ನಮ್ಮ ಕ್ರೈಸ್ತ ಜೀವನ
ಭವಿಷ್ಯದಲ್ಲಿ ದೇವರು ಮತ್ತು ಯೇಸು ಕೊಡಲಿರೋ ಸ್ವಾತಂತ್ರ್ಯ
ದಿನನಿತ್ಯ ಜೀವನದಲ್ಲಿ ನೀವು ತುಂಬಾ ಕಷ್ಟಪಡಬೇಕಾಗಿದ್ಯಾ? ಕುಟುಂಬದ ತಲೆಯಾಗಿ ತುಂಬಾ ಜವಾಬ್ದಾರಿಗಳನ್ನ ನಿಭಾಯಿಸ್ತಿದ್ದೀರಾ? ಒಂಟಿ ಹೆತ್ತವರಾಗಿ ಕುಟುಂಬದ ಅಗತ್ಯಗಳನ್ನ ಪೂರೈಸಲು ತುಂಬಾ ಕಷ್ಟಪಡ್ತಿದ್ದೀರಾ? ಶಾಲೆಯಲ್ಲಿ ಜೊತೆ ಓದುವವರ ಕಿರುಕುಳದಿಂದ ಕಷ್ಟಪಡ್ತಿರೋ ಯೌವನಸ್ಥರಾಗಿದ್ದೀರಾ? ನಿಮಗೆ ಆರೋಗ್ಯದ ಸಮಸ್ಯೆ ಇದ್ಯಾ? ವಯಸ್ಸಾಗಿದ್ಯಾ? ಹೀಗೆ ಎಲ್ರೂ ಒಂದಲ್ಲಾ ಒಂದು ಸಮಸ್ಯೆಯಿಂದ ಕಷ್ಟಪಡ್ತಿದ್ದಾರೆ. ನಮ್ಮ ಕೆಲವು ಸಹೋದರ ಸಹೋದರಿಯರು ಒಂದರ ಮೇಲೊಂದು ಸಮಸ್ಯೆಗಳನ್ನ ಅನುಭವಿಸ್ತಿದ್ದಾರೆ. ಆದ್ರೆ ಬಲು ಬೇಗನೆ ಈ ಎಲ್ಲಾ ಸಮಸ್ಯೆಗಳಿಂದ ನಮಗೆ ಬಿಡುಗಡೆ ಸಿಗುತ್ತೆ.—2ಕೊರಿಂ 4:16-18.
ಆದ್ರೆ ಈ ಬಿಡುಗಡೆ ನಮಗೆ ಭವಿಷ್ಯದಲ್ಲಿ ಸಿಗುತ್ತೆ. ಅಲ್ಲಿವರೆಗೂ ಯೆಹೋವನು ನಾವು ಅನುಭವಿಸೋ ಕಷ್ಟಗಳನ್ನ ಅರ್ಥಮಾಡಿಕೊಳ್ಳುತ್ತಾನೆ, ನಾವು ತಾಳಿಕೊಳ್ತಾ ನಿಷ್ಠೆ ತೋರಿಸುವಾಗ ನಮ್ಮನ್ನ ಮೆಚ್ಚುತ್ತಾನೆ ಮತ್ತು ಭವಿಷ್ಯದಲ್ಲಿ ಹೇರಳವಾಗಿ ಆಶೀರ್ವದಿಸಲಿದ್ದಾನೆ ಅನ್ನೋ ವಿಷ್ಯನ ಮನಸ್ಸಲ್ಲಿಡಬೇಕು. ಇದ್ರಿಂದ ನಮಗೆ ಸಾಂತ್ವನ ಸಿಗುತ್ತೆ. (ಯೆರೆ 29:11, 12) ನಮ್ಮ ಬಗ್ಗೆ ಯೇಸುಗೆ ಕೂಡ ತುಂಬ ಕಾಳಜಿ ಇದೆ. ನಾವು ನಮ್ಮ ಜವಾಬ್ದಾರಿಗಳನ್ನ ನಿರ್ವಹಿಸುವಾಗ “ನಾನು ನಿಮ್ಮ ಜೊತೆ ಇರ್ತಿನಿ” ಅಂತ ಮಾತು ಕೊಟ್ಟಿದ್ದಾನೆ. (ಮತ್ತಾ 28:20) ದೇವರ ರಾಜ್ಯದಲ್ಲಿ ಸಿಗೋ ನಿಜವಾದ ಸ್ವಾತಂತ್ರ್ಯದ ಬಗ್ಗೆ ಯೋಚಿಸಿ ಧ್ಯಾನಿಸುವಾಗ ಈಗಿರೋ ಕಷ್ಟಗಳನ್ನ ತಾಳಿಕೊಳ್ಳಲು ಧೈರ್ಯ ಸಿಗುತ್ತೆ ಮತ್ತು ಭವಿಷ್ಯದ ಬಗ್ಗೆ ನಮಗಿರೋ ನಿರೀಕ್ಷೆನೂ ಬಲಗೊಳ್ಳುತ್ತೆ.—ರೋಮ 8:19-21.
ಬಿರುಗಾಳಿ ಬಡಿಯಲಿರುವಾಗ ನಿಮ್ಮ ದೃಷ್ಟಿ ಯೇಸುವಿನ ಮೇಲಿರಲಿ ಅನ್ನೋ ವಿಡಿಯೋ ನೋಡಿ. ನಂತ್ರ ಈ ಪ್ರಶ್ನೆಗಳಿಗೆ ಉತ್ರ ಕೊಡಿ:
-
ಮಾನವರು ದೇವರಿಂದ ಹೇಗೆ ದೂರವಾದ್ರು? ಅದರ ಪರಿಣಾಮ ಏನಾಯ್ತು?
-
ಯೆಹೋವನಿಗೆ ನಂಬಿಗಸ್ತರಾಗಿ ಉಳಿಯುವವರ ಭವಿಷ್ಯ ಹೇಗಿರುತ್ತೆ?
-
ಈ ಅದ್ಭುತ ಭವಿಷ್ಯ ನಮಗೆ ಯಾರ ಮೂಲಕ ಸಿಗಲಿದೆ?
-
ಹೊಸ ಲೋಕದ ಯಾವ ಆಶೀರ್ವಾದಗಳಿಗಾಗಿ ನೀವು ಕಾಯ್ತಾ ಇದ್ದೀರಾ?