ಜನವರಿ 8-14
ಯೋಬ 34-35
ಗೀತೆ 91 ಮತ್ತು ಪ್ರಾರ್ಥನೆ | ಆರಂಭದ ಮಾತುಗಳು (1 ನಿ.)
1. ಒಳ್ಳೆಯವ್ರಿಗೆ ಯಾಕೆ ಕಷ್ಟ ಬರ್ತಿದೆ?
(10 ನಿ.)
ಯೆಹೋವ ಯಾವತ್ತೂ ಯಾರಿಗೂ ಅನ್ಯಾಯ ಮಾಡಲ್ಲ (ಯೋಬ 34:10; ಕಾವಲಿನಬುರುಜು (ಸಾರ್ವಜನಿಕ)19.1 ಪುಟ 7 ಪ್ಯಾರ 6)
ನಾವೇನು ಮಾಡಿದ್ರೂ ನಮಗೇನೂ ಆಗಲ್ಲ ಅಂತ ಕೆಟ್ಟವರು ಅಂದ್ಕೊಬಹುದು; ಆದ್ರೆ ಯೆಹೋವ ಅವ್ರನ್ನ ನೋಡ್ತಿರ್ತಾನೆ (ಯೋಬ 34:21-26; ಕಾವಲಿನಬುರುಜು17.04 ಪುಟ 10 ಪ್ಯಾರ 5)
ಅನ್ಯಾಯಕ್ಕೆ ತುತ್ತಾದವ್ರಿಗೆ ಸಹಾಯ ಮಾಡಬೇಕಂದ್ರೆ ಯೆಹೋವನ ಬಗ್ಗೆ ಕಲಿಸಿ (ಯೋಬ 35:9, 10; ಮತ್ತಾ 28:19, 20; ಕಾವಲಿನಬುರುಜು21.05 ಪುಟ 7 ಪ್ಯಾರ 19-20)
2. ಬೈಬಲಿನಲ್ಲಿರುವ ರತ್ನಗಳು
(10 ನಿ.)
-
ಯೋಬ 35:7—“[ದೇವರಿಗೆ] ನೀನೇನು ಕೊಟ್ಟ ಹಾಗಾಗುತ್ತೆ?” ಅಂತ ಎಲೀಹು ಕೇಳಿದ್ರ ಅರ್ಥ ಏನು? (ಕಾವಲಿನಬುರುಜು17.04 ಪುಟ 29 ಪ್ಯಾರ 3)
-
ಈ ವಾರದ ಬೈಬಲ್ ಅಧ್ಯಾಯಗಳಿಂದ ನೀವೇನು ಕಲಿತ್ರಿ?
3. ಬೈಬಲ್ ಓದುವಿಕೆ
(4 ನಿ.) ಯೋಬ 35:1-16 (ಪ್ರಗತಿ ಪಾಠ 10)
4. ಸಂಭಾಷಣೆ ಶುರುಮಾಡಿ
(3 ನಿ.) ಮನೆ-ಮನೆ ಸೇವೆ: ಬೈಬಲ್ ಸ್ಟಡಿ ಬಗ್ಗೆ ಹೇಳಿ. (ಪ್ರೀತಿಸಿ-ಕಲಿಸಿ ಪಾಠ 10ರ ಪಾಯಿಂಟ್ 3)
5. ಸಂಭಾಷಣೆ ಶುರುಮಾಡಿ
(4 ನಿ.) ಅನೌಪಚಾರಿಕ ಸಾಕ್ಷಿ: ಮಕ್ಕಳನ್ನ ಬೆಳೆಸೋಕೆ jw.orgನಲ್ಲಿ ಒಳ್ಳೇ ಬುದ್ಧಿಮಾತುಗಳಿವೆ. ಅದನ್ನ ಹುಡುಕೋದು ಹೇಗೆ ಅಂತ ಚಿಕ್ಕ ಮಕ್ಕಳಿರೋ ಅಪ್ಪಅಮ್ಮಗೆ ತೋರಿಸಿ. (ಪ್ರೀತಿಸಿ-ಕಲಿಸಿ ಪಾಠ 1ರ ಪಾಯಿಂಟ್ 4)
6. ಶಿಷ್ಯರಾಗೋಕೆ ಕಲಿಸಿ
ಗೀತೆ 141
7. “ದೇವರ ಸಂದೇಶವನ್ನ” ಅನೌಪಚಾರಿಕವಾಗಿ ಸಾರೋಕೆ ನಿಮಗೆ ಆಸೆ ಇದ್ಯಾ?
