ಜನವರಿ 15-21
ಯೋಬ 36-37
ಗೀತೆ 12 ಮತ್ತು ಪ್ರಾರ್ಥನೆ | ಆರಂಭದ ಮಾತುಗಳು (1 ನಿ.)
1. ಶಾಶ್ವತ ಜೀವ ಸಿಗುತ್ತೆ ಅಂತ ನೀವ್ಯಾಕೆ ನಂಬಬಹುದು?
(10 ನಿ.)
ಯೆಹೋವ ಶಾಶ್ವತಕ್ಕೂ ಇರೋ ದೇವರು (ಯೋಬ 36:26; ಕಾವಲಿನಬುರುಜು (ಸಾರ್ವಜನಿಕ)16.1 ಪುಟ 13 ಪ್ಯಾರ 1-2)
ಶಾಶ್ವತ ಜೀವ ಕೊಡೋ ಶಕ್ತಿ ಮತ್ತು ವಿವೇಕ ಯೆಹೋವನಿಗೆ ಇದೆ (ಯೋಬ 36:27, 28; ಕಾವಲಿನಬುರುಜು20.05 ಪುಟ 22 ಪ್ಯಾರ 6)
ಶಾಶ್ವತ ಜೀವ ಪಡ್ಕೊಳ್ಳೋಕೆ ನಾವೇನು ಮಾಡಬೇಕು ಅಂತನೂ ಯೆಹೋವ ಕಲಿಸಿದ್ದಾನೆ (ಯೋಬ 36:4, 22; ಯೋಹಾ 17:3)
ಎಂಥ ಕಷ್ಟ ಬಂದ್ರೂ ಶಾಶ್ವತ ಜೀವ ಸಿಗುತ್ತೆ ಅನ್ನೋ ನಂಬಿಕೆ ಇರೋದ್ರಿಂದ ನಾವದನ್ನ ಸಹಿಸ್ಕೊಳ್ತೀವಿ.—ಇಬ್ರಿ 6:19; ಕಾವಲಿನಬುರುಜು22.10 ಪುಟ 28 ಪ್ಯಾರ 16.
2. ಬೈಬಲಿನಲ್ಲಿರುವ ರತ್ನಗಳು
(10 ನಿ.)
-
ಯೋಬ 37:20—ಹಿಂದಿನ ಕಾಲದಲ್ಲಿದ್ದವ್ರಿಗೆ ಬೇರೆ ಕಡೆ ನಡಿತಿರೋ ಸುದ್ದಿ-ಸಮಾಚಾರಗಳು ಹೇಗೆ ಗೊತ್ತಾಗ್ತಾ ಇತ್ತು? (it-1-E ಪುಟ 492)
-
ಈ ವಾರದ ಬೈಬಲ್ ಅಧ್ಯಾಯಗಳಿಂದ ನೀವೇನು ಕಲಿತ್ರಿ?
3. ಬೈಬಲ್ ಓದುವಿಕೆ
(4 ನಿ.) ಯೋಬ 36:1-21 (ಪ್ರಗತಿ ಪಾಠ 2)
4. ಸಂಭಾಷಣೆ ಶುರುಮಾಡಿ
(3 ನಿ.) ಸಾರ್ವಜನಿಕ ಸಾಕ್ಷಿ: (ಪ್ರೀತಿಸಿ-ಕಲಿಸಿ ಪಾಠ 3ರ ಪಾಯಿಂಟ್ 3)
5. ಮತ್ತೆ ಭೇಟಿ ಮಾಡಿ
(4 ನಿ.) ಮನೆ-ಮನೆ ಸೇವೆ: (ಪ್ರೀತಿಸಿ-ಕಲಿಸಿ ಪಾಠ 2ರ ಪಾಯಿಂಟ್ 5)
6. ನಿಮ್ಮ ನಂಬಿಕೆ ಬಗ್ಗೆ ಹೇಳಿ
(5 ನಿ.) ಭಾಷಣ. ijwfq ಲೇಖನ 57 ಪ್ಯಾರ 5-15—ವಿಷ್ಯ: ಹತ್ಯಾಕಾಂಡದಲ್ಲಿ ಯೆಹೋವನ ಸಾಕ್ಷಿಗಳಿಗೆ ಯಾಕೆ ಹಿಂಸೆ ಕೊಟ್ರು? (ಪ್ರಗತಿ ಪಾಠ 18)
ಗೀತೆ 11
7. ಚಿಕಿತ್ಸೆ ಪಡೆಯೋಕೆ ಮುಂಚೆನೇ ತಯಾರಾಗಿ
(15 ನಿ.) ಚರ್ಚೆ. ಒಬ್ಬ ಹಿರಿಯ ನಡೆಸಬೇಕು.
ರಕ್ತದಿಂದ ದೂರವಿರಿ ಅಂತ ಯೆಹೋವ ಕೊಟ್ಟ ನಿಯಮ ಪಾಲಿಸೋಕೆ ಇವತ್ತು ಯೆಹೋವ ಸಂಘಟನೆ ನಮಗೆ ತುಂಬ ಸಹಾಯ ಮಾಡ್ತಿದೆ. (ಅಕಾ 15:28, 29) ಹೇಗೆಲ್ಲಾ ಸಹಾಯ ಮಾಡ್ತಿದೆ ಅಂತ ನೋಡಿ.
ಡ್ಯೂರಬಲ್ ಪವರ್ ಆಫ್ ಅಟರ್ನಿ (DPA) ಕಾರ್ಡ್ ಮತ್ತು ಐಡೆಂಟಿಟಿ ಕಾರ್ಡ್ (ic): ಚಿಕಿತ್ಸೆ ಮಾಡುವಾಗ ರಕ್ತದ ಬಳಕೆ ಬಗ್ಗೆ ರೋಗಿಗೆ ಯಾವ ಅಭಿಪ್ರಾಯ ಇದೆ ಅಂತ ಈ ಕಾರ್ಡ್ ತಿಳಿಸುತ್ತೆ. ದೀಕ್ಷಾಸ್ನಾನ ತಗೊಂಡಿರೋ ಪ್ರಚಾರಕರು ಡಿ. ಪಿ. ಎ ಕಾರ್ಡನ್ನ ಸಾಹಿತ್ಯ ಸೇವಕನಿಂದ ಪಡ್ಕೊಬಹುದು. ಚಿಕ್ಕ ಮಕ್ಕಳಿಗಾಗಿರೋ ಐಡೆಂಟಿಟಿ ಕಾರ್ಡನ್ನೂ ಹೆತ್ತವರು ಅವ್ರಿಂದ ಪಡ್ಕೊಬಹುದು. ಈ ಕಾರ್ಡಗಳನ್ನ ಯಾವಾಗ್ಲೂ ನಿಮ್ಮ ಹತ್ರ ಇಟ್ಕೊಂಡಿರಬೇಕು. ಒಂದುವೇಳೆ ನಿಮಗೆ ಕಾರ್ಡನ್ನ ಅಪ್ಡೇಟ್ ಮಾಡಬೇಕಿದ್ರೆ ತಡ ಮಾಡಬೇಡಿ. ಬೇಗ ಅದನ್ನ ತುಂಬಿಸಿ.
ತಾಯಿ ಆಗಲಿರುವವರಿಗೆ ಮಾಹಿತಿ (S-401) ಮತ್ತು ಶಸ್ತ್ರಚಿಕಿತ್ಸೆ ಅಥವಾ ಕಿಮೋಥೆರಪಿಯ ಅಗತ್ಯವಿರುವ ರೋಗಿಗಳಿಗೆ ಬೇಕಾದ ಮಾಹಿತಿ (S-407): ಚಿಕಿತ್ಸೆ ಪಡ್ಕೊಳ್ಳುವಾಗ ರಕ್ತ ತಗೊಬೇಕಾಗಿ ಬಂದ್ರೆ ಏನು ಮಾಡಬೇಕು ಅಂತ ತಿಳ್ಕೊಳ್ಳೋಕೆ ಈ ಫಾರ್ಮ್‌ಗಳು ಸಹಾಯ ಮಾಡುತ್ತೆ. ನೀವು ಗರ್ಭಿಣಿ ಆಗಿದ್ರೆ, ಶಸ್ತ್ರ ಚಿಕಿತ್ಸೆ ಅಥವಾ ಕ್ಯಾನ್ಸರಿಗಾಗಿ ಚಿಕಿತ್ಸೆ ಮಾಡಿಸ್ಕೊಬೇಕಿದ್ರೆ ಈ ಫಾರ್ಮ್‌ಗಳನ್ನ ಹಿರಿಯರ ಹತ್ರ ಕೇಳಿ ತಗೊಳ್ಳಿ.
