ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಮ್ಮ ಕ್ರೈಸ್ತ ಜೀವನ

ಹಿಂಸೆಯನ್ನು ಅನುಭವಿಸುತ್ತಿರುವ ಕ್ರೈಸ್ತರಿಗಾಗಿ ಪ್ರಾರ್ಥಿಸಲು ಮರೆಯಬೇಡಿ

ಹಿಂಸೆಯನ್ನು ಅನುಭವಿಸುತ್ತಿರುವ ಕ್ರೈಸ್ತರಿಗಾಗಿ ಪ್ರಾರ್ಥಿಸಲು ಮರೆಯಬೇಡಿ

ಸುವಾರ್ತೆ ಸಾರದಂತೆ ತಡೆಯಲು ಸೈತಾನನು ನಮ್ಮನ್ನು ಹಿಂಸಿಸುತ್ತಾನೆ ಎಂದು ಬೈಬಲ್‌ ಪ್ರವಾದಿಸಿದೆ. (ಯೋಹಾ 15:20; ಪ್ರಕ 12:17) ಬೇರೆ ಬೇರೆ ದೇಶಗಳಲ್ಲಿ ಹಿಂಸೆಯನ್ನು ಅನುಭವಿಸುತ್ತಿರುವ ನಮ್ಮ ಜೊತೆ ಕ್ರೈಸ್ತರಿಗೆ ನಾವು ಹೇಗೆ ಸಹಾಯ ಮಾಡಬಹುದು? ಅವರಿಗಾಗಿ ಪ್ರಾರ್ಥಿಸುವ ಮೂಲಕ. ಯಾಕೆಂದರೆ, ‘ಒಬ್ಬ ನೀತಿವಂತನು ಮಾಡುವ ಯಾಚನೆಗೆ ಬಹಳ ಬಲವಿದೆ.’—ಯಾಕೋ 5:16.

ನಾವು ಏನಂತ ಪ್ರಾರ್ಥಿಸಬಹುದು? ನಮ್ಮ ಸಹೋದರ ಸಹೋದರಿಯರಿಗೆ ಧೈರ್ಯ ಕೊಡುವಂತೆ ಮತ್ತು ಭಯಪಡದಿರಲು ಸಹಾಯ ಮಾಡುವಂತೆ ಕೇಳಿಕೊಳ್ಳಬಹುದು. (ಯೆಶಾ 41:10-13) ನಮ್ಮ ಸಾರುವ ಕೆಲಸಕ್ಕೆ ಅಧಿಕಾರಿಗಳು ಯಾವುದೇ ಅಡ್ಡಿ ಮಾಡದೆ, ಸಹಾಯ ಮಾಡುವಂತೆ ನಾವು ಪ್ರಾರ್ಥಿಸಬಹುದು. ಆಗ ನಾವು ‘ನೆಮ್ಮದಿ ಹಾಗೂ ಪ್ರಶಾಂತತೆಯಿಂದ ಕೂಡಿದ ಜೀವನವನ್ನು ನಡೆಸಬಲ್ಲೆವು.’—1ತಿಮೊ 2:1, 2.

ಪೌಲ ಮತ್ತು ಪೇತ್ರನಿಗೆ ಹಿಂಸೆ ಬಂದಾಗ ಮೊದಲನೇ ಶತಮಾನದ ಕ್ರೈಸ್ತರು ಅವರ ಹೆಸರನ್ನು ಹೇಳಿ ಪ್ರಾರ್ಥಿಸಿದರು. (ಅಕಾ 12:5; ರೋಮ 15:30, 31) ಇಂದು ಹಿಂಸೆಯನ್ನು ಅನುಭವಿಸುತ್ತಿರುವ ಎಲ್ಲರ ಹೆಸರುಗಳು ನಮಗೆ ಗೊತ್ತಿಲ್ಲದಿರಬಹುದು. ಆದರೂ, ನಾವು ಅವರ ಸಭೆ, ದೇಶ ಅಥವಾ ಊರಿನ ಹೆಸರನ್ನು ಹೇಳಿ ಪ್ರಾರ್ಥಿಸಬಹುದು.

ಹಿಂಸೆ ಎದುರಿಸುತ್ತಿರುವ ಯಾವೆಲ್ಲಾ ದೇಶಗಳ ಸಹೋದರರಿಗಾಗಿ ಪ್ರಾರ್ಥಿಸಲು ಬಯಸುತ್ತೀರೆಂದು ಬರೆಯಿರಿ.