ಏಪ್ರಿಲ್ 30–ಮೇ 6
ಮಾರ್ಕ 5-6
ಗೀತೆ 111 ಮತ್ತು ಪ್ರಾರ್ಥನೆ
ಆರಂಭದ ಮಾತುಗಳು (3 ನಿಮಿಷದೊಳಗೆ)
ಬೈಬಲಿನಲ್ಲಿರುವ ರತ್ನಗಳು
“ಯೇಸುವಿಗೆ ತೀರಿಹೋಗಿರುವ ನಮ್ಮ ಆಪ್ತರನ್ನು ಪುನರುತ್ಥಾನ ಮಾಡುವ ಶಕ್ತಿಯಿದೆ”: (10 ನಿ.)
ಮಾರ್ಕ 5:38—ನಮ್ಮ ಪ್ರೀತಿಯ ಜನರು ತೀರಿಹೋದಾಗ ನಮಗೆ ತುಂಬ ನೋವಾಗುತ್ತದೆ
ಮಾರ್ಕ 5:39-41—ಮರಣದಲ್ಲಿ ‘ನಿದ್ರೆಮಾಡುತ್ತಿರುವವರಿಗೆ’ ಪುನಃ ಜೀವ ಕೊಡುವ ಶಕ್ತಿ ಯೇಸುವಿಗಿದೆ (“ಸತ್ತಿಲ್ಲ, ನಿದ್ರೆಮಾಡುತ್ತಿದ್ದಾಳೆ” ಮಾರ್ಕ 5:39ರ ಬಗ್ಗೆ ಅಧ್ಯಯನ ಬೈಬಲಿನಲ್ಲಿರುವ ಮಾಹಿತಿ)
ಮಾರ್ಕ 5:42—ಮುಂದೆ ಪುನರುತ್ಥಾನ ನಡೆಯುವಾಗ ಎಲ್ಲೆಲ್ಲೂ ಆನಂದ ತುಂಬಿರುತ್ತದೆ (ಮಹಾನ್ ಪುರುಷ ಅಧ್ಯಾ. 47 ಪ್ಯಾರ 6)
ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ: (8 ನಿ.)
ಮಾರ್ಕ 5:19, 20—ಇಲ್ಲಿ ಯೇಸು ಯಾಕೆ ಭಿನ್ನವಾದ ನಿರ್ದೇಶನವನ್ನು ಕೊಟ್ಟನು? (“ಅವರಿಗೆ ತಿಳಿಸು” ಮಾರ್ಕ 5:19ರ ಬಗ್ಗೆ ಅಧ್ಯಯನ ಬೈಬಲಿನಲ್ಲಿರುವ ಮಾಹಿತಿ)
ಮಾರ್ಕ 6:11—‘ನಿಮ್ಮ ಪಾದಗಳಿಗೆ ಹತ್ತಿದ ಧೂಳನ್ನು ಝಾಡಿಸಿಬಿಡಿ’ ಎನ್ನುವುದರ ಅರ್ಥವೇನು? (“ನಿಮ್ಮ ಪಾದಗಳಿಗೆ ಹತ್ತಿದ ಧೂಳನ್ನು...ಝಾಡಿಸಿಬಿಡಿರಿ” ಮಾರ್ಕ 6:11ರ ಬಗ್ಗೆ ಅಧ್ಯಯನ ಬೈಬಲಿನಲ್ಲಿರುವ ಮಾಹಿತಿ)
ಈ ವಾರದ ಬೈಬಲ್ ವಾಚನವು ಯೆಹೋವನ ಬಗ್ಗೆ ನಿಮಗೆ ಏನನ್ನು ಕಲಿಸಿದೆ?
ಈ ವಾರದ ಬೈಬಲ್ ವಾಚನದಲ್ಲಿ ಇನ್ನೂ ಯಾವ ಆಧ್ಯಾತ್ಮಿಕ ಮುತ್ತುಗಳನ್ನು ನೀವು ಕಂಡುಕೊಂಡಿದ್ದೀರಿ?
ಬೈಬಲ್ ಓದುವಿಕೆ: (4 ನಿಮಿಷದೊಳಗೆ) ಮಾರ್ಕ 6:1-13
ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ
ಎರಡನೇ ಪುನರ್ಭೇಟಿ: (3 ನಿಮಿಷದೊಳಗೆ) ಮಾದರಿ ಸಂಭಾಷಣೆಯಿಂದ ಆರಂಭಿಸಿ. ಮನೆಯವರಿಗೆ jw.org ವೆಬ್‌ಸೈಟನ್ನು ತೋರಿಸಿ.
ಮೂರನೇ ಪುನರ್ಭೇಟಿ: (3 ನಿಮಿಷದೊಳಗೆ) ಒಂದು ವಚನವನ್ನು ಮತ್ತು ಮುಂದಿನ ಭೇಟಿಗಾಗಿ ಪ್ರಶ್ನೆಯನ್ನು ನೀವೇ ಆರಿಸಿಕೊಳ್ಳಿ.
ಬೈಬಲ್ ಅಧ್ಯಯನ: (6 ನಿಮಿಷದೊಳಗೆ) ಬೈಬಲ್ ಕಲಿಸುತ್ತದೆ ಪುಟ 36 ಪ್ಯಾರ 23-24—ವಿದ್ಯಾರ್ಥಿಯ ಹೃದಯ ತಲಪುವುದು ಹೇಗೆಂದು ತೋರಿಸಿ.
ನಮ್ಮ ಕ್ರೈಸ್ತ ಜೀವನ
“ನಮ್ಮ ಮುಖ್ಯ ಬೋಧನಾ ಸಲಕರಣೆಗಳನ್ನು ಚೆನ್ನಾಗಿ ಉಪಯೋಗಿಸಿ” (5 ನಿ.) ಚರ್ಚೆ.
ಯೆಹೋವನ ಸಂಘಟನೆ ಕೊಡುವ ಸಾಂತ್ವನ: (10 ನಿ.) ಚರ್ಚೆ. ವಿಡಿಯೋ ಹಾಕಿ. ನಂತರ ಈ ಪ್ರಶ್ನೆಗಳನ್ನು ಚರ್ಚಿಸಿ: ಪೆರಾ ದಂಪತಿ ಯಾವ ಕೆಲವು ಕಷ್ಟಗಳನ್ನು ಎದುರಿಸಿದರು? ಕಷ್ಟಗಳನ್ನು ತಾಳಿಕೊಳ್ಳಲು ಅವರಿಗೆ ಯಾವುದು ಸಹಾಯ ಮಾಡಿತು? ಕಷ್ಟಗಳ ಸಮಯದಲ್ಲೂ ಒಳ್ಳೇ ಆಧ್ಯಾತ್ಮಿಕ ರೂಢಿಯನ್ನು ನಾವು ಬಿಟ್ಟುಬಿಡಬಾರದೇಕೆ?
ಸಭಾ ಬೈಬಲ್ ಅಧ್ಯಯನ: (30 ನಿ.) ಸಿಹಿಸುದ್ದಿ ಪಾಠ 1 ಪ್ಯಾರ 1-4
ಇಂದಿನ ಕೂಟದ ಮುಖ್ಯಾಂಶಗಳು, ಮುಂದಿನ ಕೂಟದ ಮುನ್ನೋಟ (3 ನಿ.)
ಗೀತೆ 14 ಮತ್ತು ಪ್ರಾರ್ಥನೆ