ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಮ್ಮ ಕ್ರೈಸ್ತ ಜೀವನ

ಸ್ಮರಣೆಯ ಸಮಯದಲ್ಲಿ ಜಾಸ್ತಿ ಸೇವೆ ಮಾಡೋಕೆ ಗುರಿಗಳನ್ನ ಇಡಿ

ಸ್ಮರಣೆಯ ಸಮಯದಲ್ಲಿ ಜಾಸ್ತಿ ಸೇವೆ ಮಾಡೋಕೆ ಗುರಿಗಳನ್ನ ಇಡಿ

ಪ್ರತಿ ವರ್ಷ, ಸ್ಮರಣೆಯ ಕಾರ್ಯಕ್ರಮಕ್ಕಾಗಿ ಯೆಹೋವನ ಸಾಕ್ಷಿಗಳು ಕಾಯ್ತಾ ಇರ್ತಾರೆ. ಯೆಹೋವ ಬಿಡುಗಡೆ ಬೆಲೆಯನ್ನ ನಮಗೋಸ್ಕರ ಕೊಟ್ಟಿರೋದಕ್ಕೆ ನಾವು ಸ್ಮರಣೆಯ ಸಮಯದಲ್ಲಿ ಆತನನ್ನ ಹೊಗಳುತ್ತೀವಿ ಮತ್ತು ಥ್ಯಾಂಕ್ಸ್‌ ಹೇಳ್ತೀವಿ. (ಎಫೆ 1:3, 7) ಅದಕ್ಕೆ ನಾವು ಆದಷ್ಟು ಹೆಚ್ಚು ಜನರನ್ನ ಸ್ಮರಣೆಯ ಕಾರ್ಯಕ್ರಮಕ್ಕೆ ಆಮಂತ್ರಿಸುತ್ತೀವಿ. ಕೆಲವರು ಮಾರ್ಚ್‌ ಮತ್ತು ಏಪ್ರಿಲ್‌ ತಿಂಗಳಲ್ಲಿ 30 ಅಥವಾ 50 ತಾಸುಗಳನ್ನ ಮಾಡಿ, ಸಹಾಯಕ ಪಯನೀಯರ್‌ ಸೇವೆ ಮಾಡೋಕೆ ಕೆಲವು ಹೊಂದಾಣಿಕೆಗಳನ್ನ ಮಾಡಿಕೊಂಡಿದ್ದಾರೆ. ಸ್ಮರಣೆಯ ಸಮಯದಲ್ಲಿ ಹೆಚ್ಚು ತಾಸು ಸೇವೆ ಮಾಡೋಕೆ ನಿಮಗೆ ಆಸೆ ಇದೆಯಾ? ಅದನ್ನ ನೀವು ಹೇಗೆ ಮಾಡಬಹುದು?

ಮುಂಚಿತವಾಗಿಯೇ ಯೋಜನೆ ಅಥವಾ ಪ್ಲಾನ್‌ ಮಾಡಿದ್ರೆ ನಿಮ್ಮಿಂದ ಮಾಡೋಕೆ ಆಗುತ್ತೆ. (ಜ್ಞಾನೋ 21:5) ಸ್ಮರಣೆಯ ಸಮಯ ಹತ್ರ ಇರೋದ್ರಿಂದ ಈಗಲೇ ಪ್ಲಾನ್‌ ಮಾಡಿ. ನಿಮ್ಮ ಸೇವೆಯನ್ನ ಹೇಗೆಲ್ಲಾ ಜಾಸ್ತಿ ಮಾಡೋಕೆ ಆಗುತ್ತೆ, ಅದಕ್ಕಾಗಿ ಏನು ಮಾಡಬೇಕು ಅಂತ ಯೋಚಿಸಿ. ಯೆಹೋವನ ಹತ್ರ ಸಹಾಯ ಕೇಳಿ. ಹೀಗೆ ಮಾಡಿದ್ರೆ ನಿಮ್ಮ ಗುರಿ ಮುಟ್ಟೋಕೆ ಆಗುತ್ತೆ.—1ಯೋಹಾ 5:14, 15.

ಸ್ಮರಣೆಯ ಸಮಯದಲ್ಲಿ ಹೇಗೆಲ್ಲಾ ಜಾಸ್ತಿ ಸೇವೆ ಮಾಡೋಕೆ ಆಗುತ್ತೆ ಅಂತ ಯೋಚಿಸುತ್ತೀರಾ?