯೋಚಿಸುತ್ತಿಲ್ಲ ಎಂದು ಎಲೀಹು ದಯೆಯಿಂದ ಹೇಳಿದನು

  • ತಾನೇ ನೀತಿವಂತನೆಂದು ರುಜುವಾಗುವುದು ತುಂಬಾ ಪ್ರಾಮುಖ್ಯವಲ್ಲ ಎಂದು ಮನಗಾಣಲು ಯೋಬನಿಗೆ ಎಲೀಹು ಸಹಾಯಮಾಡಿದನು

  • ಎಲೀಹು ಕೊಟ್ಟ ಸರಿಯಾದ ಸಲಹೆ, ಯೆಹೋವ ದೇವರಿಂದ ಹೆಚ್ಚಿನ ಮಾರ್ಗದರ್ಶನವನ್ನು ಪಡೆಯುವಂತೆ ಯೋಬನಿಗೆ ಸಹಾಯಮಾಡಿತು