ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಮ್ಮ ಕ್ರೈಸ್ತ ಜೀವನ

ಚಿಂತೆಮಾಡಬೇಡಿ

ಚಿಂತೆಮಾಡಬೇಡಿ

ಪರ್ವತ ಪ್ರಸಂಗದಲ್ಲಿ ಯೇಸು ಹೇಳಿದ್ದು: “ನಿಮ್ಮ ಪ್ರಾಣಗಳ ಕುರಿತು . . . ಚಿಂತೆಮಾಡುವುದನ್ನು ನಿಲ್ಲಿಸಿರಿ.” (ಮತ್ತಾ 6:25) ಸೈತಾನನ ಲೋಕದಲ್ಲಿ ಜೀವಿಸುತ್ತಿರುವ ಅಪರಿಪೂರ್ಣ ಮಾನವರಿಗೆ ಕೆಲವು ಸಂದರ್ಭಗಳಲ್ಲಿ ಚಿಂತೆಯಾಗುವುದು ಸಹಜ. ಆದರೂ ಯೇಸು ತನ್ನ ಶಿಷ್ಯರಿಗೆ ಅತಿಯಾದ ಚಿಂತೆಯಿಂದ ದೂರವಿರಬೇಕು ಎಂದು ಹೇಳಿದನು. (ಕೀರ್ತ 13:2) ಯಾಕೆ? ಯಾಕೆಂದರೆ ಯಾವುದೇ ವಿಷಯದ ಬಗ್ಗೆ, ಪ್ರತಿನಿತ್ಯದ ಅಗತ್ಯಗಳ ಬಗ್ಗೆಯೂ ಅನಗತ್ಯ ಚಿಂತೆ ಮಾಡಿದರೆ ದೇವರ ರಾಜ್ಯಕ್ಕೆ ಮೊದಲ ಸ್ಥಾನ ಕೊಡುವುದು ತುಂಬ ಕಷ್ಟಕರವಾಗಿ ಬಿಡುತ್ತದೆ. (ಮತ್ತಾ 6:33) ಯೇಸುವಿನ ಮುಂದಿನ ಮಾತುಗಳು ಅನಗತ್ಯವಾಗಿ ಚಿಂತಿಸದಿರಲು ನಮಗೆ ಸಹಾಯ ಮಾಡುತ್ತವೆ.

ನಾವು ಯಾವ ವಿಷಯಗಳ ಬಗ್ಗೆ ಚಿಂತೆಮಾಡುವುದನ್ನು ನಿಲ್ಲಿಸಬೇಕು?: