ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಜನವರಿ 29–ಫೆಬ್ರವರಿ 4

ಯೋಬ 40-42

ಜನವರಿ 29–ಫೆಬ್ರವರಿ 4

ಗೀತೆ 63 ಮತ್ತು ಪ್ರಾರ್ಥನೆ | ಆರಂಭದ ಮಾತುಗಳು (1 ನಿ.)

ಬೈಬಲಿನಲ್ಲಿರುವ ನಿಧಿ

1. ಯೋಬನಿಂದ ನಾವೇನು ಕಲಿಬಹುದು?

(10 ನಿ.)

ನಿಮಗಿಂತ ಯೆಹೋವನಿಗೆ ಎಲ್ಲ ಗೊತ್ತು ಅನ್ನೋದನ್ನ ನೆನಪಲ್ಲಿಡಿ (ಯೋಬ 42:1-3; ಕಾವಲಿನಬುರುಜು10 10/15 ಪುಟ 3-4 ಪ್ಯಾರ 4-6)

ಯೆಹೋವನಿಂದ ಮತ್ತು ಸಂಘಟನೆಯಿಂದ ನಿಮಗೆ ಏನಾದ್ರು ಸಲಹೆ ಸಿಕ್ಕಿದ್ರೆ ಅದನ್ನ ಮನಸಾರೆ ಒಪ್ಕೊಳ್ಳಿ (ಯೋಬ 42:5, 6; ಕಾವಲಿನಬುರುಜು17.06 ಪುಟ 25 ಪ್ಯಾರ 12)

ಎಷ್ಟೇ ಕಷ್ಟ ಆದ್ರೂ ಯೆಹೋವನಿಗೆ ನಿಯತ್ತಾಗಿದ್ರೆ ಆತನು ನಮ್ಮನ್ನ ಆಶೀರ್ವದಿಸ್ತಾನೆ (ಯೋಬ 42:10-12; ಯಾಕೋ 5:11; ಕಾವಲಿನಬುರುಜು22.06 ಪುಟ 25 ಪ್ಯಾರ 17-18)

ನಿಯತ್ತಾಗಿ ಇದ್ದಿದ್ದಕ್ಕೆ ಯೆಹೋವ ಯೋಬನನ್ನ ಆಶೀರ್ವದಿಸಿದನು

2. ಬೈಬಲಿನಲ್ಲಿರುವ ರತ್ನಗಳು

(10 ನಿ.)

  • ಯೋಬ 42:7 —ಯೋಬನ ಆ ಮೂರು ಸ್ನೇಹಿತರು ಯಾರ ವಿರುದ್ಧ ಮಾತಾಡಿದ್ರು? ಇದನ್ನ ತಿಳ್ಕೊಳ್ಳೋದ್ರಿಂದ ನಮಗೇನು ಪ್ರಯೋಜನ? (it-2-E ಪುಟ 808)

  • ಈ ವಾರದ ಬೈಬಲ್‌ ಅಧ್ಯಾಯಗಳಿಂದ ನೀವೇನು ಕಲಿತ್ರಿ?

3. ಬೈಬಲ್‌ ಓದುವಿಕೆ

ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ

4. ಸಂಭಾಷಣೆ ಶುರುಮಾಡಿ

(3 ನಿ.) ಮನೆ-ಮನೆ ಸೇವೆ: ಕ್ರೈಸ್ತನಲ್ಲದ ವ್ಯಕ್ತಿ ಹತ್ರ ಮಾತಾಡ್ತಿದ್ದೀರ. (ಪ್ರೀತಿಸಿ-ಕಲಿಸಿ ಪಾಠ 5ರ ಪಾಯಿಂಟ್‌ 3)

5. ಶಿಷ್ಯರಾಗೋಕೆ ಕಲಿಸಿ

6. ಭಾಷಣ

(4 ನಿ.) ಪ್ರೀತಿಸಿ-ಕಲಿಸಿ ಪರಿಶಿಷ್ಟ ಎ ಪಾಯಿಂಟ್‌ 2—ವಿಷ್ಯ: ಈ ಭೂಮಿ ಯಾವತ್ತೂ ನಾಶ ಆಗಲ್ಲ. (ಪ್ರಗತಿ ಪಾಠ 13)

ನಮ್ಮ ಕ್ರೈಸ್ತ ಜೀವನ

ಗೀತೆ 18

7. ಯೆಹೋವನ ಪ್ರೀತಿಯನ್ನ ಅರ್ಥ ಮಾಡ್ಕೊಳ್ಳೋಕೆ ಬೇರೆಯವ್ರಿಗೆ ಸಹಾಯ ಮಾಡಿ

(15 ನಿ.) ಚರ್ಚೆ.

