ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಮ್ಮ ಕ್ರೈಸ್ತ ಜೀವನ

ಅವರನ್ನು ಸಂತೋಷದಿಂದ ಸ್ವಾಗತಿಸಿ

ಅವರನ್ನು ಸಂತೋಷದಿಂದ ಸ್ವಾಗತಿಸಿ

ಯಾರನ್ನು? ಕೂಟಗಳಿಗೆ ಬರುವ ಎಲ್ಲರನ್ನು. ಅವರು ನಿಮ್ಮ ಹಳೇ ಸ್ನೇಹಿತರೇ ಆಗಿರಲಿ, ಹೊಸದಾಗಿ ಕೂಟಗಳಿಗೆ ಬಂದಿರುವವರೇ ಆಗಿರಲಿ ಎಲ್ಲರನ್ನೂ ಸ್ವಾಗತಿಸಬೇಕು. (ರೋಮ 15:7; ಇಬ್ರಿ 13:2) ಅವರು ಬೇರೆ ದೇಶದ ಸಾಕ್ಷಿಯಾಗಿರಲಿ ಅಥವಾ ವರ್ಷಗಳ ನಂತರ ಬಂದ ನಿಷ್ಕ್ರಿಯರಾಗಿರಲಿ ನಾವು ಸಂತೋಷದಿಂದ ಸ್ವಾಗತಿಸಬೇಕು. ನಾವು ಅವರ ಜಾಗದಲ್ಲಿ ಇದ್ದಿದ್ದರೆ ಏನು ಬಯಸುತ್ತಿದ್ದೆವು? ಬೇರೆಯವರು ನಮ್ಮನ್ನು ಸಂತೋಷದಿಂದ ಸ್ವಾಗತಿಸಬೇಕು ಅಂತ ತಾನೇ? (ಮತ್ತಾ 7:12) ಅದಕ್ಕೇ, ನಾವು ಸಭಾಗೃಹದಲ್ಲಿ ಸುಮ್ಮನೆ ಕೂತುಕೊಳ್ಳದೆ ಕೂಟದ ಮೊದಲು ಮತ್ತು ನಂತರ ಎಲ್ಲರ ಹತ್ತಿರ ಹೋಗಿ ಮಾತಾಡಬೇಕು. ಈ ರೀತಿ ಮಾಡುವಾಗ ಸಂತೋಷ, ಪ್ರೀತಿಯ ವಾತಾವರಣ ಇರುತ್ತದೆ ಮತ್ತು ಯೆಹೋವನಿಗೆ ಮಹಿಮೆ ಬರುತ್ತದೆ. (ಮತ್ತಾ 5:16) ಹಾಜರಾದ ಪ್ರತಿಯೊಬ್ಬರ ಜೊತೆ ಮಾತಾಡಲು ಸಾಧ್ಯವಿಲ್ಲ ನಿಜ. ಆದರೆ ನಮ್ಮಿಂದಾದ ಪ್ರಯತ್ನ ಮಾಡಿದರೆ ಎಲ್ಲರಿಗೂ ಖುಷಿಯಾಗುತ್ತದೆ. *

ನಾವು ಈ ಪ್ರೀತಿಯನ್ನು ಸ್ಮರಣೆಯ ವಿಶೇಷ ಸಂದರ್ಭದಲ್ಲಿ ಮಾತ್ರವಲ್ಲ, ಯಾವಾಗಲೂ ತೋರಿಸಬೇಕು. ಹೊಸಬರಿಗೆ ನಾವು ಕ್ರೈಸ್ತ ಪ್ರೀತಿ ತೋರಿಸುವಾಗ ಅದನ್ನು ನೋಡಿ ಅವರು ಯೆಹೋವನನ್ನು ಸುತ್ತಿಸಬಹುದು ಮತ್ತು ಆರಾಧಿಸಲು ಮುಂದೆ ಬರಬಹುದು.—ಯೋಹಾ 13:35.

^ ಪ್ಯಾರ. 3 ಬಹಿಷ್ಕಾರವಾದ ಅಥವಾ ಬೇಕುಬೇಕೆಂದೇ ಸಭೆಯನ್ನು ಬಿಟ್ಟುಹೋದ ವ್ಯಕ್ತಿ ಕ್ರೈಸ್ತ ಕೂಟಗಳಿಗೆ ಹಾಜರಾದಾಗ ಈ ಸಲಹೆ ಅನ್ವಯಿಸುವುದಿಲ್ಲ.—1ಕೊರಿಂ 5:11; 2ಯೋಹಾ 10.