ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ | ಸೇವೆಯಲ್ಲಿ ಇನ್ನೂ ಹೆಚ್ಚು ಖುಷಿ ಪಡಕೊಳ್ಳಿ

ಮನಸ್ಸಿಗೆ ನಾಟಿಸಿ

ಮನಸ್ಸಿಗೆ ನಾಟಿಸಿ

ದೇವರ ಮಾತನ್ನು ಕೇಳಬೇಕು ಅನ್ನೋ ಆಸೆ ಮನಸ್ಸಲ್ಲಿ ಇರಬೇಕು. (ಜ್ಞಾನೋ 3:1) ಅದಕ್ಕೆ ವಿದ್ಯಾರ್ಥಿಗಳಿಗೆ ಕಲಿಸುವಾಗ ಅವರ ಮನಸ್ಸಿಗೆ ನಾಟಿಸಬೇಕು. ಹೇಗೆ?

ಬರೀ ಬೈಬಲಲ್ಲಿರೋ ಸತ್ಯಗಳನ್ನ ಕಲಿಸಿದರೆ ಸಾಕಾಗಲ್ಲ. ಬದಲಿಗೆ ಕಲಿಯೋ ವಿಷಯಗಳು ಅವನಿಗೆ ಹೇಗೆ ಅನ್ವಯಿಸುತ್ತೆ ಮತ್ತು ಯೆಹೋವನ ಜೊತೆ ಅವನಿಗಿರೋ ಸ್ನೇಹನ ಹೇಗೆ ಜಾಸ್ತಿ ಮಾಡಬಹುದು ಅಂತ ಅವನು ಯೋಚಿಸೋ ತರ ಕಲಿಸಬೇಕು. ಬೈಬಲ್‌ನಲ್ಲಿ ದೇವರ ಪ್ರೀತಿ, ಒಳ್ಳೇತನ ಮತ್ತು ನೀತಿ ಹೇಗೆ ಎದ್ದು ಕಾಣುತ್ತೆ ಅಂತ ಅರ್ಥಮಾಡಿಸಿ. ಕಲಿಯೋ ವಿಷಯಗಳ ಬಗ್ಗೆ ಅವನಿಗೆ ಹೇಗೆ ಅನಿಸುತ್ತೆ ಅಂತ ತಿಳಿದುಕೊಳ್ಳೋಕೆ ಪ್ರೀತಿಯಿಂದ ಪ್ರಶ್ನೆಗಳನ್ನ ಕೇಳಿ. ಒಂದು ಕೆಟ್ಟ ಮನೋಭಾವ ಅಥವಾ ರೂಢಿಯನ್ನು ಅವನು ಬಿಟ್ಟುಬಿಟ್ಟರೆ ಜೀವನ ಎಷ್ಟು ಚೆನ್ನಾಗಿರುತ್ತೆ ಅಂತ ಯೋಚನೆ ಮಾಡೋಕೆ ಸಹಾಯಮಾಡಿ. ನಿಮ್ಮ ವಿದ್ಯಾರ್ಥಿ ಯೆಹೋವನನ್ನು ಪ್ರೀತಿಸುವಾಗ ನಿಮಗಾಗೊ ಖುಷಿಯನ್ನು ಮಾತಲ್ಲಿ ಹೇಳಕ್ಕಾಗಲ್ಲ.

ಶಿಷ್ಯರನ್ನು ಮಾಡೋದ್ರಲ್ಲಿ ಖುಷಿಪಡಲು ಕೌಶಲ ಹೆಚ್ಚಿಸಿ—ಮನಸ್ಸಿಗೆ ನಾಟಿಸಿ ಅನ್ನೋ ವಿಡಿಯೋ ನೋಡಿ. ನಂತ್ರ ಈ ಪ್ರಶ್ನೆಗಳಿಗೆ ಉತ್ರ ಕೊಡಿ.

  • “ಸೋಮವಾರ ನಾವು ಚರ್ಚೆ ಮಾಡಿದ್ದರ ಬಗ್ಗೆ ನೀನು ಯೋಚನೆ ಮಾಡಿದ್ಯಾ” ಅಂತ ನೀತಾ ಯಾಕೆ ಕೇಳಿದಳು?

  • ಬೈಬಲ್‌ ನಿಯಮಗಳನ್ನು ಕೊಡೋ ಮೂಲಕ ದೇವರು ಪ್ರೀತಿ ತೋರಿಸ್ತಾನೆ ಅಂತ ಜಾಸ್ಮಿನ್‌ಗೆ ಅರ್ಥಮಾಡಿಸೋಕೆ ನೀತಾ ಏನು ಮಾಡಿದಳು?

  • ವಿದ್ಯಾರ್ಥಿಗಳಿಗೆ ಮನಸ್ಸಿಗೆ ನಾಟೋ ತರ ಕಲಿಸಿದರೆ ಅವರು ದೇವರಿಗೆ ಹತ್ತಿರ ಆಗ್ತಾ ಇರುತ್ತಾರೆ

    ದೇವರ ಮೇಲಿರುವ ಪ್ರೀತಿಯನ್ನು ತೋರಿಸಲು ನೀತಾ ಹೇಗೆ ಜಾಸ್ಮಿನ್‌ಗೆ ಸಹಾಯಮಾಡಿದಳು?