ನಮ್ಮ ಕ್ರೈಸ್ತ ಜೀವನ
ದೇವರ ವಾಕ್ಯದ ಮೇಲೆ ನಂಬಿಕೆ ಜಾಸ್ತಿ ಮಾಡ್ಕೊಳ್ತಾ ಇರಿ
ದೇವರ ವಾಕ್ಯಕ್ಕೆ ನಮ್ಮ ಜೀವನವನ್ನೇ ಬದಲಾಯಿಸೋ ಶಕ್ತಿ ಇದೆ. (ಇಬ್ರಿ 4:12) ಅದರಲ್ಲಿರೋ ಬುದ್ಧಿವಾದಗಳು, ಮಾರ್ಗದರ್ಶನೆಗಳು ಮತ್ತು ನಿರ್ದೇಶನಗಳಿಂದ ತುಂಬ ಪ್ರಯೋಜನ ಸಿಗುತ್ತೆ. ನಮಗೂ ಅದ್ರಿಂದ ಪ್ರಯೋಜನ ಸಿಗಬೇಕಾದ್ರೆ ಬೈಬಲನ್ನ “ದೇವರ ಮಾತು” ಅಂತ ನಂಬಬೇಕು. (1ಥೆಸ 2:13) ಆ ನಂಬಿಕೆಯನ್ನ ಬೆಳೆಸಿಕೊಳ್ಳೋದು ಹೇಗೆ?
ಬೈಬಲನ್ನ ಸ್ವಲ್ಪ ಓದಿದ್ರೂ ಪರವಾಗಿಲ್ಲ, ದಿನಾಲೂ ಓದಿ. ನೀವು ಓದುವಾಗ ದೇವರೇ ಬೈಬಲನ್ನ ಬರೆಸಿರೋದು ಅನ್ನೋಕೆ ಆಧಾರ ಹುಡುಕಿ. ಉದಾಹರಣೆಗೆ, ಜ್ಞಾನೋಕ್ತಿ ಪುಸ್ತಕದಲ್ಲಿರೋ ವಿವೇಕದ ಮಾತುಗಳನ್ನ ಪಾಲಿಸಿದ್ರೆ ಇವತ್ತಿಗೂ ನಮಗೆ ಹೇಗೆಲ್ಲಾ ಒಳ್ಳೇದಾಗುತ್ತೆ ಅಂತ ಯೋಚನೆ ಮಾಡಿ.—ಜ್ಞಾನೋ 13:20; 14:30.
ಏನಾದ್ರೂ ಪ್ರಾಜೆಕ್ಟ್ ಶುರುಮಾಡಿ. ಬೈಬಲನ್ನ ಮನುಷ್ಯರು ದೇವರ ಪವಿತ್ರ ಶಕ್ತಿಯಿಂದ ಬರೆದ್ರು ಅಂತ ತೋರಿಸೋ ಆಧಾರಗಳ ಬಗ್ಗೆ ಚೆನ್ನಾಗಿ ತಿಳಿದುಕೊಳ್ಳಿ. ಯೆಹೋವನ ಸಾಕ್ಷಿಗಳ ಸಂಶೋಧನಾ ಸಾಧನದಲ್ಲಿ “ಬೈಬಲ್” ಅನ್ನೋ ವಿಷಯದ ಕೆಳಗೆ “ದೇವಪ್ರೇರಿತ” ಅನ್ನೋ ವಿಭಾಗದಲ್ಲಿ ಇರೋ ಲೇಖನಗಳನ್ನ ಓದಿ. ಹೊಸ ಲೋಕ ಭಾಷಾಂತರದಲ್ಲಿ ಪರಿಶಿಷ್ಟ ಎ3ರಲ್ಲಿ ಇರೋ ಮಾಹಿತಿಯನ್ನೂ ಓದಿ. ಆಗ ಬೈಬಲಿನ ಸಂದೇಶ ಇವತ್ತಿಗೂ ಬದಲಾಗಿಲ್ಲ ಅನ್ನೋದಕ್ಕೆ ಸಾಕ್ಷಿ-ಆಧಾರಗಳು ಸಿಗುತ್ತೆ. ಇದು ನಿಮ್ಮ ನಂಬಿಕೆಯನ್ನ ಜಾಸ್ತಿ ಮಾಡುತ್ತೆ.
ಈ ವಿಷಯಗಳ ಮೇಲೆ ನಾವು ಯಾಕೆ ನಂಬಿಕೆ ಇಡಬೇಕು?—ದೇವರ ವಾಕ್ಯ ಅನ್ನೋ ವಿಡಿಯೋ ನೋಡಿ ಈ ಪ್ರಶ್ನೆಗಳಿಗೆ ಉತ್ತರ ಕೊಡಿ:
-
ಈಜಿಪ್ಟ್‌ನ ಕಾರ್ನಾಕ್‌ನಲ್ಲಿರೋ ಆಲಯದ ಗೋಡೆಯ ಮೇಲಿರೋ ಬರಹಗಳಿಂದ ದೇವರ ವಾಕ್ಯದಲ್ಲಿರೋದು ನಿಜ ಅಂತ ಹೇಗೆ ಗೊತ್ತಾಗಿದೆ?
-
ಬೈಬಲಲ್ಲಿರೋ ಸಂದೇಶ ಬದಲಾಗಿಲ್ಲ ಅಂತ ನಾವು ಹೇಗೆ ಹೇಳಬಹುದು?
-
ಬೈಬಲ್ ಈಗಲೂ ಇರೋದ್ರಿಂದ ಅದು ದೇವರ ವಾಕ್ಯನೇ ಅಂತ ನೀವು ಯಾಕೆ ನಂಬ್ತೀರ?—ಯೆಶಾಯ 40:8 ಓದಿ