ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಮ್ಮ ಕ್ರೈಸ್ತ ಜೀವನ

ಮಕ್ಕಳೇ, ಮನಸ್ಸಲ್ಲಿರೋದನ್ನ ಅಪ್ಪ-ಅಮ್ಮ ಹತ್ರ ಹೇಳಿ

ಮಕ್ಕಳೇ, ಮನಸ್ಸಲ್ಲಿರೋದನ್ನ ಅಪ್ಪ-ಅಮ್ಮ ಹತ್ರ ಹೇಳಿ

ನೀವು ಅಪ್ಪ-ಅಮ್ಮ ಹತ್ರ ಯಾಕೆ ಮನಸ್ಸು ಬಿಚ್ಚಿ ಮಾತಾಡಬೇಕು? (ಜ್ಞಾನೋ 23:26) ಯಾಕಂದ್ರೆ ನಿಮ್ಮನ್ನ ಚೆನ್ನಾಗಿ ನೋಡಿಕೊಳ್ಳೋ ಜವಾಬ್ದಾರಿನ ಮತ್ತು ಸರಿಯಾದ ದಾರಿ ತೋರಿಸೋ ಕೆಲಸನ ಯೆಹೋವ ನಿಮ್ಮ ಹೆತ್ತವರಿಗೆ ಕೊಟ್ಟಿದ್ದಾನೆ. (ಕೀರ್ತ 127:3, 4) ನೀವು ಅಪ್ಪ-ಅಮ್ಮ ಹತ್ರ ಏನೂ ಹೇಳಿಕೊಳ್ಳದೆ ಇದ್ರೆ ಅವರು ಹೇಗೆ ಸಹಾಯ ಮಾಡಕ್ಕಾಗುತ್ತೆ? ಅವರ ಅನುಭವದಿಂದ ನೀವು ಕಲಿಯೋದಾದ್ರೂ ಹೇಗೆ? ಅದಕ್ಕೇ ಮನಸ್ಸಲ್ಲಿರೋದನ್ನ ಅವರ ಹತ್ರ ಹೇಳ್ಕೊಬೇಕು. ಹಾಗಂತ ಎಲ್ಲಾ ವಿಷಯಗಳನ್ನ ಹೇಳಬೇಕು ಅಂತೇನಿಲ್ಲ. ಆದ್ರೆ ಅವರ ಹತ್ರ ಹೇಳಲೇಬೇಕಾದ ವಿಷಯಗಳನ್ನ ಮುಚ್ಚಿಡಬಾರದು.—ಜ್ಞಾನೋ 3:32.

ಸರಿಯಾದ ಸಮಯ ನೋಡಿ ಅಪ್ಪ-ಅಮ್ಮ ಹತ್ರ ಮಾತಾಡಿ. ನಿಮಗೆ ಮಾತಾಡೋಕೆ ಕಷ್ಟವಾದ್ರೆ ನಿಮ್ಮ ಮನಸ್ಸಲ್ಲಿ ಇರೋದನ್ನೆಲ್ಲ ಒಂದು ಪೇಪರಲ್ಲಿ ಬರೆದು ಕೊಡಿ. ನಿಮಗೆ ಇಷ್ಟ ಇಲ್ಲದೇ ಇರೋ ಒಂದು ವಿಷಯದ ಬಗ್ಗೆ ಅವರು ಮಾತಾಡೋಕೆ ಬಂದ್ರೆ ತಪ್ಪಿಸಿಕೊಳ್ಳೋಕೆ ನೋಡಬೇಡಿ. ಅವರು ನಿಮಗೆ ಸಹಾಯ ಮಾಡೋಕೆ ಬರುತ್ತಿದ್ದಾರೆ. ಅವರು ನಿಮ್ಮ ದೋಸ್ತ್‌ಗಳು, ದುಶ್ಮನ್‌ಗಳಲ್ಲ. ನೀವು ಮನಸ್ಸುಬಿಚ್ಚಿ ಮಾತಾಡಿದ್ರೆ ಈಗಲೂ ಮುಂದಕ್ಕೂ ನಿಮ್ಮ ಜೀವನ ಚೆನ್ನಾಗಿರುತ್ತೆ!—ಜ್ಞಾನೋ 4:10-12.

ನನ್ನ ಹದಿವಯಸ್ಸಿನ ಜೀವನ—ಹೆತ್ತವರ ಜೊತೆ ಮಾತಾಡೋದು ಹೇಗೆ? ಅನ್ನೋ ವಿಡಿಯೋ ನೋಡಿ ಈ ಪ್ರಶ್ನೆಗಳಿಗೆ ಉತ್ತರ ಕೊಡಿ:

  • ಎಸ್ತರ್‌ ಮತ್ತು ಪಾರ್ತಿಕ್‌ ತಮ್ಮ ಬಗ್ಗೆ ಏನು ಹೇಳಿದ್ರು?

  • ಯೇಸುವಿಂದ ನೀವೇನು ಕಲಿತ್ರಿ?

  • ನಿಮ್ಮ ಅಪ್ಪ-ಅಮ್ಮ ನಿಮ್ಮನ್ನ ಹೇಗೆಲ್ಲಾ ನೋಡಿಕೊಂಡಿದ್ದಾರೆ?

  • ನೀವು ಚೆನ್ನಾಗಿರಬೇಕು ಅನ್ನೋದೇ ಅಪ್ಪ-ಅಮ್ಮನ ಆಸೆ

    ಯಾವ ಬೈಬಲ್‌ ತತ್ವಗಳು ನಿಮ್ಮ ಅಪ್ಪ-ಅಮ್ಮ ಹತ್ರ ಮಾತಾಡೋಕೆ ಪ್ರೋತ್ಸಾಹ ಕೊಡುತ್ತೆ?