ಹಾಸ್ಪಿಟಲ್ ಲಿಏಸಾನ್ ಕಮಿಟಿ (HLC): ಹೆಚ್. ಎಲ್. ಸಿ ಡಿಪಾರ್ಟ್‌ಮೆಂಟಲ್ಲಿ ತರಬೇತಿ ಪಡೆದ ಹಿರಿಯರು ಇರ್ತಾರೆ. ಹಾಗಾಗಿ ರಕ್ತದ ವಿಷ್ಯದಲ್ಲಿ ಡಾಕ್ಟರ್‌ಗಳಿಗೆ ಮತ್ತು ಪ್ರಚಾರಕರಿಗೆ ಯಾವ ಮಾಹಿತಿ ಕೊಡಬೇಕು ಅಂತ ಅವ್ರಿಗೆ ಗೊತ್ತಿರುತ್ತೆ. ಅಷ್ಟೇ ಅಲ್ಲ ಅವರು ನಿಮ್ಮ ಡಾಕ್ಟರ್ ಹತ್ರ, ರಕ್ತ ಕೊಡದೇ ಚಿಕಿತ್ಸೆ ಮಾಡೋಕೆ ಆಗುತ್ತಾ ಅಂತ ಕೇಳಿ ತಿಳ್ಕೊಳ್ತಾರೆ. ಒಂದುವೇಳೆ ಆ ಡಾಕ್ಟರ್ ಆಗಲ್ಲ ಅಂತ ಹೇಳಿದ್ರೆ ಇನ್ನೊಂದು ಡಾಕ್ಟರ್ ಹತ್ರ ಚಿಕಿತ್ಸೆ ಪಡ್ಕೊಳ್ಳೋಕೆ ಸಹಾಯ ಮಾಡ್ತಾರೆ. ಅವರು ದಿನದ 24 ಗಂಟೆ, ವಾರದ 7 ದಿನನೂ ನಿಮಗೆ ಸಹಾಯ ಮಾಡೋಕೆ ರೆಡಿ ಇರ್ತಾರೆ. ನೀವು ಆಸ್ಪತ್ರೆಯಲ್ಲಿ ಎಡ್ಮಿಟ್ ಆಗಬೇಕಾಗಿ ಬಂದ್ರೆ, ಶಸ್ತ್ರ ಚಿಕಿತ್ಸೆ ಅಥವಾ ಕ್ಯಾನ್ಸರಿಗಾಗಿ ಚಿಕಿತ್ಸೆ ಮಾಡಿಸ್ಕೊಬೇಕಾಗಿ ಬಂದ್ರೆ ಆದಷ್ಟು ಬೇಗ ಹೆಚ್. ಎಲ್. ಸಿ ಡಿಪಾರ್ಟ್‌ಮೆಂಟಿಗೆ ತಿಳಿಸಿ. ಒಂದುವೇಳೆ ರಕ್ತ ತಗೊಳ್ಳದೆ ಚಿಕಿತ್ಸೆ ಮಾಡಬೇಕಾದ್ರೂ ಅವ್ರನ್ನ ಸಂಪರ್ಕಿಸಿ. ಗರ್ಭಿಣಿಯರೂ ಅವ್ರ ಸಹಾಯ ಪಡ್ಕೊಬಹುದು. ಈ ಡಿಪಾರ್ಟ್‌ಮೆಂಟನ್ನ ಸಂಪರ್ಕಿಸೋಕೆ ಸಹಾಯ ಬೇಕಿದ್ರೆ ಹಿರಿಯರ ಹತ್ರ ಕೇಳಿ.
ಹೆಚ್. ಎಲ್. ಸಿ ಡಿಪಾರ್ಟ್‌ಮೆಂಟ್ ಹೇಗೆ ಕೆಲಸ ಮಾಡುತ್ತೆ? ಅನ್ನೋ ವಿಡಿಯೋ ಹಾಕಿ. ಆಮೇಲೆ ಈ ಪ್ರಶ್ನೆ ಕೇಳಿ:
ಚಿಕಿತ್ಸೆ ಪಡ್ಕೊಳ್ಳೋ ಪರಿಸ್ಥಿತಿ ಬಂದ್ರೆ ಹೆಚ್. ಎಲ್. ಸಿ ಡಿಪಾರ್ಟ್‌ಮೆಂಟ್ ನಿಮಗೆ ಹೇಗೆ ಸಹಾಯ ಮಾಡುತ್ತೆ?
8. ಸಭಾ ಬೈಬಲ್ ಅಧ್ಯಯನ
(30 ನಿ.) ಕೂಲಂಕಷ ಸಾಕ್ಷಿ ಅಧ್ಯಾಯ 4ರ ಪ್ಯಾರ 9-12 ಮತ್ತು ಪುಟ 34ರಲ್ಲಿರೋ ಚೌಕ