ಜುಲೈ 15-21
ಕೀರ್ತನೆ 63-65
ಗೀತೆ 18 ಮತ್ತು ಪ್ರಾರ್ಥನೆ | ಆರಂಭದ ಮಾತುಗಳು (1 ನಿ.)
1. “ನಿನ್ನ ಶಾಶ್ವತ ಪ್ರೀತಿ ಜೀವಕ್ಕಿಂತ ಅಮೂಲ್ಯ”
(10 ನಿ.)
ನಮಗೆ ಜೀವಕ್ಕಿಂತ ಯೆಹೋವ ದೇವರ ಜೊತೆಗಿರೋ ಸ್ನೇಹನೇ ಮುಖ್ಯ (ಕೀರ್ತ 63:3; ಕಾವಲಿನಬುರುಜು01 10/15 ಪುಟ 15-16 ಪ್ಯಾರ 17-18)
ಯೆಹೋವ ದೇವರ ಶಾಶ್ವತ ಪ್ರೀತಿ ಬಗ್ಗೆ ಯೋಚ್ನೆ ಮಾಡೋದ್ರಿಂದ ಆತನ ಮೇಲೆ ಗೌರವ ಜಾಸ್ತಿ ಆಗುತ್ತೆ (ಕೀರ್ತ 63:6; ಕಾವಲಿನಬುರುಜು19.12 ಪುಟ 28 ಪ್ಯಾರ 4; ಕಾವಲಿನಬುರುಜು15 10/15 ಪುಟ 24 ಪ್ಯಾರ 7)
ಯೆಹೋವ ದೇವರ ಶಾಶ್ವತ ಪ್ರೀತಿ ಮೇಲೆ ಗೌರವ ಜಾಸ್ತಿಯಾದ್ರೆ ಆತನನ್ನ ನಾವು ಸಂತೋಷದಿಂದ ಹೊಗೋಳೋಕೆ ಅದು ನಮ್ಮನ್ನ ಪ್ರೋತ್ಸಾಹಿಸುತ್ತೆ (ಕೀರ್ತ 63:4, 5; ಕಾವಲಿನಬುರುಜು09 7/15 ಪುಟ 16 ಪ್ಯಾರ 6)
ಕುಟುಂಬ ಆರಾಧನೆಯಲ್ಲಿ ಇದನ್ನ ಮಾಡಿ: ಯೆಹೋವ ದೇವರು ನಿಮಗೆ ಹೇಗೆಲ್ಲಾ ಶಾಶ್ವತ ಪ್ರೀತಿ ತೋರಿಸಿದ್ದಾನೆ ಅಂತ ಮಾತಾಡಿ.
2. ಬೈಬಲಿನಲ್ಲಿರುವ ರತ್ನಗಳು
(10 ನಿ.)
-
ಕೀರ್ತ 64:3—ನಮ್ಮ ಮಾತು ಹೇಗಿರಬಾರದು ಅಂತ ಈ ವಚನ ಹೇಳುತ್ತೆ? (ಕಾವಲಿನಬುರುಜು07-E 11/15 ಪುಟ 15 ಪ್ಯಾರ 6)
-
ಈ ವಾರದ ಬೈಬಲ್ ಅಧ್ಯಾಯಗಳಿಂದ ನೀವೇನು ಕಲಿತ್ರಿ?
3. ಬೈಬಲ್ ಓದುವಿಕೆ
(4 ನಿ.) ಕೀರ್ತ 63:1–64:10 (ಪ್ರಗತಿ ಪಾಠ 12)
4. ಸಂಭಾಷಣೆ ಶುರುಮಾಡಿ
(2 ನಿ.) ಮನೆ-ಮನೆ ಸೇವೆ: ಬೇರೆ ಭಾಷೆ ಮಾತಾಡೋ ಮನೆಯವರು ಸಿಕ್ಕಾಗ. (ಪ್ರೀತಿಸಿ-ಕಲಿಸಿ ಪಾಠ 3 ಪಾಯಿಂಟ್ 4)
5. ಸಂಭಾಷಣೆ ಶುರುಮಾಡಿ
(2 ನಿ.) ಅನೌಪಚಾರಿಕ ಸಾಕ್ಷಿ: ಸಾಕ್ಷಿ ಕೊಡೋ ಮುಂಚೆನೇ ನಿಮ್ಮ ಮಾತನ್ನ ನಿಲ್ಲಿಸಬೇಕಾಗುತ್ತೆ. (ಪ್ರೀತಿಸಿ-ಕಲಿಸಿ ಪಾಠ 2 ಪಾಯಿಂಟ್ 4)
6. ಸಂಭಾಷಣೆ ಶುರುಮಾಡಿ
