ಯಾಕೋಬ ಮತ್ತು ಲಾಬಾನನ ಮಧ್ಯೆ ಸಮಾಧಾನದ ಒಪ್ಪಂದ
ಯಾಕೋಬ ಮತ್ತು ಲಾಬಾನ ಕಲ್ಲುಗಳ ಕುಪ್ಪೆಯನ್ನು ಯಾಕೆ ಮಾಡಿದರು?
-
ಅವರು ಮಾಡಿಕೊಂಡ ಸಮಾಧಾನದ ಒಪ್ಪಂದಕ್ಕೆ ಆ ಕುಪ್ಪೆಯೇ ಜನರಿಗೆ ಸಾಕ್ಷಿ ಆಗಿತ್ತು
-
ಅವರು ಸಮಾಧಾನದ ಒಪ್ಪಂದ ಮಾಡಿಕೊಂಡ ಹಾಗೆ ನಡಕೊಳ್ಳುತ್ತಿದ್ದಾರೋ ಇಲ್ಲವೋ ಅಂತ ಯೆಹೋವನು ನೋಡುತ್ತಿದ್ದಾನೆ ಅನ್ನೋದನ್ನು ಆ ಕುಪ್ಪೆ ಅವರಿಗೆ ನೆನಪಿಸುತ್ತಿತ್ತು
ನಾವು ಎಲ್ಲರೊಂದಿಗೆ ಸಮಾಧಾನದಿಂದ ಇರಬೇಕು ಅಂತ ಇಂದು ಸಹ ಯೆಹೋವನು ಇಷ್ಟಪಡುತ್ತಾನೆ. ಸಮಾಧಾನದಿಂದ ಇರಲು ಕೆಳಗಿನ ಈ ಮೂರು ವಿಷಯಗಳು ನಮಗೆ ಹೇಗೆ ಸಹಾಯ ಮಾಡುತ್ತವೆ?
-
ಮನಬಿಚ್ಚಿ ಮಾತಾಡೋದು.—ಮತ್ತಾ 5:23, 24
-
ಉದಾರವಾಗಿ ಕ್ಷಮಿಸೋದು.—ಕೊಲೊ 3:13
-
ತಾಳ್ಮೆ ತೋರಿಸೋದು.—ರೋಮ 12:21