“ಒಬ್ಬ ರಾಜನು ನೀತಿಗನುಸಾರವಾಗಿ ಆಳುವನು”
ರಾಜನಾದ ಯೇಸು, ಮಂದೆಯ ಆರೈಕೆ ಮಾಡುವ “ಅಧಿಪತಿಗಳು” ಅಥವಾ ಹಿರಿಯರನ್ನು ದಯಪಾಲಿಸಿದ್ದಾನೆ
-
‘ಅತಿವೃಷ್ಟಿಯಲ್ಲಿ ಅಥವಾ ಚಂಡಮಾರುತದಲ್ಲಿ ಆವರಣದ ಹಾಗೆ’ ಅವರು ತಮ್ಮ ಮಂದೆಯನ್ನು ಹಿಂಸೆ ಮತ್ತು ನಿರಾಶೆಯಂತಹ ಚಂಡಮಾರುತಗಳಿಂದ ರಕ್ಷಿಸಲು ಕೆಲಸಮಾಡುತ್ತಾರೆ
-
‘ಮರುಭೂಮಿಯಲ್ಲಿ ನೀರಿನ ಕಾಲಿವೆಗಳಂತೆ’ ಅವರು ಆಧ್ಯಾತ್ಮಿಕವಾಗಿ ಬಾಯಾರಿದವರಿಗೆ ಕಲುಷಿತವಾಗಿಲ್ಲದ ಶುದ್ಧ ಸತ್ಯವನ್ನು ಕೊಟ್ಟು ಚೈತನ್ಯಗೊಳಿಸುತ್ತಾರೆ
-
‘ಬೆಂಗಾಡಿನಲ್ಲಿ ದೊಡ್ಡ ಬಂಡೆಯ ನೆರಳಿನೋಪಾದಿ’ ಅವರು ಆಧ್ಯಾತ್ಮಿಕ ಮಾರ್ಗದರ್ಶನ ಮತ್ತು ಚೈತನ್ಯವನ್ನು ಒದಗಿಸುವ ಮೂಲಕ ಹಿಂಡಿಗೆ ಉಪಶಮನವನ್ನು ನೀಡುತ್ತಾರೆ