ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಕ್ರೈಸ್ತ ಜೀವನ

ಮಾದರಿ ಸಂಭಾಷಣೆಗಳನ್ನು ಬಳಸೋದು ಹೇಗೆ?

ಮಾದರಿ ಸಂಭಾಷಣೆಗಳನ್ನು ಬಳಸೋದು ಹೇಗೆ?

ಮಾದರಿ ಸಂಭಾಷಣೆಗಳನ್ನು ಮಾಡೋಕೆ ನಮ್ಮ ಸಹೋದರರು ತುಂಬ ಶ್ರಮಪಡುತ್ತಾರೆ. ಅದನ್ನ ಉಪಯೋಗಿಸುವುದರಿಂದ ತುಂಬ ಸಹೋದರ ಸಹೋದರಿಯರಿಗೆ ಸೇವೆಯಲ್ಲಿ ಪ್ರಯೋಜನ ಆಗಿದೆ. ಹಾಗಂತ ಮಾದರಿ ಸಂಭಾಷಣೆಯಲ್ಲಿ ಇರೋದನ್ನ ಮಾತ್ರ ಮಾತಾಡಬೇಕು ಅಂತಲ್ಲ. ಜನ್ರಿಗೆ ಇಷ್ಟ ಆಗೋ ಬೇರೆಬೇರೆ ವಿಷಯಗಳ ಬಗ್ಗೆ ನೀವು ಸೇವೆಯಲ್ಲಿ ಮಾತಾಡಬಹುದು. ಯಾಕಂದ್ರೆ ಎಲ್ಲಾ ಕಡೆ ಜನರು ಒಂದೇ ರೀತಿ ಯೋಚನೆ ಮಾಡಲ್ಲ. ಆದರೆ ವಿಶೇಷ ಅಭಿಯಾನದ ಸಮಯದಲ್ಲಿ ಕೊಟ್ಟಿರೋ ಮಾರ್ಗದರ್ಶನಗಳನ್ನು ಪಾಲಿಸಬೇಕು. ಒಟ್ಟಿನಲ್ಲಿ ಯೇಸು ಹೇಳಿರೋ ತರ ಸಿಹಿಸುದ್ದಿ ಸಾರೋದೇ ನಮ್ಮ ಮುಖ್ಯ ಗುರಿ.—ಮತ್ತಾ 24:14.

ವಿದ್ಯಾರ್ಥಿ ನೇಮಕಗಳನ್ನ ಮಾಡುವಾಗ ಕೂಟದ ಕೈಪಿಡಿಯಲ್ಲಿರೋ ಮಾದರಿ ಸಂಭಾಷಣೆಯ ವಿಷಯವನ್ನೇ ಬಳಸಬೇಕು. (ಉದಾಹರಣೆಗೆ ಜುಲೈ ಮತ್ತು ಆಗಸ್ಟ್‌ ತಿಂಗಳ ವಿಷಯ ಧಾರಾಳತೆ) ಆದ್ರೆ ಅಲ್ಲಿರೋ ಪ್ರಶ್ನೆ, ವಚನ ಮತ್ತು ಮುಂದಿನ ಭೇಟಿಗಾಗಿ ಕೊಟ್ಟಿರುವ ಪ್ರಶ್ನೆಯನ್ನ ಮತ್ತು ಸೆಟ್ಟಿಂಗ್‌ಗಳನ್ನ ನಿಮ್ಮ ಸ್ಥಳೀಯ ಟೆರಿಟೊರಿಗೆ ತಕ್ಕ ಹಾಗೆ ಬದಲಾಯಿಸಬಹುದು. ಒಂದುವೇಳೆ ಅದನ್ನ ಬದಲಾಯಿಸಬಾರದು ಅನ್ನೋ ನಿರ್ದೇಶನ ಸಿಕ್ಕಿದ್ರೆ ಮಾತ್ರ ನಾವು ಅದನ್ನ ಬದಲಾಯಿಸಲ್ಲ. ಜೂನ್‌ 2020ರ ಕೈಪಿಡಿ ಪುಟ 8ರಲ್ಲಿ ಬೇರೆ ನಿರ್ದೇಶನ ಕೊಡಲಾಗಿತ್ತು. ಈಗ ಅದು ಬದಲಾಗಿದೆ.