(15 ನಿ.) ಚರ್ಚೆ.
“ದೇವರ ಸಂದೇಶವನ್ನ . . . ತಡಮಾಡ್ದೆ ಸಾರು” ಅಂತ ಪೌಲ ತಿಮೊತಿಗೆ ಹೇಳಿದ. (2ತಿಮೊ 4:2) “ತಡಮಾಡ್ದೆ ಸಾರು” ಅನ್ನೋ ಗ್ರೀಕ್ ಕ್ರಿಯಾಪದವನ್ನ ಕೆಲವೊಮ್ಮೆ, ಒಬ್ಬ ಮಿಲಿಟರಿ ಸೈನಿಕ ತನ್ನ ಕೆಲಸಕ್ಕೆ ಯಾವಾಗ್ಲೂ ರೆಡಿಯಾಗಿ ಇರೋದಕ್ಕೆ ಬಳಸಲಾಗಿದೆ. ಅದೇ ತರ ನಾವೂ ಜನ್ರ ಜೊತೆ ಮಾತಾಡುವಾಗ ದೇವರ ಸಂದೇಶ ಹೇಳೋಕೆ ಯಾವಾಗ್ಲೂ ರೆಡಿಯಾಗಿ ಇರಬೇಕು.
ಯೆಹೋವ ನಮ್ಮನ್ನ ತುಂಬ ಪ್ರೀತಿಸ್ತಾನೆ. ನಮಗೂ ಆತನ ಮೇಲೆ ಪ್ರೀತಿ ಇದೆ. ಅದಕ್ಕೇ ಆತನ ಒಳ್ಳೇ ಗುಣಗಳ ಬಗ್ಗೆ ನಾವು ಬೇರೆಯವ್ರಿಗೆ ಹೇಳ್ತೀವಿ.
ಕೀರ್ತನೆ 71:8 ಓದಿ. ಆಮೇಲೆ ಈ ಪ್ರಶ್ನೆ ಕೇಳಿ:
ಯೆಹೋವನ ಯಾವ ಗುಣಗಳ ಬಗ್ಗೆ ನೀವು ಬೇರೆಯವ್ರಿಗೆ ಹೇಳೋಕೆ ಇಷ್ಟ ಪಡ್ತೀರ?
ನಮಗೆ ಜನ್ರ ಮೇಲೆ ಪ್ರೀತಿ ಇರೋದ್ರಿಂದ ಅವರು ಸಿಕ್ಕಲ್ಲೆಲ್ಲ ಸಿಹಿಸುದ್ದಿ ಸಾರ್ತೀವಿ.
ನೂರಾರು ಜನ ಸತ್ಯ ಕಂಡುಕೊಂಡರು ಅನ್ನೋ ವಿಡಿಯೋ ಹಾಕಿ. ಆಮೇಲೆ ಈ ಪ್ರಶ್ನೆಗಳನ್ನ ಕೇಳಿ:
-
ಅನೇಕ ಜನ್ರಿಗೆ ಅನೌಪಚಾರಿಕ ಸೇವೆಯಿಂದ ಹೇಗೆ ಸತ್ಯ ಸಿಕ್ತು?
-
ಮುಂಚೆ ಚರ್ಚಿಗೆ ಹೋಗ್ತಿದ್ದವ್ರಿಗೆ ಸತ್ಯ ಕಲಿತ ಮೇಲೆ ಏನು ಪ್ರಯೋಜನ ಆಯ್ತು?
-
ಜನ್ರ ಮೇಲೆ ಪ್ರೀತಿ ಇದ್ರೆ ನಾವೂ ಏನು ಮಾಡ್ತೀವಿ?
-
ಜನ್ರಿಗೆ ಯೆಹೋವನ ಬಗ್ಗೆ ಕಲಿಸೋಕೆ ಅನೌಪಚಾರಿಕ ಸೇವೆ ಸಹಾಯ ಮಾಡುತ್ತೆ ಅಂತ ನಿಮಗೆ ಯಾಕೆ ಅನಿಸುತ್ತೆ?