ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಆಗಸ್ಟ್‌ 26–ಸೆಪ್ಟೆಂಬರ್‌ 1

ಕೀರ್ತನೆ 78

ಆಗಸ್ಟ್‌ 26–ಸೆಪ್ಟೆಂಬರ್‌ 1

ಗೀತೆ 115 ಮತ್ತು ಪ್ರಾರ್ಥನೆ | ಆರಂಭದ ಮಾತುಗಳು (1 ನಿ.)

ಬೈಬಲಿನಲ್ಲಿರುವ ನಿಧಿ

1. ಇಸ್ರಾಯೇಲ್ಯರ ತರ ನಂಬಿಕೆ ದ್ರೋಹ ಮಾಡಬೇಡಿ

(10 ನಿ.)

ಯೆಹೋವ ಇಸ್ರಾಯೇಲ್ಯರಿಗಾಗಿ ಮಾಡಿದ ಎಲ್ಲಾ ಅದ್ಭುತಗಳನ್ನ ಅವರು ಮರೆತುಬಿಟ್ರು (ಕೀರ್ತ 78:11, 42; ಕಾವಲಿನಬುರುಜು96 12/1 ಪುಟ 29-30)

ಯೆಹೋವ ಇಸ್ರಾಯೇಲ್ಯರಿಗಾಗಿ ಮಾಡಿದ ಒಳ್ಳೇ ವಿಷ್ಯಗಳಿಗೆ ಅವರು ಬೆಲೆನೇ ಕೊಡಲಿಲ್ಲ (ಕೀರ್ತ 78:19; ಕಾವಲಿನಬುರುಜು06 8/1 ಪುಟ 10 ಪ್ಯಾರ 16)

ಇಸ್ರಾಯೇಲ್ಯರು ತಾವು ಮಾಡಿದ ತಪ್ಪಿಂದ ಪಾಠ ಕಲಿಯದೇ ಪದೇ ಪದೇ ಯೆಹೋವನಿಗೆ ನಂಬಿಕೆ ದ್ರೋಹ ಮಾಡಿದ್ರು (ಕೀರ್ತ 78:40, 41, 56, 57; ಕೈಪಿಡಿಯ ರೆಫರೆನ್ಸ್‌ಗಳು (mwbr)16.07 ಪುಟ 2 ಪ್ಯಾರ 1-2)


ನಿಮ್ಮನ್ನೇ ಕೇಳ್ಕೊಳ್ಳಿ, ನಾವು ಯಾವತ್ತೂ ಯೆಹೋವನಿಗೆ ನಂಬಿಕೆ ದ್ರೋಹ ಮಾಡಬಾರದು ಅಂದ್ರೆ ಏನು ಮಾಡಬೇಕು?

2. ಬೈಬಲಿನಲ್ಲಿರುವ ರತ್ನಗಳು

(10 ನಿ.)

3. ಬೈಬಲ್‌ ಓದುವಿಕೆ

ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ

4. ಸಂಭಾಷಣೆ ಶುರುಮಾಡಿ

(3 ನಿ.) ಮನೆ-ಮನೆ ಸೇವೆ: ಬೈಬಲ್‌ ಸ್ಟಡಿ ಬಗ್ಗೆ ಹೇಳಿ. (ಪ್ರೀತಿಸಿ-ಕಲಿಸಿ ಪಾಠ 5 ಪಾಯಿಂಟ್‌ 5)

5. ಸಂಭಾಷಣೆ ಶುರುಮಾಡಿ

(3 ನಿ.) ಮನೆ-ಮನೆ ಸೇವೆ: ಕರಪತ್ರ ಕೊಟ್ಟು ಸಂಭಾಷಣೆ ಶುರು ಮಾಡಿ. ಆಮೇಲೆ ಬೈಬಲ್‌ ಸ್ಟಡಿ ಬಗ್ಗೆ ಹೇಳಿ. (ಪ್ರೀತಿಸಿ-ಕಲಿಸಿ ಪಾಠ 5 ಪಾಯಿಂಟ್‌ 4)

6. ಸಂಭಾಷಣೆ ಶುರುಮಾಡಿ

(1 ನಿ.) ಮನೆ-ಮನೆ ಸೇವೆ: ಮನೆಯವರು ‘ನೀವು ಏನು ಹೇಳಬೇಕೋ ಅದನ್ನ ಬೇಗ ಹೇಳಿ’ ಅಂತ ಕೇಳಿದಾಗ ಬೈಬಲ್‌ ಸ್ಟಡಿ ಬಗ್ಗೆ ಹೇಳಿ. (ಪ್ರೀತಿಸಿ-ಕಲಿಸಿ ಪಾಠ 2 ಪಾಯಿಂಟ್‌ 5)

