ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಜನವರಿ 20-26

ಕೀರ್ತನೆ 138-139

ಜನವರಿ 20-26

ಗೀತೆ 86 ಮತ್ತು ಪ್ರಾರ್ಥನೆ | ಆರಂಭದ ಮಾತುಗಳು (1 ನಿ.)

ಬೈಬಲಿನಲ್ಲಿರುವ ನಿಧಿ

1. ಹೆದರಿ ಹಿಂಜರಿಬೇಡಿ

(10 ನಿ.)

ಪೂರ್ಣಹೃದಯದಿಂದ ಯೆಹೋವನನ್ನ ಸ್ತುತಿಸಬೇಕು ಅನ್ನೋದೇ ನಮ್ಮಾಸೆ (ಕೀರ್ತ 138:1)

ಕೂಟದಲ್ಲಿ ಉತ್ರ ಹೇಳೋಕೆ ಭಯ ಆದಾಗ ಧೈರ್ಯಕ್ಕಾಗಿ ಯೆಹೋವನ ಸಹಾಯ ಕೇಳಿ (ಕೀರ್ತ 138:3)

ಭಯ ಕೆಲವೊಮ್ಮೆ ಒಳ್ಳೇದೇ (ಕೀರ್ತ 138:6; ಕಾವಲಿನಬುರುಜು19.01 ಪುಟ 10 ಪ್ಯಾರ 10)

ಹೀಗೆ ಮಾಡಿ: ಚಿಕ್ಕ ಚಿಕ್ಕ ಉತ್ರಗಳನ್ನ ಹೇಳಿದ್ರೆ ಭಯ ಕಮ್ಮಿ ಆಗುತ್ತೆ.—ಕಾವಲಿನಬುರುಜು23.04 ಪುಟ 21 ಪ್ಯಾರ 7.

2. ಬೈಬಲಿನಲ್ಲಿರುವ ರತ್ನಗಳು

(10 ನಿ.)

  • ಕೀರ್ತ 139:21, 22—ಕ್ರೈಸ್ತರು ಎಲ್ಲರನ್ನ ಕ್ಷಮಿಸಲೇಬೇಕಾ? (it-1-E ಪುಟ 862 ಪ್ಯಾರ 4)

  • ಈ ವಾರದ ಬೈಬಲ್‌ ಅಧ್ಯಾಯಗಳಿಂದ ನೀವೇನು ಕಲಿತ್ರಿ?

3. ಬೈಬಲ್‌ ಓದುವಿಕೆ

ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ

4. ಸಂಭಾಷಣೆ ಶುರುಮಾಡಿ

(3 ನಿ.) ಸಾರ್ವಜನಿಕ ಸಾಕ್ಷಿ: (ಪ್ರೀತಿಸಿ-ಕಲಿಸಿ ಪಾಠ 2ರ ಪಾಯಿಂಟ್‌ 3)

5. ಶಿಷ್ಯರಾಗೋಕೆ ಕಲಿಸಿ

(4 ನಿ.) ಸಾರ್ವಜನಿಕ ಸಾಕ್ಷಿ: ಬೈಬಲ್‌ ಸ್ಟಡಿ ಬಗ್ಗೆ ಹೇಳಿ ಮತ್ತು ಹೇಗೆ ನಡೆಯುತ್ತೆ ಅಂತ ತೋರಿಸಿ. (ಪ್ರೀತಿಸಿ-ಕಲಿಸಿ ಪಾಠ 10ರ ಪಾಯಿಂಟ್‌ 3)

6. ಭಾಷಣ

(5 ನಿ.) ijwyp ಲೇಖನ 105— ವಿಷ್ಯ: ನಾಚಿಕೆ ಸ್ವಭಾವನ ಜಯಿಸೋದು ಹೇಗೆ? (ಪ್ರಗತಿ ಪಾಠ 16)

ನಮ್ಮ ಕ್ರೈಸ್ತ ಜೀವನ

ಗೀತೆ 155

7. ನಾಚಿಕೆ ಸ್ವಭಾವ ಇದ್ರೂ ನೀವು ಚೆನ್ನಾಗಿ ಸೇವೆ ಮಾಡಬಹುದು

(15 ನಿ.) ಚರ್ಚೆ.

