ನಮ್ಮ ಕ್ರೈಸ್ತ ಜೀವನ
ರಾಜ್ಯಗೀತೆಗಳನ್ನು ಕಲಿತು ಧೈರ್ಯ ಪಡೆಯಿರಿ
ಪೌಲ ಮತ್ತು ಸೀಲರು ಸೆರೆಮನೆಯಲ್ಲಿದ್ದಾಗ ಗೀತೆಯನ್ನು ಹಾಡಿ ದೇವರನ್ನು ಸ್ತುತಿಸಿದರು. (ಅಕಾ 16:25) ಆಧುನಿಕ ದಿನಗಳಲ್ಲಿ ನಾಝಿ ಆಳ್ವಿಕೆಯ ಕೆಳಗೆ ಜರ್ಮನಿಯ ಜಾಕ್ಸನ್‌ಹೌಜನ್ ಸೆರೆಶಿಬಿರ ಮತ್ತು ಸೈಬೀರಿಯದ ಸೆರೆಮನೆಗಳಲ್ಲಿ ಇದ್ದ ನಮ್ಮ ಜೊತೆ ಆರಾಧಕರು ರಾಜ್ಯ ಗೀತೆಗಳನ್ನು ಹಾಡಿದರು. ಇದು, ಕಷ್ಟ-ಪರೀಕ್ಷೆಗಳನ್ನು ಎದುರಿಸುತ್ತಿರುವ ಕ್ರೈಸ್ತರಿಗೆ ಗೀತೆಗಳು ಎಷ್ಟು ಧೈರ್ಯ ತುಂಬಿಸುತ್ತವೆ ಎಂದು ತೋರಿಸುತ್ತದೆ.
“ಸಿಂಗ್ ಔಟ್ ಜಾಯ್‌ಫುಲಿ” ಟು ಜೆಹೋವ ಎಂಬ ಹೊಸ ಗೀತೆ ಪುಸ್ತಕವು ಬಲುಬೇಗನೆ ಇತರ ಅನೇಕ ಭಾಷೆಗಳಲ್ಲಿ ಹೊರಬರಲಿದೆ. ಆ ಪುಸ್ತಕ ಸಿಕ್ಕಿದ ನಂತರ, ನಮ್ಮ ಕುಟುಂಬ ಆರಾಧನೆಯಲ್ಲಿ ಆ ಗೀತೆಗಳನ್ನು ಹಾಡಿ ಅವುಗಳನ್ನು ಬಾಯಿಪಾಠ ಮಾಡಿಕೊಳ್ಳಬಹುದು. (ಎಫೆ 5:19) ಹಾಗೆ ಮಾಡಿದರೆ, ಕಷ್ಟ-ಪರೀಕ್ಷೆಗಳು ಬಂದಾಗ ಅವುಗಳನ್ನು ನೆನಪಿಸಿಕೊಳ್ಳಲು ಪವಿತ್ರಾತ್ಮ ನಮಗೆ ಸಹಾಯ ಮಾಡುತ್ತದೆ. ರಾಜ್ಯ ಗೀತೆಗಳು ನಮ್ಮ ದೃಷ್ಟಿಯನ್ನು ನಿರೀಕ್ಷೆಯ ಮೇಲೆಯೇ ಇಡಲು ಸಹಾಯ ಮಾಡುತ್ತವೆ, ಪರೀಕ್ಷೆಗಳು ಬಂದಾಗ ಬಲ ತುಂಬುತ್ತವೆ. ನಾವು ಸಂತೋಷವಾಗಿರುವಾಗ ರಾಜ್ಯ ಗೀತೆಗಳು ನಮ್ಮ ಸಂತೋಷವನ್ನು ಇನ್ನೂ ಹೆಚ್ಚಿಸುತ್ತಾ ಉತ್ಸಾಹಧ್ವನಿಯಿಂದ ಹಾಡಲು ಸಹಾಯ ಮಾಡುತ್ತವೆ. (1ಪೂರ್ವ 15:16; ಕೀರ್ತ 33:1-3) ಆದ್ದರಿಂದ ನಾವೆಲ್ಲರೂ ರಾಜ್ಯ ಗೀತೆಗಳನ್ನು ಕಲಿತು, ಚೆನ್ನಾಗಿ ಹಾಡೋಣ.
ಬಂಧಿವಾಸಿಗಳನ್ನು ಬಲಪಡಿಸಿದ ಗೀತೆ ಎಂಬ ವಿಡಿಯೋ ನೋಡಿ. ನಂತರ ಈ ಪ್ರಶ್ನೆಗಳನ್ನು ಚರ್ಚಿಸಿ:
-
ಗೀತೆಯನ್ನು ಬರೆಯುವಂತೆ ಸಹೋದರ ಫ್ರಾಸ್ಟ್‌ರನ್ನು ಯಾವುದು ಪ್ರೇರೇಪಿಸಿತು?
-
ಜಾಕ್ಸನ್‌ಹೌಜನ್ ಸೆರೆಶಿಬಿರದಲ್ಲಿದ್ದ ಸಹೋದರರನ್ನು ಆ ಗೀತೆ ಹೇಗೆ ಬಲಪಡಿಸಿತು?
-
ದಿನನಿತ್ಯ ಎದುರಾಗುವ ಯಾವ ಸನ್ನಿವೇಶಗಳಲ್ಲಿ ರಾಜ್ಯ ಗೀತೆಗಳು ನಮ್ಮನ್ನು ಬಲಪಡಿಸುತ್ತವೆ?
-
ನೀವು ಯಾವ ರಾಜ್ಯ ಗೀತೆಗಳನ್ನು ಬಾಯಿಪಾಠ ಮಾಡಬೇಕೆಂದಿದ್ದೀರಿ?