7. ಸಂಭಾಷಣೆ ಶುರುಮಾಡಿ

(4 ನಿ.) ಅನೌಪಚಾರಿಕ ಸಾಕ್ಷಿ: ಬೈಬಲ್‌ ಬಗ್ಗೆ ಹೇಳದೇ ಮಾತಾಡ್ತಾ ಮಾತಾಡ್ತಾ ನೀವೊಬ್ಬ ಯೆಹೋವನ ಸಾಕ್ಷಿ ಅಂತ ಹೇಳಿ, ಆಮೇಲೆ ಬೈಬಲ್‌ ಸ್ಟಡಿ ಬಗ್ಗೆ ಹೇಳಿ. (ಪ್ರೀತಿಸಿ-ಕಲಿಸಿ ಪಾಠ 2 ಪಾಯಿಂಟ್‌ 4)

ನಮ್ಮ ಕ್ರೈಸ್ತ ಜೀವನ

ಗೀತೆ 114

8. ಸಿಹಿಸುದ್ದಿ ಸಾರುವವನಾಗಿದ್ದ ಫಿಲಿಪ್ಪನಿಂದ ಕಲಿಯಿರಿ

(15 ನಿ.) ಚರ್ಚೆ.

ಯೆಹೋವ ಬೈಬಲಿನಲ್ಲಿ ಅನೇಕ ಒಳ್ಳೆಯವರ ಮತ್ತು ಕೆಟ್ಟವರ ಉದಾಹರಣೆಗಳನ್ನ ಬರೆಸಿಟ್ಟಿದ್ದಾನೆ. ಅದ್ರಿಂದ ನಾವು ಪ್ರಯೋಜನ ಪಡ್ಕೊಬೇಕಂದ್ರೆ ಸಮಯ ಮತ್ತು ಶ್ರಮ ಹಾಕಬೇಕಾಗುತ್ತೆ ಹಾಗೂ ಕಲಿತ ಪಾಠಗಳ ಬಗ್ಗೆ ಯೋಚ್ನೆ ಮಾಡಬೇಕು ಮತ್ತು ಅದಕ್ಕೆ ತಕ್ಕ ಹಾಗೆ ನಮ್ಮ ನಡತೆಯನ್ನ ಬದಲಾಯಿಸ್ಕೊಳ್ಳಬೇಕು.

ಸಿಹಿಸುದ್ದಿ ಸಾರುವವನಾಗಿದ್ದ ಫಿಲಿಪ್ಪ “ಪವಿತ್ರಶಕ್ತಿಯನ್ನ ಪಡೆದಿರೋ ಮತ್ತು ವಿವೇಕಿಗಳಾಗಿರೋ” ವ್ಯಕ್ತಿಗಳಲ್ಲಿ ಒಬ್ಬನಾಗಿದ್ದ. (ಅಕಾ 6:3, 5) ಅವನಿಂದ ನಾವೇನು ಕಲಿಬಹುದು?

ನಮ್ಮ ನಂಬಿಕೆಗೆ ಮಾದರಿ—ಸಿಹಿಸುದ್ದಿ ಸಾರುವವನಾಗಿದ್ದ ಫಿಲಿಪ್ಪ ಅನ್ನೋ ವಿಡಿಯೋ ಹಾಕಿ. ಆಮೇಲೆ ಈ ಕೆಳಗಿನ ವಿಷ್ಯಗಳಲ್ಲಿ ಯಾವ ಪಾಠ ಕಲಿತ್ರು ಅಂತ ಸಭಿಕರನ್ನ ಕೇಳಿ:

  • ಸನ್ನಿವೇಶ ಬದಲಾದಾಗ ಫಿಲಿಪ್ಪ ಪ್ರತಿಕ್ರಿಯಿಸಿದ ರೀತಿಯಿಂದ.—ಅಕಾ 8:1, 4, 5

  • ಅಗತ್ಯ ಇರೋ ಕಡೆ ಸೇವೆ ಮಾಡಿ ಅವನಿಗೆ ಸಿಕ್ಕ ಆಶೀರ್ವಾದಗಳಿಂದ.—ಅಕಾ 8:6-8, 26-31, 34-40

  • ಅತಿಥಿಸತ್ಕಾರ ಮಾಡಿ ಫಿಲಿಪ್ಪ ಮತ್ತು ಅವನ ಕುಟುಂಬ ಪಡ್ಕೊಂಡ ಪ್ರಯೋಜನದಿಂದ.— ಅಕಾ 21:8-10

  • ವಿಡಿಯೋದಲ್ಲಿದ್ದ ಕುಟುಂಬ ಫಿಲಿಪ್ಪನ ಮಾದರಿಯನ್ನ ಅನುಕರಿಸಿ ಪಡ್ಕೊಂಡ ಸಂತೋಷದಿಂದ

9. ಸಭಾ ಬೈಬಲ್‌ ಅಧ್ಯಯನ

ಸಮಾಪ್ತಿ ಮಾತುಗಳು (3 ನಿ.) | ಗೀತೆ 53 ಮತ್ತು ಪ್ರಾರ್ಥನೆ