ಯೆಹೋವನು ಕೊಟ್ಟ ಮಾತನ್ನು ಉಳಿಸಿಕೊಳ್ಳುತ್ತಾನೆ
ಯೆರೂಸಲೇಮಿನ ದೇವಾಲಯದಲ್ಲಿ ಸತ್ಯಾರಾಧನೆ ಪುನಸ್ಸ್ಥಾಪನೆಯಾಗುತ್ತದೆ ಎಂದು ಯೆಹೋವನು ಮಾತು ಕೊಟ್ಟಿದ್ದನು. ಆದರೆ, ಬಾಬೆಲಿನ ಬಂಧಿವಾಸದ ನಂತರ ಇದಕ್ಕೆ ಅನೇಕ ಅಡೆ-ತಡೆಗಳು ಎದುರಾದವು. ಇವುಗಳಲ್ಲೊಂದು ನಿರ್ಮಾಣ ಕೆಲಸವನ್ನು ನಿಲ್ಲಿಸುವ ರಾಜಾಜ್ಞೆ. ಈ ಕೆಲಸವನ್ನು ಸಂಪೂರ್ಣವಾಗಿ ಮಾಡಿ ಮುಗಿಸಲು ಸಾಧ್ಯವೇ ಇಲ್ಲ ಎಂದು ಅನೇಕರಿಗನಿಸಿತು.
-
ಸುಮಾರು ಕ್ರಿ.ಪೂ. 537
ದೇವಾಲಯ ಪುನಃ ಕಟ್ಟಲ್ಪಡಲಿ ಎಂಬ ಆಜ್ಞೆಯನ್ನು ಕೋರೆಷನು ಹೊರಡಿಸಿದನು
-
ಏಳನೇ ತಿಂಗಳು
ಯಜ್ಞವೇದಿ ಕಟ್ಟಿ, ಸರ್ವಾಂಗಹೋಮಗಳನ್ನು ಅರ್ಪಿಸಲಾಯಿತು
-
ಕ್ರಿ.ಪೂ. 536
ಅಸ್ತಿವಾರ ಹಾಕಲಾಯಿತು
-
ಕ್ರಿ.ಪೂ. 522
ರಾಜ ಅರ್ತಷಸ್ತನು ನಿರ್ಮಾಣ ಕೆಲಸವನ್ನು ತಡೆದನು
-
ಕ್ರಿ.ಪೂ. 520
ಜೆಕರ್ಯ ಮತ್ತು ಹಗ್ಗಾಯ ನಿರ್ಮಾಣ ಕೆಲಸವನ್ನು ಪುನಃ ಆರಂಭಿಸುವಂತೆ ಜನರನ್ನು ಉತ್ತೇಜಿಸಿದರು
-
ಕ್ರಿ.ಪೂ. 515
ದೇವಾಲಯವನ್ನು ಕಟ್ಟಿ ಮುಗಿಸಲಾಯಿತು