ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಮ್ಮ ಕ್ರೈಸ್ತ ಜೀವನ

ಕುಟುಂಬದ ಖುಷಿಗೆ ನೀವೇನು ಮಾಡಬಹುದು?

ಕುಟುಂಬದ ಖುಷಿಗೆ ನೀವೇನು ಮಾಡಬಹುದು?

ಎಲ್ಲ ಕುಟುಂಬಗಳು ಖುಷಿಯಾಗಿರಬೇಕು ಅನ್ನೋದೇ ಯೆಹೋವನ ಇಷ್ಟ. (ಕೀರ್ತ 127:3-5; ಪ್ರಸಂ 9:9; 11:9) ಆದ್ರೆ ನಮಗಿರೋ ಒತ್ತಡ ಮತ್ತು ಸಮಸ್ಯೆಗಳಿಂದ ಕೆಲವೊಮ್ಮೆ ಖುಷಿಯನ್ನ ಕಳ್ಕೊಳ್ತೀವಿ. ಕುಟುಂಬ ಖುಷಿಯಾಗಿರೋಕೆ ಪ್ರತಿಯೊಬ್ಬರೂ ಏನು ಮಾಡಬಹುದು?

ಗಂಡ ಹೆಂಡತಿಗೆ ಗೌರವ ಕೊಡ್ತಾನೆ. (1ಪೇತ್ರ 3:7) ಅವಳ ಜೊತೆ ಸಮಯ ಕಳೀತಾನೆ. ತನಗೆ ಮತ್ತು ಕುಟುಂಬಕ್ಕೆ ಅವಳು ಮಾಡೋ ತ್ಯಾಗವನ್ನ ಅರ್ಥಮಾಡ್ಕೊಳ್ತಾನೆ, ಮೆಚ್ತಾನೆ. (ಕೊಲೊ 3:15) ‘ನಿನ್ನನ್ನ ಪ್ರೀತಿಸ್ತೀನಿ’ ಅಂತ ಗಂಡ ಹೇಳ್ತಾನೆ ಮತ್ತು ಹೊಗಳ್ತಾನೆ.—ಜ್ಞಾನೋ 31:28, 31.

ಗಂಡನಿಗೆ ಹೇಗೆಲ್ಲ ಬೆಂಬಲ ಕೊಡಬಹುದು ಅಂತ ಹೆಂಡತಿ ಯೋಚಿಸ್ತಾ ಇರ್ತಾಳೆ. (ಜ್ಞಾನೋ 31:12) ಗಂಡನಿಗೆ ಅಧೀನಳಾಗಿ ಇರ್ತಾಳೆ, ಅವನಿಗೆ ಸಹಕರಿಸ್ತಾಳೆ. (ಕೊಲೊ 3:18) ಅವನ ಹತ್ರ ದಯೆ, ಕನಿಕರದಿಂದ ಮಾತಾಡ್ತಾಳೆ ಮತ್ತು ಬೇರೆಯವರ ಹತ್ರ ಅವನ ಬಗ್ಗೆ ಕೆಟ್ಟದಾಗಿ ಮಾತಾಡಲ್ಲ.—ಜ್ಞಾನೋ 31:26.

ಹೆತ್ತವರು ಮಕ್ಕಳ ಜೊತೆ ಸಮಯ ಕಳೀತಾರೆ. (ಧರ್ಮೋ 6:6, 7) ಮಕ್ಕಳ ಮೇಲೆ ಅವರಿಗಿರೋ ಪ್ರೀತಿಯನ್ನ ಮನಸ್ಸಲ್ಲೇ ಇಟ್ಟುಕೊಳ್ಳದೆ ಅವರ ಹತ್ರ ಹೇಳ್ತಾರೆ. (ಮತ್ತಾ 3:17) ಅವರಿಗೆ ಕಲಿಸುವಾಗ ಪ್ರೀತಿ ಮತ್ತು ವಿವೇಚನೆ ತೋರಿಸ್ತಾರೆ.—ಎಫೆ 6:4.

ಮಕ್ಕಳು ಹೆತ್ತವರು ಹೇಳಿದ ಮಾತನ್ನ ಕೇಳ್ತಾರೆ ಮತ್ತು ಅವರನ್ನ ಗೌರವಿಸ್ತಾರೆ. (ಜ್ಞಾನೋ 23:22) ಮನಸ್ಸಲ್ಲಿರೋದನ್ನ, ಭಾವನೆಗಳನ್ನ ಹೆತ್ತವರ ಹತ್ರ ಹೇಳ್ಕೊತಾರೆ. ಹೆತ್ತವರು ಶಿಸ್ತು ಕೊಡುವಾಗ ಬೇಜಾರ್‌ ಮಾಡ್ಕೊಳ್ಳಲ್ಲ, ಅವರ ಮಾತಿಗೆ ಬೆಲೆ ಕೊಡ್ತಾರೆ.—ಜ್ಞಾನೋ 19:20.

ಕುಟುಂಬ ಖುಷಿಯಿಂದ ಅರಳಲು ಅನ್ನೋ ವಿಡಿಯೋ ನೋಡಿ ಈ ಪ್ರಶ್ನೆಗೆ ಉತ್ತರ ಕೊಡಿ:

ಕುಟುಂಬ ಖುಷಿಯಿಂದ ಅರಳೋಕೆ ಪ್ರತಿಯೊಬ್ಬರು ಏನು ಮಾಡಿದ್ರು?