ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಕ್ರೈಸ್ತ ಜೀವನ

ನನ್ನ ಪ್ರಾರ್ಥನೆಗೆ ಇದೇ ಉತ್ತರನಾ?

ನನ್ನ ಪ್ರಾರ್ಥನೆಗೆ ಇದೇ ಉತ್ತರನಾ?

ನಂಬಿಗಸ್ತರ ಪ್ರಾರ್ಥನೆಗಳಿಗೆ ಯೆಹೋವ ಉತ್ತರ ಕೊಟ್ಟಿರೋ ಉದಾಹರಣೆಗಳು ಬೈಬಲಲ್ಲಿ ತುಂಬಾ ಇದೆ. ಆ ನಂಬಿಗಸ್ತರು ತಮ್ಮ ಕಷ್ಟ-ನೋವುಗಳನ್ನ ಯೆಹೋವನ ಹತ್ತಿರ ಹೇಳಿಕೊಂಡರು. ದೇವರು ಅದನ್ನ ಕೇಳಿಸಿಕೊಂಡು ಉತ್ತರನೂ ಕೊಟ್ಟನು. ಆಗ ಅವರ ನಂಬಿಕೆ ಇನ್ನೂ ಬಲ ಆಯ್ತು. ಇದರಿಂದ ನಾವೇನು ಕಲಿತೀವಿ? ನಮಗೆ ಯಾವ ಕಷ್ಟ ಇದೆ ಅಂತ ಯೆಹೋವನ ಹತ್ತಿರ ನಿರ್ದಿಷ್ಟವಾಗಿ ಹೇಳಿಕೊಂಡರೆ ಆತನು ಹೇಗೆ ಉತ್ತರ ಕೊಡ್ತಾನೆ ಅಂತ ಕಂಡುಹಿಡಿಯೋಕೆ ಆಗುತ್ತೆ. ಕೆಲವೊಮ್ಮೆ ನಾವು ಅಂದುಕೊಂಡಿರೋ ತರಾನೇ ಆ ಉತ್ತರಗಳು ಇರಲ್ಲ. (2ಕೊರಿಂ 12:7-9; ಎಫೆ 3:20) ಯೆಹೋವ ಬೇರೆಬೇರೆ ರೀತಿಯಲ್ಲಿ ಉತ್ತರ ಕೊಡ್ತಾನೆ. ಯಾವ ಯಾವ ರೀತಿಯಲ್ಲಿ?

  • ಕಷ್ಟ ಬಂದಾಗ ಸೋತುಹೋಗದೆ ಇರೋಕೆ ಬಲ, ನೆಮ್ಮದಿ ಅಥವಾ ನಂಬಿಕೆ.—ಫಿಲಿ 4:13.

  • ಸರಿಯಾದ ನಿರ್ಧಾರ ತಗೊಳ್ಳೋಕೆ ವಿವೇಕ.—ಯಾಕೋ 1:5.

  • ಕೆಲಸಗಳನ್ನು ಮಾಡೋಕೆ ಬಯಕೆ ಮತ್ತು ಶಕ್ತಿ.—ಫಿಲಿ 2:13.

  • ಚಿಂತೆಯಲ್ಲಿದ್ದಾಗ ಸಮಾಧಾನ.—ಫಿಲಿ 4:6, 7.

  • ಬೇರೆಯವರಿಂದ ಸಹಾಯ-ಸಾಂತ್ವನ.—1ಯೋಹಾ 3:17, 18.

  • ನಾವು ಬೇಡಿಕೊಂಡವರಿಗೆ ಯೆಹೋವ ಸಹಾಯ ಮಾಡ್ತಾನೆ. —ಅಕಾ 12:5, 11.

ಯೆಹೋವನು “ಪ್ರಾರ್ಥನೆಯನ್ನು ಕೇಳುವವನು” ಅನ್ನೋ ವಿಡಿಯೋ ನೋಡಿ ಈ ಪ್ರಶ್ನೆಗಳಿಗೆ ಉತ್ತರ ಕೊಡಿ:

  • ಆರೋಗ್ಯ ಸಮಸ್ಯೆಯಿಂದ ನಮಗೆ ತುಂಬ ವಿಷಯಗಳನ್ನು ಮಾಡಕ್ಕಾಗದೆ ಇದ್ದರೂ ಏನು ಮಾಡಬಹುದು ಅಂತ ಸಹೋದರ ಶಿಮಿಜು ತೋರಿಸಿಕೊಟ್ಟರು?

  • ಸಹೋದರ ಶಿಮಿಜು ಅನುಭವದಿಂದ ನಾವೇನು ಕಲಿಯಬಹುದು?