ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಬೈಬಲಿನಲ್ಲಿರುವ ರತ್ನಗಳು | ಯೆರೆಮೀಯ 25-28

ಯೆರೆಮೀಯನಂತೆ ಧೈರ್ಯವಾಗಿರಿ

ಯೆರೆಮೀಯನಂತೆ ಧೈರ್ಯವಾಗಿರಿ

ಯೆರೂಸಲೇಮ್‌ ಶಿಲೋವಿನಂತೆ ನಾಶವಾಗುವುದೆಂದು ಯೆರೆಮೀಯ ಎಚ್ಚರಿಸಿದನು

26:6

  • ಯೆಹೋವನ ಸಾನಿಧ್ಯವನ್ನು ಪ್ರತಿನಿಧಿಸುತ್ತಿದ್ದ ಒಡಂಬಡಿಕೆಯ ಮಂಜೂಷವು ಒಂದು ಕಾಲದಲ್ಲಿ ಶಿಲೋವಿನಲ್ಲಿತ್ತು

  • ಆ ಮಂಜೂಷವನ್ನು ಫಿಲಿಷ್ಟಿಯರು ವಶಪಡಿಸಿಕೊಳ್ಳುವಂತೆ ಯೆಹೋವನು ಅನುಮತಿಸಿದನು. ಆಮೇಲೆ ಮಂಜೂಷ ಪುನಃ ಎಂದಿಗೂ ಶಿಲೋವಿಗೆ ಬರಲೇ ಇಲ್ಲ

ಯಾಜಕರು, ಪ್ರವಾದಿಗಳು ಮತ್ತು ಜನರು ಯೆರೆಮೀಯನಿಗೆ ಕೊಲ್ಲುವ ಬೆದರಿಕೆ ಹಾಕಿದರು

26:8, 9, 12, 13

  • ಯೆರೂಸಲೇಮ್‌ ಮತ್ತು ದೇವಾಲಯದ ವಿರುದ್ಧ ಪ್ರವಾದಿಸಿದ್ದರಿಂದ ಜನರು ಯೆರೆಮೀಯನನ್ನು ಸುತ್ತುವರಿದರು

  • ಯೆರೆಮೀಯ ಭಯಪಟ್ಟು ಓಡಿ ಹೋಗಲಿಲ್ಲ

ಯೆಹೋವನು ಯೆರೆಮೀಯನನ್ನು ಕಾಪಾಡಿದನು

26:16, 24

  • ಯೆರೆಮೀಯ ಧೈರ್ಯದಿಂದ ಇದ್ದನು ಮತ್ತು ಯೆಹೋವನು ಅವನ ಕೈ ಬಿಡಲಿಲ್ಲ

  • ಧೀರ ಅಹೀಕಾಮನ ಮೂಲಕ ಯೆರೆಮೀಯನನ್ನು ದೇವರು ಕಾಪಾಡಿದನು

ಯೆಹೋವನ ಸಹಾಯ ಮತ್ತು ಪ್ರೋತ್ಸಾಹದಿಂದ ಯೆರೆಮೀಯನು ಜನರಿಗೆ ಇಷ್ಟವಿಲ್ಲದ ಸಂದೇಶವನ್ನು 40 ವರ್ಷ ಸಾರಲು ಸಾಧ್ಯವಾಯಿತು