ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಮ್ಮ ಕ್ರೈಸ್ತ ಜೀವನ

ಹೆತ್ತವರೇ, ಮಕ್ಕಳಿಗೆ ತಿಳಿಸಬೇಕಾದ ವಿಷಯಗಳನ್ನ ತಿಳಿಸಿರಿ

ಹೆತ್ತವರೇ, ಮಕ್ಕಳಿಗೆ ತಿಳಿಸಬೇಕಾದ ವಿಷಯಗಳನ್ನ ತಿಳಿಸಿರಿ

ಇಂದಿನ ಲೋಕ ಒಳ್ಳೇದನ್ನ ಕೆಟ್ಟದ್ದಂತ, ಕೆಟ್ಟದ್ದನ್ನ ಒಳ್ಳೇದಂತ ಹೇಳುತ್ತೆ. (ಯೆಶಾ 5:20) ಕೆಲವು ಜನ ಯೆಹೋವನು ದ್ವೇಷಿಸುವಂಥ ವಿಷಯಗಳನ್ನ ಮಾಡ್ತಾರೆ. ಉದಾಹರಣೆಗೆ ಒಬ್ಬ ಗಂಡಸು ಇನ್ನೊಬ್ಬ ಗಂಡಸಿನ ಜೊತೆ ಮತ್ತು ಒಬ್ಬ ಹೆಂಗಸು ಇನ್ನೊಬ್ಬ ಹೆಂಗಸಿನ ಜೊತೆ ಲೈಂಗಿಕ ಸಂಬಂಧ ಇಟ್ಕೊಳ್ತಾರೆ. ಕೆಟ್ಟ ವಿಷಯಗಳನ್ನ ಮಾಡಲು ಸ್ಕೂಲಿನ ಮಕ್ಕಳು ಅಥವಾ ಬೇರೆಯವರು ನಮ್ಮ ಮಕ್ಕಳಿಗೆ ಆಸೆ ಹುಟ್ಟಿಸ್ತಾರೆ. ಇಂಥ ಸನ್ನಿವೇಶಗಳನ್ನ ನಿಭಾಯಿಸಲು ನೀವು ನಿಮ್ಮ ಮಕ್ಕಳಿಗೆ ಹೇಗೆ ಹೇಳಿಕೊಡಬಹುದು?

ಯೆಹೋವನಿಗೆ ಯಾವ ವಿಷಯ ಇಷ್ಟ ಮತ್ತು ಯಾವುದು ಇಷ್ಟ ಇಲ್ಲ ಅಂತ ನಿಮ್ಮ ಮಕ್ಕಳಿಗೆ ತಿಳಿಸಿ. (ಯಾಜ 18:3) ಮಕ್ಕಳ ವಯಸ್ಸನ್ನ ಮನಸ್ಸಲ್ಲಿಟ್ಟು ನಿಧಾನವಾಗಿ ಅವರಿಗೆ ಸ್ವಲ್ಪ ಸ್ವಲ್ಪನೇ ಲೈಂಗಿಕ ವಿಷಯಗಳ ಬಗ್ಗೆ ಬೈಬಲ್‌ ಏನು ಹೇಳುತ್ತೆ ಅಂತ ತಿಳಿಸಿ. (ಧರ್ಮೋ 6:7) ನಿಮ್ಮನ್ನೇ ಹೀಗೆ ಕೇಳಿಕೊಳ್ಳಿ: ‘ಯಾವ ವಿಧದಲ್ಲಿ ಪ್ರೀತಿ ತೋರಿಸಿದ್ರೆ ಸರಿ ಮತ್ತು ಯಾವ ವಿಧದಲ್ಲಿ ತೋರಿಸಿದ್ರೆ ತಪ್ಪು ಅಂತ ನನ್ನ ಮಕ್ಕಳಿಗೆ ಹೇಳಿಕೊಟ್ಟಿದ್ದೀನಾ? ಸರಿಯಾದ ರೀತಿಯ ಬಟ್ಟೆಗಳನ್ನ ಹಾಕೋದು ಯಾಕೆ ಮುಖ್ಯ ಅಂತ ತಿಳಿಸಿದ್ದೀನಾ? ನಮ್ಮ ದೇಹವನ್ನ ನೋಡೋ ಅಥವಾ ಗುಪ್ತಾಂಗಗಳನ್ನ ಮುಟ್ಟೋ ಅಧಿಕಾರ ಯಾಕೆ ಯಾರಿಗೂ ಇಲ್ಲ ಅಂತ ವಿವರಿಸಿದ್ದೀನಾ? ಯಾರಾದ್ರು ಅಶ್ಲೀಲ ಚಿತ್ರಗಳನ್ನ, ವಿಡಿಯೋಗಳನ್ನ ತೋರಿಸಲು ಪ್ರಯತ್ನಿಸಿದಾಗ ಅಥವಾ ಯೆಹೋವನಿಗೆ ಇಷ್ಟ ಇಲ್ಲದ ವಿಷಯಗಳನ್ನ ಮಾಡುವಂತೆ ಹೇಳಿದಾಗ ಏನು ಮಾಡಬೇಕು ಅಂತ ನನ್ನ ಮಕ್ಕಳಿಗೆ ಗೊತ್ತಾ?’ ಈ ಎಲ್ಲಾ ವಿಷಯಗಳ ಬಗ್ಗೆ ಮೊದಲೇ ತಿಳಿಸಿದ್ರೆ ಇಂಥ ಸನ್ನಿವೇಶಗಳು ಬಂದಾಗ ಅದನ್ನ ಎದುರಿಸೋಕೆ ಮಕ್ಕಳಿಗೆ ಸಹಾಯ ಆಗುತ್ತೆ. (ಜ್ಞಾನೋ 27:12; ಪ್ರಸಂ 7:12) ಮಕ್ಕಳಿಗೆ ಲೈಂಗಿಕ ವಿಷಯದಲ್ಲಿ ಸರಿಯಾದ ಜ್ಞಾನ ನೀಡಿದ್ರೆ ಯೆಹೋವನಿಂದ ಸಿಕ್ಕಿರೋ ಅಮೂಲ್ಯ ವರವಾದ ಮಕ್ಕಳನ್ನ ನಾವು ಎಷ್ಟು ಮಾನ್ಯ ಮಾಡ್ತೀವಿ ಅಂತ ತೋರಿಸಿದ ಹಾಗಾಗುತ್ತೆ.—ಕೀರ್ತ 127:3.

