ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಜನವರಿ 6-12

ಕೀರ್ತನೆ 127-134

ಜನವರಿ 6-12

ಗೀತೆ 89 ಮತ್ತು ಪ್ರಾರ್ಥನೆ | ಆರಂಭದ ಮಾತುಗಳು (1 ನಿ.)

ಬೈಬಲಿನಲ್ಲಿರುವ ನಿಧಿ

1. ಹೆತ್ತವರೇ, ನಿಮಗೆ ಸಿಕ್ಕಿರೋ ಅಮೂಲ್ಯ ಆಸ್ತಿನ ಕಾಪಾಡ್ಕೊಳ್ಳಿ

(10 ನಿ.)

ಕುಟುಂಬಕ್ಕೆ ಬೇಕಾಗಿರೋದನ್ನ ಯೆಹೋವ ಕೊಟ್ಟೇ ಕೊಡ್ತಾನೆ ಅಂತ ಹೆತ್ತವರು ನಂಬಬಹುದು (ಕೀರ್ತ 127:1, 2)

ಯೆಹೋವ ದೇವರು ಹೆತ್ತವರಿಗೆ ಕೊಟ್ಟಿರೋ ಅಮೂಲ್ಯ ಆಸ್ತಿನೇ ಮಕ್ಕಳು (ಕೀರ್ತ 127:3; ಕಾವಲಿನಬುರುಜು21.08 ಪುಟ 5 ಪ್ಯಾರ 9)

ಪ್ರತಿಯೊಂದು ಮಗುವಿನ ಅಗತ್ಯಕ್ಕೆ ತಕ್ಕಂತೆ ತರಬೇತಿ ಕೊಡಿ (ಕೀರ್ತ 127:4; ಕಾವಲಿನಬುರುಜು19.12 ಪುಟ 26 ಪ್ಯಾರ 20)

ಮಕ್ಕಳಿಗೆ ತರಬೇತಿ ಕೊಡೋಕೆ ಹೆತ್ತವರು ತಮ್ಮ ಕೈಲಾಗಿದ್ದೆಲ್ಲಾ ಮಾಡುವಾಗ ಮತ್ತು ಯೆಹೋವನ ಸಹಾಯ ಪಡ್ಕೊಳ್ಳುವಾಗ ಆತನಿಗೆ ತುಂಬ ಖುಷಿ ಆಗುತ್ತೆ

2. ಬೈಬಲಿನಲ್ಲಿರುವ ರತ್ನಗಳು

(10 ನಿ.)

  • ಕೀರ್ತ 128:3—ಮಕ್ಕಳನ್ನ ಆಲಿವ್‌ ಮರದ ಚಿಗುರಿಗೆ ಕೀರ್ತನೆಗಾರ ಯಾಕೆ ಹೋಲಿಸಿದ್ದಾನೆ? (it-1-E ಪುಟ 543)

  • ಈ ವಾರದ ಬೈಬಲ್‌ ಅಧ್ಯಾಯಗಳಿಂದ ನೀವೇನು ಕಲಿತ್ರಿ?

3. ಬೈಬಲ್‌ ಓದುವಿಕೆ

ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ

4. ಸಂಭಾಷಣೆ ಶುರುಮಾಡಿ

(3 ನಿ.) ಅನೌಪಚಾರಿಕ ಸಾಕ್ಷಿ. (ಪ್ರೀತಿಸಿ-ಕಲಿಸಿ ಪಾಠ 1ರ ಪಾಯಿಂಟ್‌ 3)

5. ಸಂಭಾಷಣೆ ಶುರುಮಾಡಿ

(4 ನಿ.) ಅನೌಪಚಾರಿಕ ಸಾಕ್ಷಿ. ಮನೆಯವನು ಬೈಬಲಿಗೆ ವಿರುದ್ಧವಾಗಿರೋ ಒಂದು ನಂಬಿಕೆ ಬಗ್ಗೆ ಮಾತಾಡ್ತಾನೆ. (ಪ್ರೀತಿಸಿ-ಕಲಿಸಿ ಪಾಠ 5ರ ಪಾಯಿಂಟ್‌ 4)

