ನಮ್ಮ ಕ್ರೈಸ್ತ ಜೀವನ
ನಿಷ್ಕ್ರಿಯರನ್ನು ಉತ್ತೇಜಿಸಿ
ಏಪ್ರಿಲ್ 11, ಮಂಗಳವಾರದಂದು ಕ್ರಿಸ್ತನ ಮರಣದ ಸ್ಮರಣೆಗೆ ಅನೇಕ ನಿಷ್ಕ್ರಿಯರು ಹಾಜರಾಗಲಿದ್ದಾರೆ. ಅವರು ಜೀವದ ಓಟವನ್ನು ಆರಂಭಿಸಿರುವುದಾದರೂ ಅನೇಕ ಕಾರಣಗಳಿಗಾಗಿ ತಮ್ಮ ಓಟವನ್ನು ನಿಧಾನಿಸಿದ್ದಾರೆ. ಆ ಕಾರಣಗಳಲ್ಲಿ ಕೆಲವನ್ನು ಮರಳಿ ಬನ್ನಿ ಯೆಹೋವನ ಬಳಿ ಕಿರುಹೊತ್ತಗೆಯಲ್ಲಿ ತಿಳಿಸಲಾಗಿದೆ. (ಇಬ್ರಿ 12:1) ಯೆಹೋವನು ನಿಷ್ಕ್ರಿಯರನ್ನು ತುಂಬಾ ಅಮೂಲ್ಯವೆಂದು ಎಣಿಸುತ್ತಾನೆ, ಕಾರಣ ಅವರನ್ನೂ ತನ್ನ ಮಗನ ರಕ್ತದಿಂದ ಕೊಂಡುಕೊಂಡಿದ್ದಾನೆ. (ಅಕಾ 20:28; 1ಪೇತ್ರ 1:18, 19) ಹಾಗಾದರೆ ನಿಷ್ಕ್ರಿಯರು ಸಭೆಗೆ ಮರಳಿ ಬರುವಂತೆ ನಾವು ಹೇಗೆ ಸಹಾಯ ಮಾಡಬಹುದು?
ಒಬ್ಬ ಕುರುಬ ತನ್ನ ಹಿಂಡಿನಿಂದ ಕಳೆದು ಹೋದ ಕುರಿಯನ್ನು ಹುಡುಕಲು ಎಷ್ಟು ಪ್ರಯತ್ನಿಸುತ್ತಾನೋ ಹಿರಿಯರು ಸಹ ನಿಷ್ಕ್ರಿಯರನ್ನು ಹುಡುಕಿ ಅವರಿಗೆ ಸಹಾಯ ಮಾಡಲು ಅಷ್ಟೇ ಪ್ರಯತ್ನಿಸುತ್ತಾರೆ. (ಲೂಕ 15:4-7) ಇದು ತಾನೇ ಯೆಹೋವ ದೇವರು ಅವರನ್ನು ಎಷ್ಟು ಪ್ರೀತಿಸುತ್ತಾನೆ ಅಂತ ತೋರಿಸುತ್ತದೆ. (ಯೆರೆ 23:3, 4) ಅವರನ್ನು ಹಿರಿಯರು ಮಾತ್ರವಲ್ಲ, ನಾವು ಕೂಡ ಪ್ರೋತ್ಸಾಹಿಸಬಹುದು. ಅವರಿಗೆ ನಾವು ದಯೆ ಮತ್ತು ಅನುಕಂಪವನ್ನು ತೋರಿಸುವಾಗ ಯೆಹೋವನಿಗೆ ತುಂಬಾ ಸಂತೋಷವಾಗುತ್ತದೆ ಮತ್ತು ಒಳ್ಳೇ ಫಲಿತಾಂಶಗಳು ಸಿಗುತ್ತವೆ. (ಜ್ಞಾನೋ 19:17; ಅಕಾ 20:35) ಹಾಗಾಗಿ ಅಂಥವರು ಯಾರಾದರೂ ಇದ್ದಾರಾ ಅಂತ ಯೋಚಿಸಿ. ಅವರಿಗೆ ತಕ್ಷಣ ಸಹಾಯ ಮಾಡಿ.
ನಿಷ್ಕ್ರಿಯರನ್ನು ಉತ್ತೇಜಿಸಿ ಎಂಬ ವಿಡಿಯೋ ನೋಡಿ, ನಂತರ ಈ ಪ್ರಶ್ನೆಗಳನ್ನು ಪರಿಗಣಿಸಿ:
-
ತನಗೆ ಪರಿಚಯ ಇಲ್ಲದ ಒಬ್ಬ ಸಾಕ್ಷಿಯನ್ನು ಭೇಟಿಯಾದ ಮೇಲೆ ಆ್ಯಬೀ ಏನು ಮಾಡಿದಳು?
-
ನಿಷ್ಕ್ರಿಯರಿಗೆ ಸಹಾಯ ಮಾಡಲು ಯೋಚಿಸುತ್ತಿದ್ದರೆ ಅದರ ಬಗ್ಗೆ ಹಿರಿಯರ ಹತ್ತಿರ ಏಕೆ ಮಾತಾಡಬೇಕು?
-
ಎರಡನೇ ಬಾರಿ ಲೋರಾಳನ್ನು ಭೇಟಿಯಾಗಲು ಆ್ಯಬೀ ಏನೆಲ್ಲಾ ತಯಾರಿ ಮಾಡಿದಳು?
-
ಲೋರಾಳನ್ನು ಉತ್ತೇಜಿಸುವಾಗ ಆ್ಯಬೀ ಹೇಗೆ ಪಟ್ಟುಹಿಡಿದಳು ಮತ್ತು ಪ್ರೀತಿ, ತಾಳ್ಮೆ ತೋರಿಸಿದಳು?
-
ಲೂಕ 15:8-10 ರಲ್ಲಿರುವ ಯೇಸುವಿನ ದೃಷ್ಟಾಂತದಿಂದ ನಾವು ಯಾವ ಪಾಠ ಕಲಿಯಬಹುದು?
-
ಲೋರಾಳಿಗೆ ಸಹಾಯ ಮಾಡಲು ಹಾಕಿದ ಪ್ರಯತ್ನಕ್ಕೆ ಯಾವ ಪ್ರತಿಫಲ ಸಿಕ್ಕಿತು?