ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಮ್ಮ ಕ್ರೈಸ್ತ ಜೀವನ

ಯೆಹೋವನ ಯೋಚನೆ ಏನು ಅಂತ ಹುಡುಕಿ ತಿಳಿದುಕೊಳ್ಳಿ

ಯೆಹೋವನ ಯೋಚನೆ ಏನು ಅಂತ ಹುಡುಕಿ ತಿಳಿದುಕೊಳ್ಳಿ

ನಾವು ಯಾವಾಗಲೂ ಯೆಹೋವನಿಗೆ ಖುಷಿಯಾಗೋ ತರ ನಡೆದುಕೊಳ್ಳಬೇಕು ಅಂತ ಆಸೆ ಪಡ್ತೀವಿ. (ಜ್ಞಾನೋ 27:11) ಹಾಗಾಗಿ ನಾವು ನಿರ್ಧಾರಗಳನ್ನು ಮಾಡುವಾಗ, ಅದ್ರ ಬಗ್ಗೆ ಬೈಬಲಲ್ಲಿ ನೇರವಾದ ನಿಯಮ ಇಲ್ಲದಿದ್ದರೂ ಯೆಹೋವನಿಗೆ ಏನು ಇಷ್ಟ ಆಗುತ್ತೆ ಅಂತ ತಿಳ್ಕೊಬೇಕು. ಅದನ್ನ ತಿಳ್ಕೊಳ್ಳೋಕೆ ಯಾವುದು ಸಹಾಯ ಮಾಡುತ್ತೆ?

ಬೈಬಲನ್ನ ದಿನಾಲೂ ಓದಿ. ನಾವು ಬೈಬಲ್‌ ಓದಿದಾಗೆಲ್ಲಾ ಯೆಹೋವನ ಜೊತೆ ಸಮಯ ಕಳೆದ ಹಾಗೆ ಇರುತ್ತೆ. ಆತನು ತನ್ನ ಜನರ ಜೊತೆ ಹೇಗೆ ನಡ್ಕೊಂಡನು ಮತ್ತು ಜನರು ಆತನ ದೃಷ್ಟಿಯಲ್ಲಿ ಒಳ್ಳೇದನ್ನ ಮಾಡಿದಾಗ ಅಥವಾ ಕೆಟ್ಟದನ್ನ ಮಾಡಿದಾಗ ಯೆಹೋವನಿಗೆ ಹೇಗೆ ಅನಿಸ್ತು ಅಂತ ಓದುವಾಗ, ಆತನು ಹೇಗೆ ಯೋಚನೆ ಮಾಡ್ತಾನೆ ಅಂತ ತಿಳಿದುಕೊಳ್ತೀವಿ. ನಿರ್ಧಾರಗಳನ್ನ ಮಾಡಬೇಕಾದಾಗ, ಬೈಬಲಿಂದ ನಾವು ಕಲಿತ ಪಾಠಗಳು ಮತ್ತು ತತ್ವಗಳು ನಮ್ಮ ನೆನಪಿಗೆ ಬರೋ ತರ ಪವಿತ್ರ ಶಕ್ತಿ ಸಹಾಯ ಮಾಡುತ್ತೆ.—ಯೋಹಾ 14:26.

ಬೈಬಲ್‌ ಪ್ರಕಾಶನಗಳಲ್ಲಿ ಹುಡುಕಿ. ನೀವು ಏನಾದರೂ ನಿರ್ಧಾರ ಮಾಡಬೇಕಾದಾಗ, ಈ ವಿಷಯದ ಬಗ್ಗೆ ಯೆಹೋವನಿಗೆ ಹೇಗನಿಸುತ್ತೆ ಅಂತ ಹೇಳೋ ಯಾವುದಾದರೂ ವಚನ ಅಥವಾ ಘಟನೆ ಇದೆಯಾ ಅಂತ ಯೋಚಿಸಿ. ಯೆಹೋವನ ಹತ್ರ ಸಹಾಯ ಕೇಳಿ, ನಿಮ್ಮ ಭಾಷೆಯಲ್ಲಿರೋ ಪ್ರಕಾಶನಗಳಲ್ಲಿ ಹುಡುಕಿ. ಆಗ ಸರಿಯಾದ ತೀರ್ಮಾನ ಮಾಡೋಕೆ ಸಹಾಯ ಮಾಡೋ ಬೈಬಲ್‌ ತತ್ವಗಳು ಸಿಗುತ್ತೆ.​—ಕೀರ್ತ 25:4.

ನಾವು ‘ತಾಳ್ಮೆಯಿಂದ ಓಡಬೇಕು’—ಪೌಷ್ಠಿಕ ಆಹಾರ ಸೇವಿಸಿ ಅನ್ನೋ ವಿಡಿಯೋ ನೋಡಿ ಈ ಪ್ರಶ್ನೆಗಳಿಗೆ ಉತ್ತರ ಕೊಡಿ:

  • ವಿಡಿಯೋದಲ್ಲಿ ನೋಡಿದ ಆ ಯುವ ಸಹೋದರಿಗೆ ಯಾವ ಒತ್ತಡ ಬಂತು?

  • ಅಂಥ ಒತ್ತಡಗಳು ನಿಮಗೆ ಬಂದ್ರೆ ಅದನ್ನ ನಿಭಾಯಿಸೋಕೆ ಪ್ರಕಾಶನಗಳಿಂದ ಹೇಗೆ ಸಹಾಯ ಪಡೆದುಕೊಳ್ತೀರ?

  • ಒಂದು ನಿರ್ಧಾರ ಮಾಡೋ ಮುಂಚೆ ನಾವ್ಯಾಕೆ ಅದರ ಬಗ್ಗೆ ಪ್ರಕಾಶನಗಳಲ್ಲಿ ಹುಡುಕಿ ಅಧ್ಯಯನ ಮಾಡಬೇಕು?—ಇಬ್ರಿ 5:13, 14