6. ಶಿಷ್ಯರಾಗೋಕೆ ಕಲಿಸಿ

(5 ನಿ.) ಖುಷಿಯಾಗಿ ಬಾಳೋಣ ಪಾಠ 16 ಪಾಯಿಂಟ್‌ 4-5. ನೀವು ಊರಲ್ಲಿ ಇಲ್ಲದಿರುವಾಗ ನಿಮ್ಮ ಬೈಬಲ್‌ ವಿದ್ಯಾರ್ಥಿಗೆ ಸ್ಟಡಿ ಮಾಡೋಕೆ ಯಾವ ಏರ್ಪಾಡು ಮಾಡಿದ್ದೀರ ಅಂತ ಹೇಳಿ. (ಪ್ರೀತಿಸಿ-ಕಲಿಸಿ ಪಾಠ 10ರ ಪಾಯಿಂಟ್‌ 4)

ನಮ್ಮ ಕ್ರೈಸ್ತ ಜೀವನ

ಗೀತೆ 17

7. ಅಪ್ಪ-ಅಮ್ಮಂದಿರೇ, ಈ ಸಾಧನವನ್ನ ನೀವು ಚೆನ್ನಾಗಿ ಬಳಸ್ತಿದ್ದೀರಾ?

(15 ನಿ.) ಚರ್ಚೆ.

ಹೆತ್ತವರು ತಮ್ಮ ಮಕ್ಕಳಿಗೆ ಯೆಹೋವನ ಬಗ್ಗೆ ಚೆನ್ನಾಗಿ ಕಲಿಸೋಕೆ ಆತನ ಸಂಘಟನೆ ಸಾಕಷ್ಟು ಸಲಕರಣೆಗಳನ್ನ ಕೊಟ್ಟಿದೆ. ಆ ಸಲಕರಣೆಗಳಲ್ಲಿ ಅತ್ಯುತ್ತಮ ಸಲಕರಣೆ ಯಾವುದು ಗೊತ್ತಾ? ನಿಮ್ಮ ಒಳ್ಳೇ ಮಾದರಿನೇ.—ಧರ್ಮೋ 6:5-9.

ಯೇಸು ತನ್ನ ಶಿಷ್ಯರಿಗೆ ಕಲಿಸೋಕೆ ಇದೇ ಸಲಕರಣೆ ಬಳಸಿದ.

ಯೋಹಾನ 13:13-15 ಓದಿ. ಆಮೇಲೆ ಈ ಪ್ರಶ್ನೆಗಳನ್ನ ಕೇಳಿ:

  • ಯೇಸು ತನ್ನ ಮಾದರಿಯಿಂದ ಕಲಿಸಿದ್ದು ಒಳ್ಳೇ ವಿಧಾನ ಅಂತ ನಿಮಗೆ ಯಾಕೆ ಅನಿಸುತ್ತೆ?

ನೀವು ಮಕ್ಕಳಿಗೆ ಏನು ಕಲಿಸ್ತಿರೋ ಅದ್ರ ಜೊತೆಗೆ ನಿಮ್ಮ ಮಾದರಿ ಕೂಡ ಅವರ ಮೇಲೆ ತುಂಬ ಪ್ರಭಾವ ಬೀರುತ್ತೆ. ನೀವು ಒಳ್ಳೇ ಮಾದರಿ ಇಟ್ರೆ ಮಕ್ಕಳು ನಿಮಗೆ ಗೌರವ ಕೊಡ್ತಾರೆ, ನಿಮ್ಮ ಮಾತನ್ನೂ ಕೇಳ್ತಾರೆ.

ಮಾದರಿಯಿಟ್ಟು ಮಕ್ಕಳಿಗೆ ಕಲಿಸಿ ಅನ್ನೋ ವಿಡಿಯೋ ಹಾಕಿ. ಆಮೇಲೆ ಈ ಪ್ರಶ್ನೆಗಳನ್ನ ಕೇಳಿ:

  • ಸಹೋದರ ಮತ್ತು ಸಹೋದರಿ ಗಾರ್ಸಿಯಾ ತಮ್ಮ ಹೆಣ್ಣುಮಕ್ಕಳಿಗೆ ಯಾವ ಪ್ರಾಮುಖ್ಯ ಪಾಠಗಳನ್ನ ಕಲಿಸಿದ್ರು?

  • ಮಕ್ಕಳಿಗೆ ಒಳ್ಳೇ ಮಾದರಿ ಇಡೋಕೆ ಈ ವಿಡಿಯೋ ನಿಮಗೆ ಹೇಗೆ ಸಹಾಯ ಮಾಡ್ತು?

8. ಸಭಾ ಬೈಬಲ್‌ ಅಧ್ಯಯನ

ಸಮಾಪ್ತಿ ಮಾತುಗಳು (3 ನಿ.) | ಗೀತೆ 153 ಮತ್ತು ಪ್ರಾರ್ಥನೆ