ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ | ಸೇವೆಯಲ್ಲಿ ಇನ್ನೂ ಹೆಚ್ಚು ಖುಷಿ ಪಡಕೊಳ್ಳಿ

ಅನುಕಂಪ ತೋರಿಸಿ

ಅನುಕಂಪ ತೋರಿಸಿ

ಇನ್ನೊಬ್ಬರ ಯೋಚನೆ, ಭಾವನೆ, ಇಷ್ಟ-ಕಷ್ಟ ಮತ್ತು ಅಗತ್ಯಗಳನ್ನ ಅರ್ಥ ಮಾಡಿಕೊಳ್ಳೋ ಶಕ್ತಿನೇ ಅನುಕಂಪ. ಈ ಗುಣ ಇರುವವರನ್ನ ಜನ ಬೇಗ ಗುರುತಿಸುತ್ತಾರೆ. ಬೇರೆಯವರಿಗೆ ಸಹಾಯ ಮಾಡಬೇಕು ಅನ್ನೋ ಮನಸ್ಸಿದ್ರೆ ಅನುಕಂಪ ತೋರಿಸೋಕೆ ಸುಲಭ. ಸೇವೇಲಿ ಜನರಿಗೆ ಅನುಕಂಪ ತೋರಿಸಿದಾಗ ಯೆಹೋವ ಪ್ರೀತಿ, ಕಾಳಜಿ ಇರೋ ದೇವರು ಅಂತ ತೋರಿಸಿಕೊಡ್ತೀವಿ. ಆಗ ಅವರಿಗೆ ದೇವರ ಬಗ್ಗೆ ತಿಳುಕೊಳ್ಳಬೇಕು ಅನ್ನೋ ಆಸೆ ಬರುತ್ತೆ.—ಫಿಲಿ 2:4.

ವಿದ್ಯಾರ್ಥಿಗೆ ಬೈಬಲ್‌ ಕಲಿಸುವಾಗ ಮಾತ್ರ ಅಲ್ಲ ಬೇರೆ ಸಮಯದಲ್ಲೂ ಅನುಕಂಪ ತೋರಿಸ್ತೀವಿ. ಅದನ್ನ ನಾವು ಮಾತಾಡೋ ರೀತಿಯಲ್ಲಿ, ಕೈಸನ್ನೆಯಲ್ಲಿ, ಮುಖದಲ್ಲಿ ತೋರಿಸ್ತೀವಿ. ಅವರು ಮಾತಾಡುವಾಗ ಗಮನಕೊಟ್ಟು ಪ್ರೀತಿಯಿಂದ ಕೇಳಿಸಿಕೊಳ್ತೀವಿ. ಅವರ ಬಗ್ಗೆ ಕಾಳಜಿ ವಹಿಸ್ತೀವಿ. ಅವರ ಬೇಕು-ಬೇಡಗಳಿಗೆ, ಅಭಿಪ್ರಾಯಗಳಿಗೆ ಬೆಲೆ ಕೊಡ್ತೀವಿ. ಅವರ ಪರಿಸ್ಥಿತಿ ಅರ್ಥ ಮಾಡಿಕೊಳ್ತೀವಿ. ಏನು ಮಾಡಬೇಕು ಅಂತ ಹೇಳಿಕೊಡ್ತೀವಿ, ಸಹಾಯನೂ ಮಾಡ್ತೀವಿ. ಆದರೆ ಬದಲಾವಣೆ ಮಾಡಿಕೊಳ್ಳಲೇಬೇಕು ಅಂತ ಒತ್ತಾಯ ಮಾಡಲ್ಲ. ನಮ್ಮಿಂದ ಸಹಾಯ ತಗೊಂಡು ಅವರಾಗೇ ಬದಲಾವಣೆ ಮಾಡಿಕೊಂಡಾಗ ಖುಷಿಪಡ್ತೀವಿ.

ಶಿಷ್ಯರನ್ನು ಮಾಡೋದ್ರಲ್ಲಿ ಖುಷಿಪಡಲು ಕೌಶಲ ಹೆಚ್ಚಿಸಿ—ಅನುಕಂಪ ತೋರಿಸಿ ಅನ್ನೋ ವಿಡಿಯೋ ನೋಡಿ, ನಂತ್ರ ಈ ಪ್ರಶ್ನೆಗಳಿಗೆ ಉತ್ರ ಕೊಡಿ:

  • ಜಾಸ್ಮಿನ್‌ ಲೇಟಾಗಿ ಬಂದಾಗ ನೀತಾ ಹೇಗೆ ಅನುಕಂಪ ತೋರಿಸಿದಳು?

  • ಇವತ್ತು ಸಿಕ್ಕಾಪಟ್ಟೆ ಕೆಲಸ ಇದೆ, ಸ್ಟಡಿ ಮಾಡೋಕೆ ಆಗಲ್ಲ ಅಂತ ಜಾಸ್ಮಿನ್‌ ಹೇಳಿದಾಗ ನೀತಾ ಹೇಗೆ ಅನುಕಂಪ ತೋರಿಸಿದಳು?

  • ನಾವು ಅನುಕಂಪ ತೋರಿಸಿದ್ರೆ ಜನ ಯೆಹೋವನ ಬಗ್ಗೆ ತಿಳುಕೊಳ್ಳೋಕೆ ಇಷ್ಟಪಡ್ತಾರೆ

    ಅಚ್ಚುಕಟ್ಟಾಗಿ ಇಡೋಕೆ ಜಾಸ್ಮಿನ್‌ಗೆ ನೀತಾ ಹೇಗೆ ಅನುಕಂಪ ತೋರಿಸಿದಳು?