ಸ್ಥಿರವಾಗಿ ಉಳಿಯುವ ಮನೆಯನ್ನು ಕಟ್ಟಿನಿಮ್ಮ ಮಕ್ಕಳನ್ನು “ಕೆಟ್ಟ ವಿಷಯಗಳಿಂದ” ಸಂರಕ್ಷಿಸುವ ಮೂಲಕ ಅನ್ನೋ ವಿಡಿಯೋ ನೋಡಿ. ನಂತ್ರ ಈ ಪ್ರಶ್ನೆಗಳಿಗೆ ಉತ್ರ ಕೊಡಿ:

  • ಲೈಂಗಿಕ ವಿಷಯಗಳ ಬಗ್ಗೆ ಮಕ್ಕಳತ್ರ ಮಾತಾಡೋಕೆ ಕೆಲವರಿಗೆ ಯಾಕೆ ಕಷ್ಟ ಆಗುತ್ತೆ?

  • ಹೆತ್ತವರು ಮಕ್ಕಳನ್ನ ‘ಯೆಹೋವ ಹೇಳೋ ತರಾನೇ ಕಲಿಸ್ತಾ, ತರಬೇತಿ ಕೊಡ್ತಾ’ ಬೆಳೆಸಬೇಕು ಯಾಕೆ?—ಎಫೆ 6:4

  • ಜ್ಞಾನದಿಂದ ಸಂರಕ್ಷಣೆ

    ಲೈಂಗಿಕ ವಿಷಯಗಳ ಬಗ್ಗೆ ಮಕ್ಕಳಿಗೆ ಕಲಿಸಲು ಯೆಹೋವನ ಸಂಘಟನೆ ಹೆತ್ತವರಿಗೆ ಯಾವ ಸಹಾಯ ನೀಡಿದೆ?—ಕಾವಲಿನಬುರುಜು19.05 ಪುಟ 12 ರಲ್ಲಿರೋ ಚೌಕ

  • ಮಕ್ಕಳಿಗೆ ಯಾವುದೇ ಗಂಭೀರ ಸಮಸ್ಯೆಗಳು ಎದುರಾಗದೇ ಇದ್ರೂ ಅವರೊಟ್ಟಿಗೆ ಲೈಂಗಿಕ ವಿಷಯದ ಬಗ್ಗೆ ಆಗಾಗ ಮಾತಾಡ್ತಾ ಇರಬೇಕು ಯಾಕೆ?