ನಮ್ಮ ಕ್ರೈಸ್ತ ಜೀವನ
ಸತ್ಯಾರಾಧನೆಯ ಸ್ಥಳಗಳನ್ನು ಕಟ್ಟುವುದು ಮತ್ತು ಸುಸ್ಥಿತಿಯಲ್ಲಿಡುವುದು ನಮ್ಮ ಸುಯೋಗ
ಇಸ್ರಾಯೇಲಿನ ದೇವಾಲಯವನ್ನು ಕಟ್ಟುವುದರಲ್ಲಿ ಹೆಚ್ಚಿನ ಕೆಲಸ ಒಳಗೂಡಿತ್ತು. ಜೊತೆಗೆ, ಬಹಳಷ್ಟು ಹಣದ ಅಗತ್ಯವಿತ್ತು. ಆದರೂ, ಇಸ್ರಾಯೇಲ್ಯರು ತುಂಬಾ ಹುರುಪಿನಿಂದ ತಮ್ಮ ಸಹಾಯಹಸ್ತವನ್ನು ನೀಡಿದರು. (1ಪೂರ್ವ 29:2-9; 2ಪೂರ್ವ 6:7, 8) ದೇವಾಲಯವನ್ನು ಕಟ್ಟಿದ ನಂತರ, ಇಸ್ರಾಯೇಲ್ಯರು ಅದನ್ನು ಇಟ್ಟುಕೊಂಡ ರೀತಿಯಿಂದ ಅವರ ಆಧ್ಯಾತ್ಮಿಕತೆ ಹೇಗಿತ್ತು ಎಂದು ಹೇಳಬಹುದಿತ್ತು. (2ಅರ 22:3-6; 2ಪೂರ್ವ 28:24; 29:3) ಇಂದು ನಾವು ರಾಜ್ಯ ಸಭಾಗೃಹಗಳನ್ನು ಮತ್ತು ಸಮ್ಮೇಳನ ಹಾಲ್‌ಗಳನ್ನು ಕಟ್ಟಲು, ಶುಚಿಗೊಳಿಸಲು ಮತ್ತು ಅದನ್ನು ಸುಸ್ಥಿತಿಯಲ್ಲಿಡಲು ಹೆಚ್ಚಿನ ಸಮಯ ಮತ್ತು ಶ್ರಮವನ್ನು ವ್ಯಯಿಸುತ್ತಿದ್ದೇವೆ. ಈ ರೀತಿ ಯೆಹೋವನೊಂದಿಗೆ ಕೆಲಸಮಾಡುವುದು ನಮ್ಮ ಸುಯೋಗ ಮತ್ತು ಪವಿತ್ರ ಸೇವೆಯ ಭಾಗವಾಗಿದೆ.—ಕೀರ್ತ 127:1; ಪ್ರಕ 7:15.
ನಾವು ಏನೆಲ್ಲಾ ಮಾಡಬಹುದು?
-
ಕೂಟಗಳ ನಂತರ ರಾಜ್ಯ ಸಭಾಗೃಹವನ್ನು ಶುಚಿಮಾಡಬಹುದು. ಶುಚಿಮಾಡಲು ನಿಮ್ಮಿಂದ ಸಾಧ್ಯವಿಲ್ಲದಿದ್ದರೆ ಕನಿಷ್ಠಪಕ್ಷ ನಿಮ್ಮ ಸೀಟಿನ ಸುತ್ತ ಬಿದ್ದಿರುವ ಕಸವನ್ನು ತೆಗೆಯಲು ಪ್ರಯತ್ನಿಸಿ.
-
ರಾಜ್ಯ ಸಭಾಗೃಹವನ್ನು ಶುಚಿಗೊಳಿಸುವ ಮತ್ತು ಸುಸ್ಥಿತಿಯಲ್ಲಿಡುವ ಕೆಲಸದಲ್ಲಿ ತಪ್ಪದೇ ಕ್ರಮವಾಗಿ ಭಾಗವಹಿಸಬಹುದು. ಎಲ್ಲರೂ ಸೇರಿ ಮಾಡಿದರೆ ಕೆಲಸ ಸುಲಭವಾಗುತ್ತದೆ ಮತ್ತು ಸಂತೋಷಕರವಾಗಿರುತ್ತದೆ.—ದೇವರ ಪ್ರೀತಿ ಪು. 105, ಪ್ಯಾ. 18.
-
ಕಾಣಿಕೆ ನೀಡಬಹುದು. ಮನಪೂರ್ವಕವಾಗಿ ಕೊಡುವ ತೀರ ಕಡಮೆ ಬೆಲೆಯ ಎರಡು ಚಿಕ್ಕ ನಾಣ್ಯಗಳು’ ಸಹ ಯೆಹೋವನನ್ನು ಸಂತೋಷಪಡಿಸುತ್ತವೆ.—ಮಾರ್ಕ 12:41-44.
-
ನಿಮಗೆ ಸಾಧ್ಯವಾದರೆ, ದೇವಪ್ರಭುತ್ವಾತ್ಮಕ ಚಟುವಟಿಕೆಗಳಿಗಾಗಿರುವ ಕಟ್ಟಡಗಳ ನಿರ್ಮಾಣಕಾರ್ಯ ಮತ್ತು ದುರಸ್ತಿಕಾರ್ಯದಲ್ಲಿ ಸ್ವಯಂ ಸೇವಕರಾಗಿ ಕೆಲಸಮಾಡಬಹುದು. ಇದಕ್ಕಾಗಿ ನಿರ್ಮಾಣ ಕೆಲಸದ ಅನುಭವ ಇರಬೇಕಂತೇನಿಲ್ಲ.