ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ

ಸಿಹಿಸುದ್ಧಿ ಕಿರುಹೊತ್ತಗೆಯನ್ನು ಉಪಯೋಗಿಸಿ ಬೈಬಲ್‌ ಅಧ್ಯಯನ ಮಾಡುವುದು ಹೇಗೆ

ಸಿಹಿಸುದ್ಧಿ ಕಿರುಹೊತ್ತಗೆಯನ್ನು ಉಪಯೋಗಿಸಿ ಬೈಬಲ್‌ ಅಧ್ಯಯನ ಮಾಡುವುದು ಹೇಗೆ
  1. ಪ್ಯಾರದ ಆರಂಭದಲ್ಲಿರುವ ದಪ್ಪಕ್ಷರದ ಪ್ರಶ್ನೆಗಳನ್ನು ಓದಿ. ಇದರಿಂದ ಮನೆಯವರು ಮುಖ್ಯ ವಿಷಯಕ್ಕೆ ಗಮನ ಕೊಡಲು ಸಾಧ್ಯವಾಗುತ್ತದೆ.

  2. ಪ್ರಶ್ನೆಯ ಕೆಳಗಿರುವ ಪ್ಯಾರವನ್ನು ಓದಿ.

  3. ದಪ್ಪಕ್ಷರದಲ್ಲಿ ಕೊಡಲಾಗಿರುವ ವಚನಗಳನ್ನು ಓದಿ. ಆರಂಭದಲ್ಲಿ ಓದಿದ ಪ್ರಶ್ನೆಗೆ ಈ ವಚನಗಳಿಂದ ಉತ್ತರವನ್ನು ಹೇಗೆ ಪಡೆಯುವುದೆಂದು ಮನೆಯವರು ಗ್ರಹಿಸಲು ಸಾಧ್ಯವಾಗುವಂತೆ ಜಾಣ್ಮೆಯಿಂದ ಪ್ರಶ್ನೆ ಕೇಳಿ.

  4. ಪ್ರಶ್ನೆಯ ಕೆಳಗೆ ಇನ್ನೂ ಒಂದು ಪ್ಯಾರ ಇರುವುದಾದರೆ 2 ಮತ್ತು 3⁠ನೇ ಹೆಜ್ಜೆಯನ್ನು ಪುನರಾವರ್ತಿಸಿ. jw.orgನಲ್ಲಿ ಆ ಪ್ರಶ್ನೆಗೆ ಸಂಬಂಧಿಸಿದ ವಿಡಿಯೋ ಇದ್ದರೆ ಅದನ್ನು ನಿಮ್ಮ ಚರ್ಚೆ ಮುಗಿಯುವುದರೊಳಗೆ ತೋರಿಸಿ.

  5. ಮನೆಯವರಿಗೆ ಮುಖ್ಯ ವಿಷಯ ಅರ್ಥವಾಗಿದೆಯಾ ಎಂದು ತಿಳಿಯಲು ಆರಂಭದಲ್ಲಿ ಓದಿದ ಪ್ರಶ್ನೆಯನ್ನು ಕೇಳಿ.