ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಮ್ಮ ಕ್ರೈಸ್ತ ಜೀವನ

ಸೇವೆಯಲ್ಲಿ ನಿಪುಣರಾಗಲು ಸಹಾಯಕಗಳು—ಪುನರ್ಭೇಟಿಗಾಗಿ ತಳಪಾಯ ಹಾಕಿ

ಸೇವೆಯಲ್ಲಿ ನಿಪುಣರಾಗಲು ಸಹಾಯಕಗಳು—ಪುನರ್ಭೇಟಿಗಾಗಿ ತಳಪಾಯ ಹಾಕಿ

ಏಕೆ ಪ್ರಾಮುಖ್ಯ:

ನಾವು ಬಿತ್ತಿದ ಸತ್ಯವೆಂಬ ಬೀಜಕ್ಕೆ ನೀರು ಹಾಕಲು ಬಯಸುತ್ತೇವೆ. (1ಕೊರಿಂ 3:6) ಯಾರಾದರೂ ಆಸಕ್ತಿ ತೋರಿಸಿದರೆ, ಮುಂದಿನ ಭೇಟಿಯಲ್ಲಿ ಚರ್ಚಿಸಲಿಕ್ಕಾಗಿ ಒಂದು ಪ್ರಶ್ನೆಯನ್ನು ಕೇಳುವುದು ಉತ್ತಮ. ಹೀಗೆ ಮಾಡುವಾಗ ಮನೆಯವನೂ ನಮ್ಮ ಭೇಟಿಗಾಗಿ ಎದುರು ನೋಡುತ್ತಿರುತ್ತಾನೆ, ಪುನರ್ಭೇಟಿಗಾಗಿ ತಯಾರಿಸಲು ನಮಗೂ ಸುಲಭವಾಗುತ್ತದೆ. ಆಗ, ಮುಂದಿನ ಭೇಟಿಯಲ್ಲಿ, ‘ಹೋದ ಸಲ ನಾನು ಕೇಳಿದ ಪ್ರಶ್ನೆಯ ಬಗ್ಗೆ ಮಾತಾಡಲು ಬಂದಿದ್ದೇನೆ’ ಎಂದು ಹೇಳಿ ನಮ್ಮ ಸಂಭಾಷಣೆಯನ್ನು ಮುಂದುವರಿಸಬಹುದು.

ಹೇಗೆ ಮಾಡುವುದು:

  • ಮನೆ-ಮನೆ ಸೇವೆಗಾಗಿ ನಿರೂಪಣೆಗಳನ್ನು ತಯಾರಿಸುವಾಗಲೇ, ಪುನರ್ಭೇಟಿಗಾಗಿ ಪ್ರಶ್ನೆಯನ್ನೂ ತಯಾರಿಸಿ. ನೀವು ಕೇಳುವ ಪ್ರಶ್ನೆ ನೀವು ಕೊಡುವ ಸಾಹಿತ್ಯದ ಮೇಲೆ ಆಧರಿತವಾಗಿರಬೇಕು ಅಥವಾ ಮುಂದಿನ ಭೇಟಿಯಲ್ಲಿ ನೀವು ಪರಿಚಯಿಸಬೇಕೆಂದಿರುವ ಬೈಬಲ್‌ ಅಧ್ಯಯನದ ಸಾಹಿತ್ಯದ ಮೇಲೆ ಆಧರಿತವಾಗಿರಬೇಕು.

  • ನೀವು ಆಸಕ್ತ ವ್ಯಕ್ತಿಯೊಂದಿಗೆ ಮಾತಾಡಿ ಮುಗಿಸುವಾಗ, ಪುನಃ ಅವನೊಂದಿಗೆ ಮಾತಾಡಲು ಬಯಸುತ್ತೀರೆಂದು ತಿಳಿಸಿ. ನಂತರ ನೀವು ತಯಾರಿಸಿದ ಪ್ರಶ್ನೆಯನ್ನು ಕೇಳಿ. ಸಾಧ್ಯವಾದರೆ ಅವನನ್ನು ಸಂಪರ್ಕಿಸಲು ಬೇಕಾಗುವ ಮಾಹಿತಿಗಳನ್ನು ಕೇಳಿ ಪಡೆದುಕೊಳ್ಳಿ.

  • ನಿರ್ದಿಷ್ಟ ಸಮಯಕ್ಕೆ ಬರುತ್ತೀರೆಂದು ಮನೆಯವನಿಗೆ ಮಾತುಕೊಟ್ಟಿರುವುದಾದರೆ ಅದೇ ಸಮಯಕ್ಕೆ ಹೋಗಿ.—ಮತ್ತಾ 5:37.