ಜನವರಿ 22-28
ಮತ್ತಾಯ 8-9
ಗೀತೆ 84 ಮತ್ತು ಪ್ರಾರ್ಥನೆ
ಆರಂಭದ ಮಾತುಗಳು (3 ನಿಮಿಷದೊಳಗೆ)
ಬೈಬಲಿನಲ್ಲಿರುವ ರತ್ನಗಳು
“ಯೇಸು ಜನರನ್ನು ಪ್ರೀತಿಸಿದನು”: (10 ನಿ.)
ಮತ್ತಾ 8:1-3—ಯೇಸು ಒಬ್ಬ ಕುಷ್ಠರೋಗಿಗೆ ಅಸಾಮಾನ್ಯವಾದ ಸಹಾನುಭೂತಿ ತೋರಿಸಿದನು (“ಅವನು ... ಅವನನ್ನು ಮುಟ್ಟಿ,” “ನನಗೆ ಮನಸ್ಸುಂಟು” ಮತ್ತಾ 8:3ರ ಬಗ್ಗೆ ಅಧ್ಯಯನ ಬೈಬಲಿನಲ್ಲಿರುವ ಮಾಹಿತಿ)
ಮತ್ತಾ 9:9-13—ಬೇರೆಯವರು ತಿರಸ್ಕಾರಭಾವದಿಂದ ನೋಡುತ್ತಿದ್ದ ವ್ಯಕ್ತಿಗಳಿಗೆ ಯೇಸು ಪ್ರೀತಿ ತೋರಿಸಿದನು (“ಊಟಕ್ಕೆ ಕುಳಿತಿದ್ದಾಗ,” “ತೆರಿಗೆ ವಸೂಲಿಗಾರರು” ಮತ್ತಾ 9:10ರ ಬಗ್ಗೆ ಅಧ್ಯಯನ ಬೈಬಲಿನಲ್ಲಿರುವ ಮಾಹಿತಿ)
ಮತ್ತಾ 9:35-38—ಯೇಸುವಿಗೆ ಜನರ ಮೇಲೆ ಪ್ರೀತಿ ಇದ್ದದರಿಂದ ಸುಸ್ತಾಗಿದ್ದರೂ ಸುವಾರ್ತೆ ಸಾರಿದನು ಮತ್ತು ಹೆಚ್ಚು ಕೆಲಸಗಾರರನ್ನು ಕೊಡುವಂತೆ ದೇವರಿಗೆ ಪ್ರಾರ್ಥಿಸಿದನು (“ಕನಿಕರಪಟ್ಟನು” ಮತ್ತಾ 9:36ರ ಬಗ್ಗೆ ಅಧ್ಯಯನ ಬೈಬಲಿನಲ್ಲಿರುವ ಮಾಹಿತಿ)
ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ: (8 ನಿ.)
ಮತ್ತಾ 8:8-10—ಶತಾಧಿಪತಿಯೊಂದಿಗೆ ಯೇಸು ಮಾಡಿದ ಸಂಭಾಷಣೆಯಿಂದ ನಾವೇನು ಕಲಿಯಬಹುದು? (w02 8/15 ಪುಟ 13 ಪ್ಯಾರ 16)
ಮತ್ತಾ 9:16, 17—ಯೇಸು ಈ ಎರಡು ದೃಷ್ಟಾಂತಗಳ ಮೂಲಕ ಏನು ಹೇಳಲು ಬಯಸಿದನು? (ಮಹಾನ್ ಪುರುಷ ಅಧ್ಯಾ. 28 ಪ್ಯಾರ 6)
ಈ ವಾರದ ಬೈಬಲ್ ವಾಚನವು ಯೆಹೋವನ ಬಗ್ಗೆ ನಿಮಗೆ ಏನನ್ನು ಕಲಿಸಿದೆ?
ಈ ವಾರದ ಬೈಬಲ್ ವಾಚನದಲ್ಲಿ ಇನ್ನೂ ಯಾವ ಆಧ್ಯಾತ್ಮಿಕ ಮುತ್ತುಗಳನ್ನು ನೀವು ಕಂಡುಕೊಂಡಿದ್ದೀರಿ?
