ಯೇಸು ಜನರನ್ನು ಪ್ರೀತಿಸಿದನು
ಮತ್ತಾಯ 8 ಮತ್ತು 9ನೇ ಅಧ್ಯಾಯಗಳು ಯೇಸು ಗಲಿಲಾಯ ಪ್ರಾಂತದಲ್ಲಿ ಮಾಡಿದ ಸೇವೆಯ ಬಗ್ಗೆ ತಿಳಿಸುತ್ತವೆ. ಯೇಸು ಜನರನ್ನು ವಾಸಿಮಾಡಿದಾಗ ತನ್ನಲ್ಲಿರುವ ಶಕ್ತಿಯನ್ನು ತೋರಿಸಿದನು. ಆದರೆ ಇದಕ್ಕಿಂತ ಮುಖ್ಯವಾಗಿ ಬೇರೆಯವರ ಮೇಲೆ ತನಗಿದ್ದ ಪ್ರೀತಿ ಮತ್ತು ಸಹಾನುಭೂತಿಯನ್ನು ತೋರಿಸಿದನು.
-
ಯೇಸು ಒಬ್ಬ ಕುಷ್ಠರೋಗಿಯನ್ನು ವಾಸಿಮಾಡಿದನು.—ಮತ್ತಾ 8:1-3
-
ಯೇಸು ಒಬ್ಬ ಶತಾಧಿಪತಿಯ ಆಳನ್ನು ವಾಸಿಮಾಡಿದನು.—ಮತ್ತಾ 8:5-13
ಪೇತ್ರನ ಅತ್ತೆಯನ್ನು ವಾಸಿಮಾಡಿದನು.—ಮತ್ತಾ 8:14, 15
ದೆವ್ವಗಳನ್ನು ಬಿಡಿಸಿದನು, ಅಸ್ವಸ್ಥರನ್ನು ವಾಸಿಮಾಡಿದನು.—ಮತ್ತಾ 8:16, 17
-
ಯೇಸು ಅಸಾಧಾರಣವಾಗಿ ಕ್ರೂರವಾಗಿದ್ದ ದೆವ್ವಗಳನ್ನು ಬಿಡಿಸಿ ಹಂದಿಗಳ ಹಿಂಡಿಗೆ ಹೋಗುವಂತೆ ಬಿಟ್ಟನು.—ಮತ್ತಾ 8:28-32
-
ಯೇಸು ಪಾರ್ಶ್ವವಾಯು ರೋಗಿಯನ್ನು ವಾಸಿಮಾಡಿದನು.—ಮತ್ತಾ 9:1-8
ತನ್ನ ಬಟ್ಟೆಯನ್ನು ಮುಟ್ಟಿದ್ದ ಸ್ತ್ರೀಯನ್ನು ವಾಸಿಮಾಡಿದನು ಮತ್ತು ಯಾಯೀರನ ಮಗಳನ್ನು ಪುನರುತ್ಥಾನಗೊಳಿಸಿದನು.—ಮತ್ತಾ 9:18-26
ಕುರುಡರಿಗೆ ಕಣ್ಣು ಕಾಣುವಂತೆ ಮಾಡಿದನು, ಮೂಕರು ಮಾತಾಡುವಂತೆ ಮಾಡಿದನು.—ಮತ್ತಾ 9:27-34
-
ಯೇಸು ಎಲ್ಲ ಪಟ್ಟಣಗಳಲ್ಲಿಯೂ ಹಳ್ಳಿಗಳಲ್ಲಿಯೂ ಸಂಚರಿಸಿ ಎಲ್ಲ ರೀತಿಯ ರೋಗವನ್ನೂ ದೇಹದೌರ್ಬಲ್ಯವನ್ನೂ ಗುಣಪಡಿಸಿದನು.—ಮತ್ತಾ 9:35, 36
ನನ್ನ ಸುತ್ತಮುತ್ತ ಇರುವ ಜನರಿಗೆ ನಾನು ಹೇಗೆ ಹೆಚ್ಚು ಪ್ರೀತಿ ಮತ್ತು ಸಹಾನುಭೂತಿ ತೋರಿಸಬಲ್ಲೆ?