ಯೆಹೋವ ಪ್ರೀತಿಯಾಗಿದ್ದಾನೆ. (1ಯೋಹಾ 4:8, 16) ಆ ಪ್ರೀತಿ ನಮ್ಮನ್ನ ಆತನ ಹತ್ರ ಸೆಳೆಯುತ್ತೆ ಮತ್ತು ನಾವು ಯಾವಾಗ್ಲೂ ಆತನಿಗೆ ಹತ್ರ ಆಗೋಕೆ ಸಹಾಯ ಮಾಡುತ್ತೆ. ಯೆಹೋವನ ಸೇವಕರಾದ ನಾವು, ಇಲ್ಲಿ ತನಕ ಯೆಹೋವ ತೋರಿಸಿರೋ ಪ್ರೀತಿಯನ್ನ ಕಣ್ಣಾರೆ ನೋಡಿದ್ದೀವಿ.

ನಾವೂ ಯೆಹೋವನ ತರ ನಮ್ಮ ಕುಟುಂಬದವ್ರನ್ನ, ಸಹೋದರ ಸಹೋದರಿಯರನ್ನ ಮತ್ತು ಬೇರೆಯವ್ರನ್ನ ಪ್ರೀತಿಸಬೇಕು. (ಯೋಬ 6:14; 1ಯೋಹಾ 4:11) ಆಗ ಅವರು ಯೆಹೋವನ ಬಗ್ಗೆ ಕಲಿಯೋಕೆ ಮುಂದೆ ಬರ್ತಾರೆ, ಆತನಿಗೆ ಹತ್ರ ಆಗ್ತಾರೆ. ಒಂದುವೇಳೆ ನಾವು ಪ್ರೀತಿ ತೋರಿಸದೇ ಇದ್ರೆ ಯೆಹೋವನ ಪ್ರೀತಿಯನ್ನ ಅರ್ಥ ಮಾಡ್ಕೊಳ್ಳೋಕೆ ಅವ್ರಿಗೆ ಕಷ್ಟ ಆಗುತ್ತೆ.

ಯೆಹೋವನ ಕುಟುಂಬದಲ್ಲಿ ನಮಗೆ ನಿಜ ಪ್ರೀತಿ ಸಿಕ್ತು ಅನ್ನೋ ವಿಡಿಯೋ ಹಾಕಿ. ಆಮೇಲೆ ಈ ಪ್ರಶ್ನೆ ಕೇಳಿ:

ವಿಡಿಯೋದಲ್ಲಿ ನೋಡಿದ ಹಾಗೆ ಪ್ರೀತಿ ತೋರಿಸೋದು ಯಾಕೆ ಮುಖ್ಯ?

ಯೆಹೋವ ತಮ್ಮನ್ನ ಪ್ರೀತಿಸ್ತಾನೆ ಅಂತ ಸಹೋದರ ಸಹೋದರಿಯರಿಗೆ ಅರ್ಥ ಮಾಡಿಸೋಕೆ ನಾವೇನು ಮಾಡಬಹುದು?

  • ಅವರು ಯೆಹೋವನಿಗೆ ಅಮೂಲ್ಯ ಅನ್ನೋದನ್ನ ಮನಸ್ಸಲ್ಲಿಡಿ.—ಕೀರ್ತ 100:3

  • ಅವ್ರನ್ನ ಹುರಿದುಂಬಿಸೋ ತರ ಮಾತಾಡಿ. —ಎಫೆ 4:29

  • ಅವ್ರ ಭಾವನೆಗಳನ್ನ ಅರ್ಥ ಮಾಡ್ಕೊಳ್ಳಿ. —ಮತ್ತಾ 7:11, 12

8. ಸಭಾ ಬೈಬಲ್‌ ಅಧ್ಯಯನ

ಸಮಾಪ್ತಿ ಮಾತುಗಳು (3 ನಿ.) | ಗೀತೆ 43 ಮತ್ತು ಪ್ರಾರ್ಥನೆ