ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಕ್ರೈಸ್ತ ಜೀವನ

ಯೆಹೋವನೇ ವಿವೇಕಿ ಅಂತ ಸೃಷ್ಟಿಯಿಂದ ತಿಳ್ಕೊಳ್ಳಿ

ಯೆಹೋವನೇ ವಿವೇಕಿ ಅಂತ ಸೃಷ್ಟಿಯಿಂದ ತಿಳ್ಕೊಳ್ಳಿ

ನಮಗೆ ಯಾವುದು ಒಳ್ಳೇದು ಅಂತ ಯೆಹೋವ ದೇವರಿಗೆ ಗೊತ್ತಾ? ಖಂಡಿತ ಗೊತ್ತು. ಹಾಗಾಗಿ ದೇವರು ಹೇಳೋದನ್ನ ನಾವು ಪಾಲಿಸಬೇಕು. ಅದೇ ಬುದ್ಧಿವಂತಿಕೆ. (ಜ್ಞಾನೋ 16:3, 9) ಆದ್ರೆ ದೇವರು ಕೊಟ್ಟಿರೋ ನಿರ್ದೇಶನ ಸರಿಯಿಲ್ಲ ಅಂತ ನಮಗೆ ಕೆಲವೊಮ್ಮೆ ಅನಿಸಬಹುದು. ಆಗ ಸೃಷ್ಟಿ ಬಗ್ಗೆ ತಿಳ್ಕೊಂಡು ಧ್ಯಾನಿಸುವಾಗ ಆತನೇ ಸರಿ, ಆತನಿಗೆ ತುಂಬ ವಿವೇಕ ಇದೆ ಅಂತ ನಮಗೆ ಗೊತ್ತಾಗುತ್ತೆ.—ಜ್ಞಾನೋ 30:24, 25; ರೋಮ 1:20.

ವಿಕಾಸವೇ? ವಿನ್ಯಾಸವೇ? ಇರುವೆಗಳಿಗೆ ಇಲ್ಲ ಟ್ರಾಫಿಕ್‌ ಜ್ಯಾಮ್‌ ಅನ್ನೋ ವಿಡಿಯೋ ನೋಡಿ ಈ ಪ್ರಶ್ನೆಗಳಿಗೆ ಉತ್ತರ ಕೊಡಿ:

  • ಪ್ರತಿದಿನ ಇರುವೆಗಳು ಏನು ಮಾಡುತ್ತವೆ?

  • ಅಷ್ಟು ಇರುವೆಗಳು ಓಡಾಡಿದ್ರೂ ಯಾಕೆ ಟ್ರಾಫಿಕ್‌ ಜ್ಯಾಮ್‌ ಆಗಲ್ಲ?

  • ಇರುವೆಗಳಿಂದ ವಿಜ್ಞಾನಿಗಳು ಏನು ಕಲಿತಿದ್ದಾರೆ?

ವಿಕಾಸವೇ? ವಿನ್ಯಾಸವೇ? ಜೇನು ನೊಣದ ಅಸಾಮಾನ್ಯ ಸಾಮರ್ಥ್ಯ ಅನ್ನೋ ವಿಡಿಯೋ ನೋಡಿ ಈ ಪ್ರಶ್ನೆಗಳಿಗೆ ಉತ್ತರ ಕೊಡಿ:

  • ಯಾವಾಗ ಚಿಕ್ಕ ವಿಮಾನಗಳ ಹಾರಾಟಕ್ಕೆ ತೊಂದ್ರೆ ಆಗುತ್ತೆ?

  • ಜೋರಾಗಿ ಗಾಳಿ ಬೀಸಿದ್ರೂ ಜೇನು ನೊಣ ಹೇಗೆ ಹಾರಾಡುತ್ತೆ?

  • ಈ ಜೇನು ನೊಣದ ಬುದ್ಧಿವಂತಿಕೆಯಿಂದ ಮನುಷ್ಯರು ಮುಂದೆ ಏನು ಸಾಧಿಸಬಹುದು?

ನೀವಿರೋ ಜಾಗದಲ್ಲಿ ಯಾವ ಸೃಷ್ಟಿ ನೋಡಿ ಯೆಹೋವನ ವಿವೇಕದ ಬಗ್ಗೆ ಕಲ್ತಿದ್ದೀರಾ?