ನಿಮಗೆ ನಾಚಿಕೆ ಸ್ವಭಾವ ಇದೆಯಾ? ನನ್ನನ್ನ ಯಾರೂ ಗಮನಿಸದೇ ಇದ್ರೆ ಸಾಕು ಅಂತ ಅನಿಸುತ್ತಾ? ಬೇರೆಯವರ ಮುಂದೆ ಮಾತಾಡೋಕೆ ಭಯ ಆಗುತ್ತಾ? ಒಂದು ವಿಷ್ಯ ನೆನಪಿಡಿ, ತುಂಬ ನಾಚಿಕೆ ಸ್ವಭಾವ ಇದ್ರೆ ನಮಗೆ ಇಷ್ಟ ಇರೋ ವಿಷಯಗಳನ್ನ ಮಾಡೋಕಾಗಲ್ಲ. ಆದ್ರೆ ನಿಮ್ಮ ಹಾಗೆ ನಾಚಿಕೆ ಸ್ವಭಾವ ಇದ್ದ ಎಷ್ಟೋ ಜನ ಅದರಿಂದ ಹೊರ ಬಂದು ಈಗ ಧೈರ್ಯವಾಗಿ, ಚೆನ್ನಾಗಿ ಸೇವೆ ಮಾಡ್ತಿದ್ದಾರೆ. ಅವರ ಉದಾಹರಣೆಯಿಂದ ನಾವೇನು ಕಲೀಬಹುದು?

ನಾಚಿಕೆ ಸ್ವಭಾವ ಇದ್ರೂ ನನ್ನ ಕೈಲಾಗಿದ್ದನ್ನೆಲ್ಲಾ ಮಾಡಿದೆ ಅನ್ನೋ ವಿಡಿಯೋ ಹಾಕಿ. ಆಮೇಲೆ ಈ ಪ್ರಶ್ನೆಗಳನ್ನ ಕೇಳಿ:

  • ‘ಯೆಹೋವನ ಸೇವೆಲಿ ನಿನ್ನ ಕೈಲಾಗಿದ್ದೆಲ್ಲಾ ಮಾಡು’ ಅಂತ ಅಜ್ಜಿ ಕೊಟ್ಟ ಸಲಹೆಯಿಂದ ಸಹೋದರಿ ಲೀಗೆ ಹೇಗೆ ಸಹಾಯ ಆಯ್ತು?

ಮೋಶೆ, ಯೆರೆಮೀಯ, ತಿಮೊತಿಗೆ ಕೂಡ ನಾಚಿಕೆ ಸ್ವಭಾವ ಇತ್ತು ಅಂತ ಬೈಬಲ್‌ ಹೇಳುತ್ತೆ. (ವಿಮೋ 3:11; 4:10; ಯೆರೆ 1:6-8; 1ತಿಮೊ 4:12) ಆದ್ರೂ ಅವರು ದೇವರ ಸೇವೆಯಲ್ಲಿ ದೊಡ್ಡ ದೊಡ್ಡ ಕೆಲ್ಸಗಳನ್ನ ಮಾಡಿದ್ರು. ಇದಕ್ಕೆ ಮುಖ್ಯ ಕಾರಣ ಯೆಹೋವ ಅವ್ರ ಜೊತೆ ಇದ್ದನು. (ವಿಮೋ 4:12; ಯೆರೆ 20:11; 2ತಿಮೊ 1:6-8)

ಯೆಶಾಯ 43:1, 2 ಓದಿ. ಆಮೇಲೆ ಈ ಪ್ರಶ್ನೆಗಳನ್ನ ಕೇಳಿ:

  • ಯೆಹೋವ ತನ್ನ ಸೇವಕರಿಗೆ ಯಾವ ಮಾತು ಕೊಟ್ಟಿದ್ದಾನೆ?

ನಾಚಿಕೆ ಸ್ವಭಾವ ಇರೋರಿಗೆ ಚೆನ್ನಾಗಿ ಸೇವೆ ಮಾಡೋಕೆ ಯೆಹೋವ ಹೇಗೆ ಸಹಾಯ ಮಾಡ್ತಾನೆ?

ಸಮರ್ಪಣೆ ಖುಷಿ ಹೆಚ್ಚಿಸುತ್ತೆ—ತುಣುಕು ಅನ್ನೋ ವಿಡಿಯೋ ಹಾಕಿ. ಆಮೇಲೆ ಈ ಪ್ರಶ್ನೆ ಕೇಳಿ:

  • ಸಹೋದರಿ ಜಾಕ್ಸನ್‌ಗೆ ಸಿಹಿಸುದ್ದಿ ಸಾರೋಕೆ ಯೆಹೋವ ಹೇಗೆ ಬೆಂಬಲ ಕೊಟ್ಟನು?

  • ನಾಚಿಕೆ ಸ್ವಭಾವದಿಂದ ಹೊರಬರೋಕೆ ಸಾರೋ ಕೆಲ್ಸ ಹೇಗೆ ಸಹಾಯ ಮಾಡುತ್ತೆ?

8. ಸಭಾ ಬೈಬಲ್‌ ಅಧ್ಯಯನ

ಸಮಾಪ್ತಿ ಮಾತುಗಳು (3 ನಿ.) | ಗೀತೆ 139 ಮತ್ತು ಪ್ರಾರ್ಥನೆ