ನಮ್ಮ ಕ್ರೈಸ್ತ ಜೀವನ
‘ಯೆಹೋವನೇ, ನಿನ್ನಲ್ಲೇ ಭರವಸೆ ಇಟ್ಟಿದ್ದೇನೆ’
ಕಷ್ಟದಲ್ಲೂ ಸುಖದಲ್ಲೂ ಯೆಹೋವನ ಮೇಲೆ ಭರವಸೆ ಇಡುವುದು ತುಂಬ ಪ್ರಾಮುಖ್ಯ. (ಕೀರ್ತ 25:1, 2) ಕ್ರಿ.ಪೂ. ಎಂಟನೇ ಶತಮಾನದಲ್ಲಿ ಯೆಹೂದ್ಯರು ಒಂದು ದೊಡ್ಡ ಸಮಸ್ಯೆಯನ್ನು ಎದುರಿಸಿದರು. ಇದು ದೇವರ ಕಡೆಗಿನ ಅವರ ಭರವಸೆಯನ್ನು ಪರೀಕ್ಷೆಗೊಳಪಡಿಸಿತು. ಆಗ ನಡೆದ ಘಟನೆಗಳಿಂದ ನಾವು ಅನೇಕ ಪಾಠಗಳನ್ನು ಕಲಿಯಬಲ್ಲೆವು. (ರೋಮ 15:4) ‘ಯೆಹೋವನೇ, ನಿನ್ನಲ್ಲೇ ಭರವಸೆ ಇಟ್ಟಿದ್ದೇನೆ’ ಎಂಬ ವಿಡಿಯೋ ನೋಡಿದ ನಂತರ ಈ ಪ್ರಶ್ನೆಗಳನ್ನು ಉತ್ತರಿಸಿ:
-
ಹಿಜ್ಕೀಯನು ಯಾವ ಸಮಸ್ಯೆಯನ್ನು ಎದುರಿಸಿದನು?
-
ಮುತ್ತಿಗೆ ಹಾಕಬಹುದೆಂದು ಗೊತ್ತಿದ್ದರೂ, ಆ ಸಮಯದಲ್ಲಿ ಹಿಜ್ಕೀಯನು ಜ್ಞಾನೋಕ್ತಿ 22:3ರಲ್ಲಿರುವ ತತ್ವವನ್ನು ಹೇಗೆ ಅನ್ವಯಿಸಿಕೊಂಡನು?
-
ಹಿಜ್ಕೀಯನು ಅಶ್ಶೂರ್ಯರಿಗೆ ಶರಣಾಗತನಾಗುವ ಅಥವಾ ಐಗುಪ್ತರೊಂದಿಗೆ ಸೇನಾ ಮೈತ್ರಿ ಮಾಡಿಕೊಳ್ಳುವ ಯೋಚನೆ ಏಕೆ ಮಾಡಲಿಲ್ಲ?
-
ಹಿಜ್ಕೀಯನು ಕ್ರೈಸ್ತರಿಗೆ ಹೇಗೆ ಉತ್ತಮ ಮಾದರಿ ಇಟ್ಟಿದ್ದಾನೆ?
-
ಇಂದು ಯಾವ ಸಮಸ್ಯೆಗಳು ಯೆಹೋವನ ಮೇಲೆ ನಮಗಿರುವ ಭರವಸೆಯನ್ನು ಪರೀಕ್ಷೆಗೆ ಒಳಪಡಿಸುತ್ತವೆ?