(3 ನಿ.) ಸಾರ್ವಜನಿಕ ಸಾಕ್ಷಿ: ನೀವು ಮಾತಾಡ್ತಿರೋ ವ್ಯಕ್ತಿಗೆ ಯಾವ ವಿಷ್ಯ ಇಷ್ಟ ಅಂತ ತಿಳ್ಕೊಳ್ಳಿ, ಆಮೇಲೆ ಮತ್ತೆ ಅವರನ್ನ ಭೇಟಿಯಾಗೋದ್ರ ಬಗ್ಗೆ ಮಾತಾಡಿ. (ಪ್ರೀತಿಸಿ-ಕಲಿಸಿ ಪಾಠ 1 ಪಾಯಿಂಟ್ 5)
7. ನಿಮ್ಮ ನಂಬಿಕೆ ಬಗ್ಗೆ ಹೇಳಿ
(4 ನಿ.) ಅಭಿನಯ. ijwfq ಲೇಖನ 51—ವಿಷ್ಯ: ‘ನಂಗೆ ಇದನ್ನೆಲ್ಲ ಕೇಳೋಕೆ ಇಷ್ಟ ಇಲ್ಲ’ ಅಂತ ಹೇಳಿರೋ ವ್ಯಕ್ತಿಗಳಿಗೆ ಯೆಹೋವನ ಸಾಕ್ಷಿಗಳು ಮತ್ತೆ ಯಾಕೆ ಸಾರುತ್ತಾರೆ? (ಪ್ರೀತಿಸಿ-ಕಲಿಸಿ ಪಾಠ 4 ಪಾಯಿಂಟ್ 3)
ಗೀತೆ 154
8. ನಾವು ದೇವರನ್ನ ಪ್ರೀತಿಸ್ತೀವಿ ಅಂತ ಹೇಗೆ ತೋರಿಸಬಹುದು?
(15 ನಿ.) ಚರ್ಚೆ.
ಯೆಹೋವ ನಮಗೆ “ಶಾಶ್ವತ ಪ್ರೀತಿಯನ್ನ ಧಾರಾಳವಾಗಿ” ತೋರಿಸ್ತಾನೆ. (ಕೀರ್ತ 86:15) “ಶಾಶ್ವತ ಪ್ರೀತಿ” ಅನ್ನೋದ್ರಲ್ಲಿ ಬದ್ಧತೆ, ಸಮಗ್ರತೆ, ನಿಷ್ಠೆ, ಆಪ್ತ ಬಾಂಧವ್ಯದಿಂದ ಹುಟ್ಟೋ ಪ್ರೀತಿ ಸೇರಿದೆ. ಯೆಹೋವ ಎಲ್ರನ್ನೂ ಪ್ರೀತಿಸ್ತಾನೆ, ಆದ್ರೆ ತನ್ನ ‘ಶಾಶ್ವತ ಪ್ರೀತಿಯನ್ನ’ ಯಾರಿಗೆ ಆತನ ಜೊತೆ ಒಳ್ಳೆ ಸ್ನೇಹ ಸಂಬಂಧ ಇದೆಯೋ ಅವ್ರಿಗೆ ಮಾತ್ರ ತೋರಿಸ್ತಾನೆ. (ಕೀರ್ತ 33:18; 63:3; ಯೋಹಾ 3:16; ಅಕಾ 14:17) ನಾವು ಆತನನ್ನ ಪ್ರೀತಿಸೋ ಮೂಲಕ ಆತನ ಶಾಶ್ವತ ಪ್ರೀತಿಗೆ ಋಣಿಗಳಾಗಿದ್ದೀವಿ ಅಂತ ತೋರಿಸಬಹುದು. ಅದಕ್ಕೋಸ್ಕರ ನಾವು ಏನು ಮಾಡಬೇಕು? ಯೆಹೋವ ದೇವರ ಮಾತನ್ನ ಕೇಳಬೇಕು ಮತ್ತು ಜನ್ರಿಗೆ “ಶಿಷ್ಯರಾಗೋಕೆ” ಕಲಿಸಬೇಕು.—ಮತ್ತಾ 28:19; 1ಯೋಹಾ 5:3.
ಸೇವೆಯಲ್ಲಿ ಶಾಶ್ವತ ಪ್ರೀತಿ ತೋರಿಸಿ ಅನ್ನೋ ವಿಡಿಯೋ ಹಾಕಿ. ಆಮೇಲೆ ಈ ಪ್ರಶ್ನೆಗಳನ್ನ ಕೇಳಿ:
ಈ ಕೆಳಗಿನ ಸನ್ನಿವೇಶಗಳಲ್ಲಿ ಸಿಹಿಸುದ್ದಿ ಸಾರೋಕೆ ಪ್ರೀತಿ ಹೇಗೆ ಸಹಾಯ ಮಾಡುತ್ತೆ?
-
ಸುಸ್ತಾದಾಗ
-
ವಿರೋಧ ಎದುರಾದಾಗ
-
ದಿನನಿತ್ಯದ ಕೆಲಸಗಳನ್ನ ಮಾಡೋವಾಗ
9. ಸಭಾ ಬೈಬಲ್ ಅಧ್ಯಯನ
(30 ನಿ.) ಕೂಲಂಕಷ ಸಾಕ್ಷಿ ಅಧ್ಯಾಯ 12 ಪ್ಯಾರ 14-20