ಕ್ರೈಸ್ತ ಜೀವನ | ಹೊಸ ಸೇವಾ ವರ್ಷಕ್ಕಾಗಿ ಗುರಿಗಳನ್ನು ಇಡಿ
ಪಯನೀಯರ್ ಸೇವೆ
ನಾವು ಯೆಹೋವನ ಸೇವೆಯಲ್ಲಿ ಗುರಿಗಳನ್ನು ಇಡುವಾಗ ನಮ್ಮ ಶಕ್ತಿಯನ್ನ, ಸಮಯವನ್ನ ಚೆನ್ನಾಗಿ ಉಪಯೋಗಿಸಿದ ಹಾಗೆ ಆಗುತ್ತೆ. (1ಕೊರಿಂ 9:26) ಯಾಕಂದ್ರೆ ಅಂತ್ಯ ತುಂಬಾ ಹತ್ತಿರ ಇದೆ. ಹೊಸ ಸೇವಾ ವರ್ಷದಲ್ಲಿ ಪಯನೀಯರ್ ಸೇವೆ ಮಾಡೋ ಗುರಿ ಇಡೋಕೆ ಆಗುತ್ತಾ? (ಎಫೆ 5:15, 16) ಹಾಗಾದ್ರೆ ಈ ವಿಷಯದ ಬಗ್ಗೆ ನೀವು ನಿಮ್ಮ ಕುಟುಂಬ ಆರಾಧನೆಯಲ್ಲಿ ಚರ್ಚೆ ಮಾಡಬಹುದು. ಈ ಕೈಪಿಡಿಯಲ್ಲಿ ಅದಕ್ಕೋಸ್ಕರ ಒಳ್ಳೇ ಸಲಹೆಗಳಿವೆ. ಯಾವ ಗುರಿ ಇಡಬೇಕು ಅಂತ ಯೆಹೋವನ ಹತ್ರ ಪ್ರಾರ್ಥನೆ ಮಾಡಿ ತೀರ್ಮಾನ ಮಾಡಿ.—ಯಾಕೋ 1:5.
ಉದಾಹರಣೆಗೆ ನಿಮ್ಮ ಕುಟುಂಬದವರೆಲ್ಲ ಕೈಜೋಡಿಸಿದ್ರೆ ಒಬ್ಬರಾದರೂ ರೆಗ್ಯುಲರ್ ಪಯನೀಯರ್ ಸೇವೆ ಮಾಡಕ್ಕಾಗುತ್ತಾ? ಒಂದುವೇಳೆ ತಾಸುಗಳನ್ನ ಮುಟ್ಟಕ್ಕಾಗಲ್ಲ ಅಂತ ಅನಿಸಿದ್ರೆ ನಿಮ್ಮದೇ ಸನ್ನಿವೇಶದಲ್ಲಿರೋ ಕೆಲವು ಪಯನೀಯರ್‌ಗಳ ಹತ್ತಿರ ಮಾತಾಡಿ. (ಜ್ಞಾನೋ 15:22) ಅವರನ್ನು ಕುಟುಂಬ ಆರಾಧನೆಗೆ ಕರೆದು ಹೇಗೆ ಈ ಸೇವೆ ಮಾಡುತ್ತಿದ್ದಾರೆ ಅಂತ ಕೇಳಿ. ಅವರು ಮಾಡಿದ ವಿಷಯಗಳನ್ನ ನಿಮ್ಮ ಕೈಯಲ್ಲೂ ಮಾಡಕ್ಕಾಗುತ್ತೆ ಅಂತ ಅನಿಸಿದರೆ ಅದನ್ನ ನೀವೂ ಮಾಡಿನೋಡಿ. ನೀವು ಮತ್ತೆ ಪಯನೀಯರಿಂಗ್ ಶುರು ಮಾಡಕ್ಕಾಗುತ್ತಾ ಅಂತ ಯೋಚನೆ ಮಾಡಿನೋಡಿ.
ನಿಮ್ಮ ಕುಟುಂಬದಲ್ಲಿ ಇರುವವರಿಗೆ ಒಂದು ತಿಂಗಳು ಅಥವಾ ಅದಕ್ಕಿಂತ ಜಾಸ್ತಿ ತಿಂಗಳು ಸಹಾಯಕ ಪಯನೀಯರ್ ಸೇವೆ ಮಾಡಕ್ಕಾಗುತ್ತಾ? ಒಂದುವೇಳೆ ನಿಮಗೆ ಬೇಗ ಸುಸ್ತಾಗುತ್ತೆ ಅಂದ್ರೆ ಪ್ರತಿದಿನ ಸ್ವಲ್ಪಸ್ವಲ್ಪ ಸೇವೆ ಮಾಡ್ತಾ ಸಹಾಯಕ ಪಯನೀಯರಿಂಗ್ ಮಾಡಬಹುದಾ? ನೀವು ಕೆಲಸಕ್ಕೆ ಹೋಗೋದಾದ್ರೆ ಅಥವಾ ಸ್ಕೂಲಿಗೆ ಹೋಗೋದಾದ್ರೆ ರಜಾ ಇರೋ ತಿಂಗಳಲ್ಲಿ ಅಥವಾ 5 ವಾರ ಬರೋ ತಿಂಗಳಲ್ಲಿ ಸೇವೆ ಮಾಡಬಹುದು. ನೀವು ಯಾವಾಗ ಸಹಾಯಕ ಪಯನೀಯರ್ ಸೇವೆ ಮಾಡಬೇಕು ಅಂದುಕೊಂಡಿದ್ದೀರೋ ಅದನ್ನ ಕ್ಯಾಲೆಂಡರ್‌ನಲ್ಲಿ ಬರೆದಿಡಿ.—ಜ್ಞಾನೋ 21:5.
ನೀವು ಧೈರ್ಯಶಾಲಿ . . . ಪಯನೀಯರಾಗಿರಿ ಅನ್ನೋ ವಿಡಿಯೋ ನೋಡಿ ಈ ಪ್ರಶ್ನೆಗಳಿಗೆ ಉತ್ತರ ಕೊಡಿ:
-
ಪಯನೀಯರ್ ಸೇವೆಗೋಸ್ಕರ ತ್ಯಾಗಗಳನ್ನ ಮಾಡುವವರ ಮೇಲೆ ಯೆಹೋವನ ಪ್ರೀತಿ ಇದೆ ಅಂತ ಸಹೋದರಿ ಓಮನ್ ಅನುಭವದಿಂದ ನಮಗೆ ಹೇಗೆ ಗೊತ್ತಾಗುತ್ತೆ?