ಜನವರಿ 1-7
ಮತ್ತಾಯ 1-3
ಗೀತೆ 99 ಮತ್ತು ಪ್ರಾರ್ಥನೆ
ಆರಂಭದ ಮಾತುಗಳು (3 ನಿಮಿಷದೊಳಗೆ)
ಬೈಬಲಿನಲ್ಲಿರುವ ರತ್ನಗಳು
“ಸ್ವರ್ಗದ ರಾಜ್ಯವು ಸಮೀಪಿಸಿದೆ”: (10 ನಿ.)
[ಮತ್ತಾಯ ಪುಸ್ತಕದ ಪರಿಚಯ ಎಂಬ ವಿಡಿಯೋ ಹಾಕಿ.]
ಮತ್ತಾ 3:1, 2—ಸ್ವರ್ಗೀಯ ರಾಜ್ಯದ ರಾಜ ಬೇಗ ಬರಲಿದ್ದಾನೆ ಎಂದು ಸ್ನಾನಿಕನಾದ ಯೋಹಾನನು ಪ್ರಕಟಿಸಿದನು (“ಸಾರುವ ಕೆಲಸ,” ”ದೇವರ ರಾಜ್ಯ,” “ಸ್ವರ್ಗದ ರಾಜ್ಯ,” “ಸಮೀಪಿಸಿದೆ” ಮತ್ತಾ 3:1, 2ರ ಬಗ್ಗೆ ಅಧ್ಯಯನ ಬೈಬಲಿನಲ್ಲಿರುವ ಮಾಹಿತಿ)
ಮತ್ತಾ 3:4—ಸ್ನಾನಿಕನಾದ ಯೋಹಾನನು ಸರಳ ಜೀವನ ನಡೆಸಿದನು ಮತ್ತು ಯೆಹೋವನ ಚಿತ್ತವನ್ನು ಮಾಡಲು ಸಂಪೂರ್ಣವಾಗಿ ತನ್ನ ಜೀವನವನ್ನು ಮುಡಿಪಾಗಿಟ್ಟನು (“ಸ್ನಾನಿಕನಾದ ಯೋಹಾನನ ಬಟ್ಟೆ ಮತ್ತು ಹೊರತೋರಿಕೆ,” “ಮಿಡತೆಗಳು,” “ಕಾಡುಜೇನು” ಮತ್ತಾ 3:4ರ ಬಗ್ಗೆ ಅಧ್ಯಯನ ಬೈಬಲಿನಲ್ಲಿರುವ ಮೀಡಿಯಾ)
ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ: (8 ನಿ.)
ಮತ್ತಾ 1:3—ಮತ್ತಾಯನು ಯೇಸುವಿನ ವಂಶಾವಳಿಯಲ್ಲಿ ಐದು ಮಂದಿ ಸ್ತ್ರೀಯರ ಹೆಸರನ್ನು ಯಾಕೆ ಸೇರಿಸಿದ್ದಾನೆ? (“ತಾಮಾರ” ಮತ್ತಾ 1:3ರ ಬಗ್ಗೆ ಅಧ್ಯಯನ ಬೈಬಲಿನಲ್ಲಿರುವ ಮಾಹಿತಿ)
ಮತ್ತಾ 3:11—ದೀಕ್ಷಾಸ್ನಾನ ಪಡೆಯುವಾಗ ನೀರಿನಲ್ಲಿ ಸಂಪೂರ್ಣವಾಗಿ ಮುಳುಗಬೇಕು ಯಾಕೆ? (”ನಿಮಗೆ ದೀಕ್ಷಾಸ್ನಾನ ಮಾಡಿಸುವನು” ಮತ್ತಾ 3:11ರ ಬಗ್ಗೆ ಅಧ್ಯಯನ ಬೈಬಲಿನಲ್ಲಿರುವ ಮಾಹಿತಿ)
ಈ ವಾರದ ಬೈಬಲ್ ವಾಚನವು ಯೆಹೋವನ ಬಗ್ಗೆ ನಿಮಗೆ ಏನನ್ನು ಕಲಿಸಿದೆ?
ಈ ವಾರದ ಬೈಬಲ್ ವಾಚನದಲ್ಲಿ ಇನ್ನೂ ಯಾವ ಆಧ್ಯಾತ್ಮಿಕ ಮುತ್ತುಗಳನ್ನು ನೀವು ಕಂಡುಕೊಂಡಿದ್ದೀರಿ?
ಬೈಬಲ್ ಓದುವಿಕೆ: (4 ನಿಮಿಷದೊಳಗೆ) ಮತ್ತಾ 1:1-17
ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ
ಮೊದಲ ಭೇಟಿಯ ವಿಡಿಯೋ: (4 ನಿ.) ವಿಡಿಯೋ ಹಾಕಿ, ನಂತರ ಚರ್ಚಿಸಿ.
ಮೊದಲನೇ ಪುನರ್ಭೇಟಿ: (3 ನಿಮಿಷದೊಳಗೆ) ಮಾದರಿ ಸಂಭಾಷಣೆಗಳು ನೋಡಿ.
ಬೈಬಲ್ ಅಧ್ಯಯನ: (6 ನಿಮಿಷದೊಳಗೆ) ಬೈಬಲ್ ಕಲಿಸುತ್ತದೆ ಪುಟ 41-42 ಪ್ಯಾರ 6-7
ನಮ್ಮ ಕ್ರೈಸ್ತ ಜೀವನ
ವಾರ್ಷಿಕ ಸೇವಾ ವರದಿ: (15 ನಿ.) ಹಿರಿಯನಿಂದ ಭಾಷಣ. ವಾರ್ಷಿಕ ಸೇವಾ ವರದಿಯ ಬಗ್ಗೆ ಶಾಖಾ ಕಚೇರಿಯಿಂದ ಬಂದಿರುವ ಪತ್ರವನ್ನು ಓದಿ. ನಂತರ ಕಳೆದ ಸೇವಾ ವರ್ಷ ಸೇವೆಯಲ್ಲಿ ಅತ್ಯುತ್ತಮ ಅನುಭವಗಳನ್ನು ಪಡೆದುಕೊಂಡ ಪ್ರಚಾರಕರನ್ನು ಸಂದರ್ಶನ ಮಾಡಿ. ಈ ಸಂದರ್ಶನಕ್ಕೆ ಪ್ರಚಾರಕರನ್ನು ಮೊದಲೇ ಆರಿಸಿಕೊಂಡಿರಬೇಕು.
ಸಭಾ ಬೈಬಲ್ ಅಧ್ಯಯನ: (30 ನಿ.) “ದೇವರ ಪ್ರೀತಿ,” ಅಧ್ಯಾ. 12 ಪ್ಯಾರ 1-8
ಇಂದಿನ ಕೂಟದ ಮುಖ್ಯಾಂಶಗಳು, ಮುಂದಿನ ಕೂಟದ ಮುನ್ನೋಟ (3 ನಿ.)
ಗೀತೆ 72 ಮತ್ತು ಪ್ರಾರ್ಥನೆ