ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಮ್ಮ ಕ್ರೈಸ್ತ ಜೀವನ

ಕಷ್ಟ ಸಹಿಸಿಕೊಳ್ಳೋಕೆ ಯೆಹೋವ ಶಕ್ತಿ ಕೊಡ್ತಾನೆ

ಕಷ್ಟ ಸಹಿಸಿಕೊಳ್ಳೋಕೆ ಯೆಹೋವ ಶಕ್ತಿ ಕೊಡ್ತಾನೆ

ನಾವು ಕೊನೇ ದಿನಗಳಲ್ಲಿ ಇರೋದರಿಂದ ನಮಗೆ ತುಂಬ ಕಷ್ಟಗಳು ಬರುತ್ತೆ. ಕೆಲವೊಂದು ಸಲ ‘ಇನ್ನು ನನ್ನಿಂದ ಸಹಿಸಕ್ಕಾಗಲ್ಲ’ ಅಂತಾನೂ ಅನಿಸಿಬಿಡುತ್ತೆ. ಆಗ ನಾವು ಯೆಹೋವನ ಜೊತೆ ಇರೋ ಸ್ನೇಹವನ್ನ ಇನ್ನೂ ಗಟ್ಟಿಮಾಡಿಕೊಂಡ್ರೆ ಕಷ್ಟಗಳನ್ನ ಸಹಿಸಿಕೊಳ್ಳೋಕೆ ಆತನು ಸಹಾಯ ಮಾಡ್ತಾನೆ. (ಯೆಶಾ 43:2, 4) ಯೆಹೋವನ ಜೊತೆ ನಮ್ಮ ಸ್ನೇಹವನ್ನ ಗಟ್ಟಿಮಾಡಿಕೊಳ್ಳೋಕೆ ಏನು ಮಾಡಬೇಕು?

ಪ್ರಾರ್ಥನೆ. ನಾವು ಯೆಹೋವನ ಹತ್ರ ಮನಸ್ಸುಬಿಚ್ಚಿ ಮಾತಾಡಿದ್ರೆ ಮನಸ್ಸಿಗೆ ನೆಮ್ಮದಿಯನ್ನ, ಕಷ್ಟ ಸಹಿಸಿಕೊಳ್ಳೋಕೆ ಬೇಕಾದ ಬಲವನ್ನ ಆತನು ನಮಗೆ ಕೊಟ್ಟೇ ಕೊಡ್ತಾನೆ.—ಫಿಲಿ 4:6, 7; 1ಥೆಸ 5:17.

ಕೂಟಗಳು. ಕಷ್ಟದಲ್ಲಿದ್ದಾಗ ನಮಗೆ ಬೈಬಲಲ್ಲಿರೋ ಸಾಂತ್ವನದ ಮಾತುಗಳು ಮತ್ತು ಸಭೆಯವರ ಬೆಂಬಲ ಜಾಸ್ತಿ ಬೇಕು. ಅದು ನಮಗೆ ಕೂಟಗಳಿಂದ ಸಿಗುತ್ತೆ. (ಇಬ್ರಿ 10:24, 25) ಹಾಗಾಗಿ ಕೂಟಗಳಿಗೆ ಚೆನ್ನಾಗಿ ತಯಾರಿ ಮಾಡಿ, ತಪ್ಪದೆ ಕೂಟಗಳಿಗೆ ಹೋಗಿ ಮತ್ತು ಉತ್ತರ ಕೊಡಿ. ಹೀಗೆ ಪವಿತ್ರಶಕ್ತಿಯಿಂದ ಸಿಗೋ ಬಲವನ್ನ ಪಡಕೊಳ್ಳಿ.—ಪ್ರಕ 2:29.

ಸೇವೆ. ಸೇವೆಯಲ್ಲಿ ಜಾಸ್ತಿ ಸಮಯ ಕಳೆದ್ರೆ ಯೆಹೋವ ಕೊಡೋ ಆಶೀರ್ವಾದಗಳ ಬಗ್ಗೆನೇ ಯೋಚನೆ ಮಾಡ್ತೀವಿ. ಸಭೆಯವರ ಜೊತೆ ಮತ್ತು ಯೆಹೋವನ ಜೊತೆ ನಮಗಿರೋ ಸಂಬಂಧ ಇನ್ನೂ ಗಟ್ಟಿಯಾಗುತ್ತೆ.—1ಕೊರಿಂ 3:5-10.

ನನಗೆ ಶಕ್ತಿ ಯೆಹೋವನಿಂದಲೇ ಅನ್ನೋ ವಿಡಿಯೋ ನೋಡಿ ಈ ಪ್ರಶ್ನೆಗಳಿಗೆ ಉತ್ತರ ಕೊಡಿ:

  • ಕಷ್ಟ ಬಂದಾಗ ಯೆಹೋವನ ಜೊತೆ ಸ್ನೇಹವನ್ನ ಗಟ್ಟಿಮಾಡಿಕೊಳ್ಳೋಕೆ ಮಾಲುಗೆ ಯಾವುದು ಸಹಾಯ ಮಾಡ್ತು?

  • ಕೀರ್ತನೆ 34:18ರಲ್ಲಿರೋ ಮಾತುಗಳು ಮಾಲುಗೆ ಸಹಾಯ ಮಾಡಿದ ತರ ನಮಗೂ ಹೇಗೆ ಸಹಾಯ ಮಾಡುತ್ತೆ?

  • ನಮಗೆ ಕಷ್ಟಗಳು ಬಂದಾಗ “ಸಾಮಾನ್ಯವಾಗಿ ಇರೋ ಶಕ್ತಿಗಿಂತ ಇನ್ನೂ ಹೆಚ್ಚಿನ ಶಕ್ತಿನ” ಯೆಹೋವ ಕೊಡ್ತಾನೆ ಅಂತ ಮಾಲು ಅವರಿಂದ ಹೇಗೆ ಗೊತ್ತಾಗುತ್ತೆ?—2ಕೊರಿಂ 4:7