ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಮ್ಮ ಕ್ರೈಸ್ತ ಜೀವನ

ಸ್ಮರಣೆಗೆ ನೀವು ಹೇಗೆ ತಯಾರಾಗುತ್ತೀರಿ?

ಸ್ಮರಣೆಗೆ ನೀವು ಹೇಗೆ ತಯಾರಾಗುತ್ತೀರಿ?

ಈ ವರ್ಷದಿಂದ ನಮಗೆ ಕ್ರಿಸ್ತನ ಮರಣದ ಸ್ಮರಣೆಗೆ ತಯಾರಾಗಲು ಹೆಚ್ಚು ಸಮಯ ಸಿಗಲಿದೆ. ವಾರಮಧ್ಯದಲ್ಲಿ ಸ್ಮರಣೆ ಬಂದರೆ ಆ ವಾರದಲ್ಲಿ ಜೀವನ ಮತ್ತು ಸೇವೆ ಕೂಟ ಇರುವುದಿಲ್ಲ. ವಾರಾಂತ್ಯದಲ್ಲಿ ಸ್ಮರಣೆ ಬಂದರೆ ಸಾರ್ವಜನಿಕ ಭಾಷಣ ಮತ್ತು ಕಾವಲಿನಬುರುಜು ಅಧ್ಯಯನ ಇರುವುದಿಲ್ಲ. ಈ ಸಮಯವನ್ನು ಚೆನ್ನಾಗಿ ಉಪಯೋಗಿಸಿಕೊಳ್ಳುತ್ತೀರಾ? ಒಂದನೇ ಶತಮಾನದಲ್ಲಿ ಮಾಡಿದಂತೆ ನಾವು ಕೂಡ ಈ ವಿಶೇಷ ಕಾರ್ಯಕ್ರಮಕ್ಕೆ ಅನೇಕ ಏರ್ಪಾಡುಗಳನ್ನು ಮಾಡಬೇಕಾಗಿರುತ್ತದೆ. (ಲೂಕ 22:7-13; ರಾಜ್ಯ ಸೇವೆ 3/15 ಪುಟ 1) ಇದಿಷ್ಟೇ ಅಲ್ಲ, ನಮ್ಮ ಹೃದಯವನ್ನೂ ಸಿದ್ಧಪಡಿಸಿಕೊಳ್ಳಬೇಕು. ಅದಕ್ಕಾಗಿ ಏನೇನು ಮಾಡಬೇಕು?

  • ಸ್ಮರಣೆಗೆ ಹಾಜರಾಗುವುದು ಎಷ್ಟು ಮುಖ್ಯ ಎಂದು ಯೋಚಿಸಿ.—1ಕೊರಿಂ 11:23-26

  • ಯೆಹೋವನ ಜೊತೆ ನಿಮಗೆ ಇರುವ ಸಂಬಂಧದ ಬಗ್ಗೆ ಪ್ರಾರ್ಥನೆ ಮಾಡಿ, ಯೋಚಿಸಿ.—1ಕೊರಿಂ 11:27-29; 2ಕೊರಿಂ 13:5

  • ಸ್ಮರಣೆಯ ಬಗ್ಗೆ ಇರುವ ಲೇಖನಗಳನ್ನು ಓದಿ ಧ್ಯಾನಿಸಿ.—ಯೋಹಾ 3:16; 15:13

ಕೆಲವು ಪ್ರಚಾರಕರು ದಿನದ ವಚನ ಓದಿ ಚರ್ಚಿಸೋಣ ಕಿರುಪುಸ್ತಕದಲ್ಲಿ ಕೊಡಲಾಗುವ ಸ್ಮರಣೆಯ ಬೈಬಲ್‌ ಓದುವಿಕೆಯನ್ನು ಮಾಡಿ ಧ್ಯಾನಿಸುತ್ತಾರೆ. ಕೆಲವರು ಈ ಲೇಖನದ ಜೊತೆ ಇರುವ ಚಾರ್ಟಲ್ಲಿ ಕೊಡಲಾಗಿರುವ ಬೈಬಲ್‌ ವಚನಗಳನ್ನು ಓದುತ್ತಾರೆ. ಇನ್ನು ಕೆಲವರು ಸ್ಮರಣೆಯ ಬಗ್ಗೆ, ಯೆಹೋವ-ಯೇಸು ತೋರಿಸಿರುವ ಪ್ರೀತಿ ಬಗ್ಗೆ ಇರುವ ಕಾವಲಿನಬುರುಜು ಲೇಖನಗಳನ್ನು ಓದಿ ಅಧ್ಯಯನ ಮಾಡುತ್ತಾರೆ. ನೀವು ಯಾವ ರೀತಿ ಅಧ್ಯಯನ ಮಾಡಲು ಬಯಸುತ್ತೀರಾ? ನೀವು ಮಾಡುವ ಅಧ್ಯಯನ ಯೆಹೋವ ಮತ್ತು ಆತನ ಮಗನ ಜೊತೆ ನಿಮಗಿರುವ ಸಂಬಂಧವನ್ನು ಇನ್ನೂ ಹತ್ತಿರ ಮಾಡಲಿ.