ನಮ್ಮ ಕ್ರೈಸ್ತ ಜೀವನ
ಯೆಹೋವನ ಸೇವೆ ಮಾಡೋ ಆಯ್ಕೆಮಾಡಿ
ನೀವು ಅಸ್ನಾತ ಪ್ರಚಾರಕರಾ? ಅಥವಾ ಇನ್ನೂ ಬೈಬಲ್ ಕಲಿತಾ ಇದ್ದೀರಾ? ನಿಮ್ಮ ಉತ್ರ ಹೌದಾದ್ರೆ ದೀಕ್ಷಾಸ್ನಾನ ತಗೊಳ್ಳೋದ್ರ ಬಗ್ಗೆ ಯೋಚಿಸಿದ್ದೀರಾ? ದೀಕ್ಷಾಸ್ನಾನ ಯಾಕೆ ತಗೋಬೇಕು? ಸಮರ್ಪಣೆ ಮತ್ತು ದೀಕ್ಷಾಸ್ನಾನ ತಗೊಂಡ್ರೆ ಯೆಹೋವನೊಂದಿಗೆ ಒಂದು ವಿಶೇಷ ಸಂಬಂಧ ಬೆಳೆಯುತ್ತೆ. (ಕೀರ್ತ 91:1) ಇದ್ರಿಂದ ರಕ್ಷಣೆನೂ ಸಿಗುತ್ತೆ. (1ಪೇತ್ರ 3:21) ದೀಕ್ಷಾಸ್ನಾನ ಪಡ್ಕೊಳ್ಳೋಕೆ ನೀವು ಏನೆಲ್ಲಾ ಮಾಡಬಹುದು?
ಇದೇ ಸತ್ಯ ಅಂತ ದೃಢವಾಗಿ ನಂಬಿ. ಮನಸ್ಸಿಗೆ ಬಂದ ಪ್ರಶ್ನೆಗಳ ಬಗ್ಗೆ ಸಂಶೋಧನೆ ಮಾಡಿ. (ರೋಮ 12:2) ನಿಮ್ಮ ಜೀವನದಲ್ಲಿ ಯಾವ ಬದಲಾವಣೆಗಳನ್ನ ಮಾಡ್ಕೊಳ್ಳಬೇಕು ಅಂತ ಗುರುತಿಸಿ. ನಂತ್ರ ಬೇಕಾದ ಬದಲಾವಣೆಗಳನ್ನ ಮಾಡಿ. ಯೆಹೋವನನ್ನ ಯಾವಾಗಲೂ ಮೆಚ್ಚಿಸಲು ಪ್ರಯತ್ನಿಸಿ. (ಜ್ಞಾನೋ 27:11; ಎಫೆ 4:23, 24) ಸಹಾಯಕ್ಕಾಗಿ ಆತನಿಗೆ ಪ್ರಾರ್ಥಿಸಿ. ಆಗ ಯೆಹೋವನು ತನ್ನ ಪವಿತ್ರಾತ್ಮ ಕೊಟ್ಟು ಖಂಡಿತ ನಿಮ್ಮನ್ನ ಬಲಪಡಿಸಿ ಸಹಾಯಮಾಡ್ತಾನೆ. (1ಪೇತ್ರ 5:10, 11) ನೀವು ಹಾಕಿದ ಪ್ರಯತ್ನ ಯಾವತ್ತಿಗೂ ವ್ಯರ್ಥ ಆಗಲ್ಲ. ಅತ್ಯುತ್ತಮ ಜೀವನ ಬೇಕಾದ್ರೆ ಯೆಹೋವನ ಸೇವೆ ಮಾಡೋ ಆಯ್ಕೆಮಾಡಿ!—ಕೀರ್ತ 16:11.
ದೀಕ್ಷಾಸ್ನಾನಕ್ಕೆ ದಾರಿ ಅನ್ನೊ ವಿಡಿಯೋ ನೋಡಿ. ನಂತ್ರ ಈ ಪ್ರಶ್ನೆಗಳಿಗೆ ಉತ್ರ ಕೊಡಿ:
-
ದೀಕ್ಷಾಸ್ನಾನದ ದಾರಿಯಲ್ಲಿ ಕೆಲವರು ಯಾವೆಲ್ಲಾ ಅಡ್ಡಿ-ತಡೆಗಳನ್ನ ಜಯಿಸಿದ್ದಾರೆ?
-
ನಿಮ್ಮ ಜೀವನವನ್ನ ಯೆಹೋವನಿಗೆ ಸಮರ್ಪಿಸಲು ಬೇಕಾದ ನಂಬಿಕೆಯನ್ನ ಹೇಗೆ ಬೆಳೆಸಿಕೊಳ್ಳಬಹುದು?
-
ದೀಕ್ಷಾಸ್ನಾನಕ್ಕೆ ಬೇಕಾದ ಹೆಜ್ಜೆಗಳನ್ನ ತಗೊಳ್ಳೋಕೆ ಕೆಲವರಿಗೆ ಯಾವುದು ಸಹಾಯ ಮಾಡಿದೆ?
-
ಯೆಹೋವನ ಸೇವೆನ ಆರಿಸಿಕೊಂಡವರಿಗೆ ಯಾವ ಆಶೀರ್ವಾದಗಳು ಸಿಗುತ್ತೆ?
-
ಸಮರ್ಪಣೆ ಮತ್ತು ದೀಕ್ಷಾಸ್ನಾನ ಅಂದ್ರೆ ಏನು?