ಬೈಬಲ್ ಓದುವಿಕೆ: (4 ನಿಮಿಷದೊಳಗೆ) ಮತ್ತಾ 8:1-17
ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ
ಎರಡನೇ ಪುನರ್ಭೇಟಿ: (3 ನಿಮಿಷದೊಳಗೆ) ಮಾದರಿ ಸಂಭಾಷಣೆಯಿಂದ ಆರಂಭಿಸಿ. ಮನೆಯವರನ್ನು ಕೂಟಕ್ಕೆ ಆಮಂತ್ರಿಸಿ.
ಮೂರನೇ ಪುನರ್ಭೇಟಿ: (3 ನಿಮಿಷದೊಳಗೆ) ನೀವೇ ಒಂದು ವಚನವನ್ನು ಆರಿಸಿಕೊಂಡು ತೋರಿಸಿ. ನಂತರ ನಾವು ಅಧ್ಯಯನ ಮಾಡಲು ಉಪಯೋಗಿಸುವ ಒಂದು ಪ್ರಕಾಶನವನ್ನು ನೀಡಿ.
ಬೈಬಲ್ ಅಧ್ಯಯನ: (6 ನಿಮಿಷದೊಳಗೆ) ಬೈಬಲ್ ಕಲಿಸುತ್ತದೆ ಪುಟ 47 ಪ್ಯಾರ 18-19
ನಮ್ಮ ಕ್ರೈಸ್ತ ಜೀವನ
‘ದೇವರು ಅವನನ್ನು ಕರ್ತನನ್ನಾಗಿಯೂ ಕ್ರಿಸ್ತನನ್ನಾಗಿಯೂ ಮಾಡಿದ್ದಾನೆ’—ಭಾಗ 1ರ ತುಣುಕು: (15 ನಿ.) ಚರ್ಚೆ. ಮತ್ತಾಯ 9:18-25ನ್ನು ಓದಿ ವಿಡಿಯೋ ತುಣುಕನ್ನು ನೋಡಿದ ಮೇಲೆ ಈ ಪ್ರಶ್ನೆಗಳನ್ನು ಕೇಳಿ:
ಕಾಯಿಲೆ ಬಿದ್ದಿದ್ದ ಆ ಸ್ತ್ರೀಯ ಮೇಲೆ ಮತ್ತು ಯಾಯೀರನ ಮೇಲೆ ಯೇಸುವಿಗೆ ಪ್ರೀತಿ ಇತ್ತೆಂದು ಹೇಗೆ ತೋರಿಸಿದನು?
ದೇವರ ರಾಜ್ಯದ ಆಡಳಿತದ ಕೆಳಗೆ ಜೀವನ ಹೇಗಿರುವುದೆಂಬ ಬೈಬಲ್ ಪ್ರವಾದನೆಗಳ ಬಗ್ಗೆ ನಮಗಿರುವ ನೋಟವನ್ನು ಈ ವೃತ್ತಾಂತ ಹೇಗೆ ಬದಲಾಯಿಸುತ್ತದೆ?
ಯೇಸುವನ್ನು ಅನುಕರಿಸುತ್ತಾ ನಾವು ಯಾವ ವಿಧಗಳಲ್ಲಿ ಜನರ ಮೇಲಿರುವ ಪ್ರೀತಿಯನ್ನು ತೋರಿಸಬಹುದು?
ಸಭಾ ಬೈಬಲ್ ಅಧ್ಯಯನ: (30 ನಿ.) “ದೇವರ ಪ್ರೀತಿ,” ಅಧ್ಯಾ. 13 ಪ್ಯಾರ 1-4 ಮತ್ತು ಪುಟ 170-171, 180-181ರಲ್ಲಿರುವ ಚೌಕಗಳು
ಇಂದಿನ ಕೂಟದ ಮುಖ್ಯಾಂಶಗಳು, ಮುಂದಿನ ಕೂಟದ ಮುನ್ನೋಟ (3 ನಿ.)
ಗೀತೆ 105 ಮತ್ತು ಪ್ರಾರ್ಥನೆ