ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಮ್ಮ ಕ್ರೈಸ್ತ ಜೀವನ

‘ಅನ್ಯದೇವರುಗಳನ್ನು ತೆಗೆದುಹಾಕಿ’

‘ಅನ್ಯದೇವರುಗಳನ್ನು ತೆಗೆದುಹಾಕಿ’

ಯಾಕೋಬನ ಸಮಯದಲ್ಲಿ ಯೆಹೋವನು ವಿಗ್ರಹಾರಾಧನೆ ಬಗ್ಗೆ ಯಾವ ನಿಯಮಗಳನ್ನೂ ಕೊಟ್ಟಿರಲಿಲ್ಲ. ಆದ್ರೂ ಯೆಹೋವನಿಗೆ ಸಂಪೂರ್ಣ ಭಕ್ತಿ ಸಲ್ಲಿಸಬೇಕು ಅಂತ ಯಾಕೋಬನಿಗೆ ಗೊತ್ತಿತ್ತು. (ವಿಮೋ 20:3-5) ಯೆಹೋವನು ಯಾಕೋಬನಿಗೆ ಬೇತೇಲಿಗೆ ಹಿಂದಿರುಗುವಂತೆ ತಿಳಿಸಿದನು. ಆಗ ಯಾಕೋಬ ತನ್ನೊಂದಿಗಿರುವ ಎಲ್ಲರಿಗೂ ವಿಗ್ರಹಗಳನ್ನು ತೆಗೆದುಹಾಕಿರಿ ಅಂತ ಹೇಳಿದನು. ಇದನ್ನು ಕೇಳಿ ಅವರೆಲ್ಲಾ ತಮ್ಮಲ್ಲಿದ್ದ ಅನ್ಯದೇವರುಗಳನ್ನೂ ತಾಯಿತಗಳನ್ನೂ ತೆಗೆದುಹಾಕಿದರು. (ಆದಿ 35:1-4) ಇದರಿಂದ ಯೆಹೋವನಿಗೆ ತುಂಬಾ ಸಂತೋಷವಾಯಿತು.

ಇಂದು ನಾವು ಹೇಗೆ ಯೆಹೋವನಿಗೆ ಸಂಪೂರ್ಣ ಭಕ್ತಿ ಸಲ್ಲಿಸಬಹುದು? ವಿಗ್ರಹಾರಾಧನೆ ಮತ್ತು ಮಾಟಮಂತ್ರಕ್ಕೆ ಸಂಬಂಧಿಸಿದ ವಿಷಯಗಳಿಂದ ದೂರ ಇರಬೇಕು. ಹೇಗೆ? ಮಾಟಮಂತ್ರಕ್ಕೆ ಸಂಬಂಧಿಸಿದ ಎಲ್ಲಾ ವಸ್ತುಗಳನ್ನು ನಾಶ ಮಾಡಬೇಕು. ಯಾವ ರೀತಿಯ ಮನೋರಂಜನೆ ಆರಿಸಿಕೊಳ್ಳುತ್ತಾ ಇದ್ದೀವಿ ಅಂತಾನೂ ನಾವು ಪರೀಕ್ಷಿಸಬೇಕು. ಉದಾಹರಣೆಗೆ ಹೀಗೆ ಕೇಳಿಕೊಳ್ಳಿ: ‘ರಕ್ತಪಿಶಾಚಿ, ದೆವ್ವ ಅಥವಾ ಅತಿಮಾನುಷ ಶಕ್ತಿ ಬಗ್ಗೆ ಇರುವ ಪುಸ್ತಕಗಳನ್ನು ಓದುತ್ತೇನಾ? ಅಂಥ ಚಲನಚಿತ್ರಗಳನ್ನು ನೋಡಿ ಆನಂದಿಸುತ್ತೇನಾ? ಜಾದೂ ಅಥವಾ ಮಾಟ ಮಾಡೋದ್ರಲ್ಲಿ, ಶಾಪ ಹಾಕೋದ್ರಲ್ಲಿ ತಪ್ಪೇನಿಲ್ಲ ಅಂತ ನಾನು ನೋಡೋ ಮನೋರಂಜನೆ ತೋರಿಸುತ್ತಾ?’ ಯೆಹೋವನು ಹಗೆಮಾಡುವ ಎಲ್ಲವನ್ನು ನಾವೂ ಹಗೆಮಾಡಬೇಕು.—ಕೀರ್ತ 97:10.

“ಪಿಶಾಚನನ್ನು ಎದುರಿಸಿರಿ” ಅನ್ನೋ ವಿಡಿಯೋ ನೋಡಿ. ನಂತರ ಈ ಪ್ರಶ್ನೆಗಳಿಗೆ ಉತ್ತರ ಕೊಡಿ:

  • ಪಲೇಸಾ ಎಂಬ ಬೈಬಲ್‌ ವಿದ್ಯಾರ್ಥಿಯ ಜೀವನದಲ್ಲಿ ಯಾವ ಸಮಸ್ಯೆ ಬಂತು?

  • ಪ್ರೇತವ್ಯವಹಾರಕ್ಕೆ ಸಂಬಂಧಿಸಿದ ವಿಷಯಗಳ ಬಗ್ಗೆ ಹಿರಿಯರ ಸಹಾಯ ಪಡೆಯೋದು ಯಾಕೆ ಒಳ್ಳೇದು?

  • ಪಿಶಾಚನನ್ನು ಎದುರಿಸಿ, ದೇವರ ಸಮೀಪಕ್ಕೆ ಬನ್ನಿರಿ.—ಯಾಕೋ 4:7, 8

    ಯೆಹೋವ ರಕ್ಷಣೆ ಬೇಕಾದ್ರೆ ನಾವು ಯಾವುದನ್ನು ಪೂರ್ತಿಯಾಗಿ ಬಿಟ್ಟುಬಿಡಬೇಕು?

  • ಪಲೇಸಾ ಯಾವ ಹೆಜ್ಜೆ ತಗೊಂಡಳು?

  • ದೆವ್ವಗಳು ನಮ್ಮ ಮೇಲೆ ಪ್ರಭಾವ ಬೀರಬಾರದು ಅಂದ್ರೆ ನಾವೇನು ಮಾಡಬೇಕು?